HomeKarnatakaಹಿಂದುಳಿದ ತಾಲೂಕುಗಳಲ್ಲಿ ಕೈಗಾರಿಕಾ ಬೆಳವಣಿಗೆಗೆ ಮಹತ್ವದ ಕ್ರಮ: ವೇಗ, ಪಾರದರ್ಶಕ ಹೂಡಿಕೆಗೆ ಪೂರಕ ವಾತಾವರಣ ನಿರ್ಮಾಣ:...

ಹಿಂದುಳಿದ ತಾಲೂಕುಗಳಲ್ಲಿ ಕೈಗಾರಿಕಾ ಬೆಳವಣಿಗೆಗೆ ಮಹತ್ವದ ಕ್ರಮ: ವೇಗ, ಪಾರದರ್ಶಕ ಹೂಡಿಕೆಗೆ ಪೂರಕ ವಾತಾವರಣ ನಿರ್ಮಾಣ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಹೂಡಿಕೆಗಳನ್ನು ಆಕರ್ಷಿಸಲು, ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹಾಗೂ ಜಾಗತಿಕ ಗುಣಮಟ್ಟದ ಉತ್ಪಾದನಾ ಸಾಮರ್ಥ್ಯವನ್ನು ಬೆಳೆಸಲು ಕರ್ನಾಟಕವು ತನ್ನ ಕೈಗಾರಿಕಾ ರಂಗವನ್ನು ಬಲಪಡಿಸುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವೇಗದ, ಪಾರದರ್ಶಕ ಮತ್ತು ಹೂಡಿಕೆಗೆ ಪೂರಕವಾದ ಕೈಗಾರಿಕಾ ವಾತಾವರಣವನ್ನು ನಿರ್ಮಿಸಿ, ಮೂಲಸೌಕರ್ಯಗಳನ್ನು ವೃದ್ಧಿಸಿ ಹಾಗೂ ಕಾರ್ಮಿಕರ ಹಿತ ಕಾಯುವ ಮೂಲಕ ರಾಜ್ಯಾದ್ಯಂತ ಸಮತೋಲಿತ ಆರ್ಥಿಕ ಪ್ರಗತಿ ಸಾಧಿಸಲು ಸರ್ಕಾರ ದಾಪುಗಾಲು ಇಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಜವಳಿ ನೀತಿಯಡಿ ಕರ್ನಾಟಕದ ಜವಳಿ ಉತ್ಪಾದನಾ ವಲಯಕ್ಕೆ ಮತ್ತಷ್ಟು ಬಲ ನೀಡಲಾಗಿದ್ದು, ಹೊಸ ಹೂಡಿಕೆಗಳನ್ನು ಆಕರ್ಷಿಸಿ, ಜವಳಿ ಉತ್ಪಾದನಾ ವ್ಯವಸ್ಥೆ ಬಲಪಡಿಸಲು ಜವಳಿ ನೀತಿ ಜಾರಿ ಮಾಡಲಾಗಿದೆ. ರೇಷ್ಮೆ ನೂಲು ತಯಾರಿಕೆಯನ್ನು ಜವಳಿ ನೀತಿಯಡಿ ಕೈಗಾರಿಕೆಯಾಗಿ ಗುರುತಿಸುವಿಕೆ, ಸ್ಪರ್ಧಾತ್ಮಕತೆ, ಉದ್ಯೋಗಾವಕಾಶ ಹೆಚ್ಚಿಸಿ ಕರ್ನಾಟಕವನ್ನು ಪ್ರಮುಖ ಜವಳಿ ಮತ್ತು ಉಡುಪು ತಯಾರಿಕಾ ಕೇಂದ್ರವಾಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೀನ್ಸ್ ಕೈಗಾರಿಕೆಗೆ ವಿಶೇಷ ವಲಯ ಸ್ಥಾಪನೆ ನಿಟ್ಟಿನಲ್ಲಿ ಬಳ್ಳಾರಿಯ ಸಂಜೀವರಾಯನಕೋಟೆ ಕೈಗಾರಿಕಾ ಪ್ರದೇಶವನ್ನು ಜೀನ್ಸ್ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣ, ಜವಳಿ ಕೈಗಾರಿಕೆಗಳಿಗೆ ನಿವೇಶನಗಳು, ಸಾಮಾನ್ಯ ತ್ಯಾಜ್ಯ ನೀರು ಶುದ್ದೀಕರಣ ಘಟಕ (CETP) ಸೇರಿದಂತೆ ಮೂಲಸೌಕರ್ಯ ವ್ಯವಸ್ಥೆ, ಜೀನ್ಸ್ ಘಟಕಗಳ ಸ್ಥಳಾಂತರಕ್ಕೆ ವಿಶೇಷ ಪ್ಯಾಕೇಜ್, ರಫ್ತು ಹಾಗೂ ಉದ್ಯೋಗಕ್ಕೆ ಉತ್ತೇಜನ ನೀಡಲಾಗಿದೆ.

ಹೂಡಿಕೆ ಉತ್ತೇಜನ ಪ್ಯಾಕೇಜ್ ನೀಡಿ ಹಿಂದುಳಿದ ತಾಲೂಕುಗಳಲ್ಲಿ ಕೈಗಾರಿಕಾ ಬೆಳವಣಿಗೆ ಮರುರೂಪಿಸುವುದು, ಜಾಗತಿಕ ಹೂಡಿಕೆದಾರರ ಸಭೆ, ಇನ್ವೆಸ್ಟ್ ಕರ್ನಾಟಕ ಮೂಲಕ ಹೊಸ ತಲೆಮಾರಿನ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಸವಲತ್ತು ಹಾಗೂ ರಿಯಾಯಿತಿಗಳು, ರಾಜ್ಯದ ಕೈಗಾರಿಕಾ ಹಿಂದುಳಿದ ತಾಲೂಕುಗಳಲ್ಲಿ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವುದು, ಹೊಸ ಬಂಡವಾಳದಿಂದ ಸ್ಥಳೀಯರಿಗೆ ಕೆಲಸ, ಎಲ್ಲ ಪ್ರದೇಶಗಳಿಗೂ ಸಮಾನ ಕೈಗಾರಿಕಾ ಪ್ರಗತಿ, ತ್ವರಿತ ಅನುಮೋದನೆ ಮತ್ತು ಹೂಡಿಕೆಗೆ ಆದ್ಯತೆ ನೀಡಲಾಗಿದೆ.

100 ದಿನಗಳಲ್ಲಿ ₹43,214 ಕೋಟಿ ಹೂಡಿಕೆ, ಸಿಂಗಲ್ ವಿಂಡೋ ಮೂಲಕ 100 ದಿನಗಳಲ್ಲಿ ₹43,214 ಕೋಟಿ ಮೌಲ್ಯದ ಉದ್ಯಮ ಯೋಜನೆಗಳಿಗೆ ತ್ವರಿತ ಅನುಮತಿ, » ಬಾಕಿ ಇರುವ ಎಲ್ಲಾ ಹೂಡಿಕೆ ಅರ್ಜಿಗಳನ್ನು ತಕ್ಷಣ ಪರಿಶೀಲಿಸಿ ಶೀಘ್ರ ತೀರ್ಮಾನ, ಉದ್ಯಮ ಸ್ನೇಹಿ ವಾತಾವರಣವನ್ನು ನಿರ್ಮಿಸಿ, ಹೂಡಿಕೆ ಯೋಜನೆಗಳ ಅನುಷ್ಠಾನಕ್ಕೆ ಹೊಸ ವೇಗ ನೀಡಲಾಗಿದೆ.

ನಾಡಿನ ಜನತೆಗೆ ಸಿಎಂ ಡಿಕೆ ಶಿವಕುಮಾರ್ ಶುಭಾಶಯ

ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಶುಭಾಶಯ ತಿಳಿಸಿದ್ದಾರೆ.

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ವಿಘ್ನವಿನಾಶಕ ಗಣಪತಿಯ ಆಶೀರ್ವಾದದಿಂದ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಿ, ಎಲ್ಲೆಡೆ ಸುಖ-ಶಾಂತಿ ಹಾಗೂ ಸಮೃದ್ಧಿ ನೆಲೆಸಲಿ. ಗ್ಯಾರಂಟಿ ಯೋಜನೆಗಳ ಮೂಲಕ ಕೋಟ್ಯಂತರ ಮನೆಗಳಲ್ಲಿ ಮೂಡಿರುವ ನೆಮ್ಮದಿಯ ಬೆಳಕು ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಲಿ.

ಮೊದಲು ಪೂಜಿಸಲ್ಪಡುವ ತಾಯಿ ಗೌರಿಯ ರೂಪವಾದ ನಾಡಿನ ಸಮಸ್ತ ತಾಯಂದಿರಿಗೂ ವಿಶೇಷ ನಮನಗಳು.

ಪರಿಸರ ಸ್ನೇಹಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸೋಣ. ಹಬ್ಬದ ಆಚರಣೆ ಮತ್ತು ವಿಸರ್ಜನೆಯ ವೇಳೆ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular