HomeKarnatakaಕರ್ನಾಟಕದಲ್ಲಿ 'ಮರ್ಯಾದೆ ಗೇಡು' ಹತ್ಯೆಗೆ 5 ವರ್ಷ ಜೈಲು ಶಿಕ್ಷೆ ಫಿಕ್ಸ್ ; 'ಇವ ನಮ್ಮವ...

ಕರ್ನಾಟಕದಲ್ಲಿ ‘ಮರ್ಯಾದೆ ಗೇಡು’ ಹತ್ಯೆಗೆ 5 ವರ್ಷ ಜೈಲು ಶಿಕ್ಷೆ ಫಿಕ್ಸ್ ; ‘ಇವ ನಮ್ಮವ ಇವ ನಮ್ಮವ’ ಮಸೂದೆ ಮಂಡನೆ.!

ಜಾತಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ‘ಮರ್ಯಾದೆಗೇಡು ಹತ್ಯೆ’ (Honour Killing) ಹಾಗೂ ದೌರ್ಜನ್ಯಗಳನ್ನು ತಡೆಯಲು ಕರ್ನಾಟಕ ಸರ್ಕಾರವು ಅತ್ಯಂತ ಕಟ್ಟುನಿಟ್ಟಿನ ಕಾಯಿದೆಯನ್ನು ಜಾರಿಗೆ ತಂದಿದೆ. 12ನೇ ಶತಮಾನದ ಬಸವಣ್ಣನವರ “ಇವ ನಮ್ಮವ ಇವ ನಮ್ಮವ” ಎಂಬ ವಿಶ್ವಮಾನವ ಸಂದೇಶದ ಸಾಲುಗಳನ್ನೇ ಈ ವಿಧೇಯಕಕ್ಕೆ ಹೆಸರಾಗಿ ಇಡಲಾಗಿದೆ. ಈ ವಿಧೇಯಕವನ್ನು ಸಚಿವ ಪ್ರಿಯಾಂಕ್ ಖರ್ಗೆ ನಿನ್ನೆ ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದರು.

ಈ ಕಾಯ್ದೆಯಡಿ ಮರ್ಯಾದಾ ಹತ್ಯೆ ಮಾಡುವವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ದಂಪತಿಗೆ ಕಿರುಕುಳ ನೀಡುವವರಿಗೆ ಭಾರಿ ದಂಡ ವಿಧಿಸುವ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಹೌದು. ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ಎದುರಾಗುವ ಸಾಮಾಜಿಕ ಬಹಿಷ್ಕಾರ, ಕಿರುಕುಳ ಮತ್ತು ಮರ್ಯಾದಾ ಹತ್ಯೆಗಳಂತಹ ಘಟನೆಗಳನ್ನು ತಡೆಯಲು ಕರ್ನಾಟಕ ಸರ್ಕಾರವು ವಿಧಾನಸಭೆಯಲ್ಲಿ ಈ ಹೊಸ ವಿಧೇಯಕವನ್ನು ಮಂಡಿಸಿದೆ.

ಅಂತರ್ಜಾತಿ ಮದುವೆಯಾದವರಿಗೆ ಸಾಮಾಜಿಕ ಅಥವಾ ಆರ್ಥಿಕ ಬಹಿಷ್ಕಾರ ಹಾಕುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ. ದಂಪತಿಯನ್ನು ಅವರ ವಾಸಸ್ಥಳದಿಂದ ಹೊರಹಾಕುವಂತೆ ಒತ್ತಾಯಿಸುವುದು ಅಪರಾಧವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  1. ‘ಇವ ನಮ್ಮವ ಇವ ನಮ್ಮವ’ ವಿಧೇಯಕ-2026: ಮರ್ಯಾದಾ ಹತ್ಯೆ (Honour Killing) ಮತ್ತು ಅಂತರ್ಜಾತಿ ವಿವಾಹಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಸಚಿವ ಸಂಪುಟವು ಈ ವಿಶೇಷ ವಿಧೇಯಕಕ್ಕೆ ಅನುಮೋದನೆ ನೀಡಿದೆ.
    • ಜೀವಾವಧಿ ಶಿಕ್ಷೆ: ಜಾತಿ ಕಾರಣಕ್ಕಾಗಿ ಮರ್ಯಾದಾ ಹತ್ಯೆ ಮಾಡುವವರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ.
  2. • ದೈಹಿಕ ಹಲ್ಲೆಗೆ ದಂಡನೆ: ಅಂತರ್ಜಾತಿ ವಿವಾಹಿತರ ಮೇಲೆ ಹಲ್ಲೆ ನಡೆಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
  3. • ಮೋಸದ ಮದುವೆಗೆ ಶಿಕ್ಷೆ: ವಿವಾಹದ ಆಮಿಷವೊಡ್ಡಿ ಲೈಂಗಿಕ ಸಂಪರ್ಕ ಬೆಳೆಸಿ, ನಂತರ ಜಾತಿಯ ಕಾರಣ ನೀಡಿ ಮದುವೆಗೆ ನಿರಾಕರಿಸಿದರೆ ಅದನ್ನು ‘ಅತ್ಯಾಚಾರ’ ಎಂದು ಪರಿಗಣಿಸಿ ಕಠಿಣ ಶಿಕ್ಷೆ ನೀಡಲಾಗುವುದು.
  4. ಸಾಮಾಜಿಕ ಬಹಿಷ್ಕಾರಕ್ಕೆ ಬ್ರೇಕ್: ಅಂತರ್ಜಾತಿ ಮದುವೆಯಾದ ಕಾರಣಕ್ಕೆ ಕುಟುಂಬ ಅಥವಾ ದಂಪತಿಯನ್ನು ಊರಿನಿಂದ ಹೊರಹಾಕುವುದು, ಸಾಮಾಜಿಕವಾಗಿ ಬಹಿಷ್ಕರಿಸುವುದು ಅಥವಾ ಆರ್ಥಿಕವಾಗಿ ತೊಂದರೆ ಕೊಡುವುದನ್ನು ಈ ಕಾಯ್ದೆ ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.
  5. ಹಣಕಾಸಿನ ನೆರವು (Incentives): ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಲು ಸರ್ಕಾರವು ಆರ್ಥಿಕ ಸಹಾಯವನ್ನೂ ನೀಡುತ್ತಿದೆ:
    • ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡದ (ST) ವ್ಯಕ್ತಿಯನ್ನು ಅನ್ಯ ಜಾತಿಯವರು ಮದುವೆಯಾದರೆ, ಅಂತಹ ದಂಪತಿಗಳಿಗೆ ಅವರ ವಾರ್ಷಿಕ ಆದಾಯದ ಮಿತಿಯ ಆಧಾರದ ಮೇಲೆ 50,000 ರೂ.ನಿಂದ 5 ಲಕ್ಷ ರೂ.ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ.
  6. ರಕ್ಷಣೆ ಮತ್ತು ಭದ್ರತೆ: ಜೀವ ಬೆದರಿಕೆ ಇರುವ ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಪೊಲೀಸ್ ಇಲಾಖೆಯ ಮೂಲಕ ವಿಶೇಷ ರಕ್ಷಣೆ ಒದಗಿಸಲು ಮತ್ತು ಅವರಿಗಾಗಿ ‘ಸುರಕ್ಷಿತ ಮನೆ’ಗಳನ್ನು (Safe Houses) ಸ್ಥಾಪಿಸಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
  • ಸ್ವತಂತ್ರ ವಿವಾಹ: ಇಬ್ಬರು ವಯಸ್ಕರು ವಿವಾಹವಾಗಲು ಪೋಷಕರ ಒಪ್ಪಿಗೆಯ ಅಗತ್ಯವಿಲ್ಲ ಎಂದು ವಿಧೇಯಕ ಸ್ಪಷ್ಟಪಡಿಸಿದೆ.
    *ಧಾರ್ಮಿಕ ಮತ್ತು ಆಸ್ತಿ ಹಕ್ಕು: ಅಂತರ್ಜಾತಿ ವಿವಾಹಿತರಿಗೆ ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ ಮತ್ತು ಕುಟುಂಬದ ಆಸ್ತಿಯಿಂದ ಅವರನ್ನು ವಂಚಿಸುವಂತಿಲ್ಲ.
    *ಕಿರುಕುಳಕ್ಕೆ ತಡೆ: ದಂಪತಿಗೆ ಕೆಲಸ ನೀಡಲು ನಿರಾಕರಿಸುವುದು, ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದು ಅಥವಾ ಅವರಿಗೆ ಸಹಕಾರ ನೀಡುವವರನ್ನು ಬಹಿಷ್ಕರಿಸುವುದು ಶಿಕ್ಷಾರ್ಹ ಅಪರಾಧ.
    *ದೈಹಿಕ ಹಿಂಸೆ ಮತ್ತು ಮರ್ಯಾದಾ ಹತ್ಯೆ: ಬಲವಂತದ ಗರ್ಭಪಾತಕ್ಕೆ ಒತ್ತಡ ಹೇರುವುದು ಅಥವಾ ದಂಪತಿಯನ್ನು ಬೇರ್ಪಡಿಸಿ ಬೇರೆ ಮದುವೆ ಮಾಡಿಸುವುದು ಅಪರಾಧ. ಮರ್ಯಾದಾ ಹತ್ಯೆ ಮಾಡಿದರೆ 5 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
    *ಶಿಕ್ಷೆಯ ಪ್ರಮಾಣ: ದಂಪತಿಯನ್ನು ಗಾಯಗೊಳಿಸಿದರೆ 3 ಲಕ್ಷ ರೂ. ದಂಡ ಮತ್ತು 3 ವರ್ಷ ಜೈಲು, ಬೆದರಿಕೆ ಹಾಕಿದರೆ 5 ರಿಂದ 7 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ.
    *ಗೌಪ್ಯತೆ: ವಿವಾಹಿತ ಜೋಡಿಯ ವಿಚಾರದಲ್ಲಿ ಸಾಕ್ಷಿಗಳ ಗುರುತು ಮತ್ತು ವಿಳಾಸವನ್ನು ಬಹಿರಂಗಪಡಿಸುವಂತಿಲ್ಲ.

ಮರ್ಯಾದೆಗೇಡು ಹತ್ಯೆಗೆ ಕಠಿಣ ಶಿಕ್ಷೆ: ಮರ್ಯಾದೆ ಅಥವಾ ಸಂಪ್ರದಾಯದ ಹೆಸರಿನಲ್ಲಿ ದಂಪತಿ ಅಥವಾ ಅವರಲ್ಲಿ ಯಾರನ್ನಾದರೂ ಹತ್ಯೆ ಮಾಡಿದರೆ, ಅಪರಾಧಿಗಳಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಈ ವಿಧೇಯಕದಲ್ಲಿ ಅವಕಾಶವಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular