HomeIndiaಪ್ರಕರಣ ಬೇಧಿಸಲು ಹೋಗಿ ಒಡಿಶಾ ಪೊಲೀಸರಿಂದ ಅರೆಸ್ಟ್ ಆದ ಕರ್ನಾಟಕ ಪೊಲೀಸ್

ಪ್ರಕರಣ ಬೇಧಿಸಲು ಹೋಗಿ ಒಡಿಶಾ ಪೊಲೀಸರಿಂದ ಅರೆಸ್ಟ್ ಆದ ಕರ್ನಾಟಕ ಪೊಲೀಸ್

ಬೆಂಗಳೂರು: ಕರ್ನಾಟಕ ಪೊಲೀಸ್ ಸಿಬ್ಬಂದಿಯನ್ನೇ ಒಡಿಶಾ ಪೊಲೀಸರು ಬಂಧಿಸಿ ಜೈಲಿಗಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಗಾಂಜಾ ಪ್ರಕರಣದ ಬೆನ್ನತ್ತಿದ್ದ ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿ ಪೊಲೀಸರು ಒಡಿಶಾಗೆ ತೆರಳಿ ಆರೋಪಿಗಳ ಹುಡುಕಾಟ ನಡೆಸಿದ್ದರು. ಈ ವೇಳೆ ಜಿಗಣಿ ಠಾಣೆ ಕಾನ್ಸ್ ಟೇಬಲ್ ಆನಂದ್ ಎಂಬುವವರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಎ ಎಸ್ ಐ ಅಪ್ಪಾಜಿಗೌಡ, ಸಿಬ್ಬಂದಿ ಆನಂದ್, ಚನ್ನಬಸಪ್ಪ ಹಾಗೂ ದೀಪು ಎಂಬುವವರು ಒಡಿಶಾಗೆ ತೆರಳಿ ಕಾಡಿನಲ್ಲಿ ತೆರಳಿ ಪ್ರಕರಣ ಬೇಧಿಸಲು ಮುಂದಾಗಿದ್ದರು. ಗಾಂಜಾ ಹಿಡಿದು ಹೊರಬರುತ್ತಿದ್ದಂತೆ ಕಾನ್ಸ್ ಟೇಬಲ್ ಆನಂದ್ ಅವರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ನಾವು ಪೊಲೀಸರು ಎಂದು ಹೇಳಿದರೂ ಬಿಟ್ಟಿಲ್ಲ. ಇದರಿಂದ ಜಿಗಣಿ ಇನ್ಸ್ ಪೆಕ್ಟರ್ ಮಂಜುನಾಥ್ ಒಡಿಶಾಗೆ ತೆರಳಿದ್ದು, ಕಾನ್ಸ್ ಟೇಬಲ್ ಆನಂದ್ ಬಿಡುಗಡೆಗಾಗಿ ಕಾನೂನು ಪ್ರಕ್ರಿಯೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular