HomeKarnatakaಇನ್ನು KHB ಭೂ ಅನುಪಾತ ಏಕರೂಪತೆ ಇಲ್ಲ: ಪಾಲುದಾರಿಕೆಯಲ್ಲಿ ವಸತಿ ಯೋಜನೆಗೆ ಭೂಮೌಲ್ಯ ಆಧರಿಸಿ ಅನುಪಾತ...

ಇನ್ನು KHB ಭೂ ಅನುಪಾತ ಏಕರೂಪತೆ ಇಲ್ಲ: ಪಾಲುದಾರಿಕೆಯಲ್ಲಿ ವಸತಿ ಯೋಜನೆಗೆ ಭೂಮೌಲ್ಯ ಆಧರಿಸಿ ಅನುಪಾತ ನಿಗದಿ

ಬೆಂಗಳೂರು: ಇನ್ನು ಮುಂದೆ ಕರ್ನಾಟಕ ಗೃಹ ಮಂಡಳಿ ಭೂ ಅನುಪಾತ ಏಕರೂಪದಲ್ಲಿ ಇರುವುದಿಲ್ಲ. ಪಾಲುದಾರಿಕೆಯಲ್ಲಿ ಭೂಮಿ ಪಡೆದು ವಸತಿ ಯೋಜನೆಗೆ ಭೂ ಮೌಲ್ಯವನ್ನಾಧರಿಸಿ ಅನುಪಾತ ನಿಗದಿ ಮಾಡಲಾಗುವುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ಗೃಹ ಮಂಡಳಿಯಿಂದ ಅನುಪಾತದ ಪಾಲುದಾರಿಕೆ ಅಡಿಯಲ್ಲಿ ಭೂಮಿ ಪಡೆದು ಅನುಷ್ಠಾನ ಮಾಡುವ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಭೂ ಮಾಲೀಕರ ಜೊತೆ ಮಾಡಿಕೊಳ್ಳುವ ಅನುಪಾತವನ್ನು ಆಯಾ ಪ್ರದೇಶ ಯೋಜನೆಯ ಆಧಾರದಲ್ಲಿ ನಿಗದಿಪಡಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈಸೂರು, ಬೆಂಗಳೂರು, ಹುಬ್ಬಳ್ಳಿ -ಧಾರವಾಡ ಮೊದಲಾದ ನಗರ ಪ್ರದೇಶಗಳಲ್ಲಿ ಜಮೀನುಗಳ ಮೌಲ್ಯ ಹಾಗೂ ಗ್ರಾಮೀಣ ಪ್ರದೇಶದ ಜಮೀನುಗಳ ಮೌಲ್ಯ ಭಿನ್ನವಾಗಿರುವುದರಿಂದ ಅನುಪಾತದ ಪಾಲುದಾರಿಕೆ ಅಡಿಯಲ್ಲಿ ಭೂಮಿ ಪಡೆದು ವಸತಿ ಯೋಜನೆ ಅನುಷ್ಠಾನ ಮಾಡುವ ಸಂದರ್ಭದಲ್ಲಿ ಪ್ರತಿ ನಗರಕ್ಕೆ ಒಂದೊಂದು ಅನುಪಾತ ನಿಗದಿಪಡಿಸಬೇಕಿದೆ.

ಗೃಹ ಮಂಡಳಿ ಯೋಜನೆಗಳಿಗೆಲ್ಲ ಒಂದೇ ರೀತಿಯ ಸಾಮಾನ್ಯ ನೀತಿ ರೂಪಿಸದೆ ಆಯಾ ಪ್ರದೇಶದ ಮೌಲ್ಯವನ್ನಾಧರಿಸಿ ಅನುಪಾತ ನಿಗದಿ ಮಾಡಿ ಭೂಮಾಲೀಕರೊಂದಿಗೆ ಭೂಮಿ ಪಡೆದು ವಸತಿ ಯೋಜನೆ ಅನುಷ್ಠಾನಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular