HomeKarnatakaರಾಜ್ಯದ ಕಾರ್ಮಿಕರಿಗೆ 'Cess' ಸಂಗ್ರಹ, ಹೊಸ ಕ್ಷೇಮಾಭಿವೃದ್ಧಿ ಬಿಲ್

ರಾಜ್ಯದ ಕಾರ್ಮಿಕರಿಗೆ ‘Cess’ ಸಂಗ್ರಹ, ಹೊಸ ಕ್ಷೇಮಾಭಿವೃದ್ಧಿ ಬಿಲ್

ಬೆಂಗಳೂರು-ರಾಜ್ಯದಲ್ಲಿ ಚಲನಚಿತ್ರ ರಂಗ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸಾವಿರಾರು ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಬಹುನಿರೀಕ್ಷಿತ ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಅಧಿನಿಯಮ, 2024’ ಕಾಯ್ದೆಯು ಇದೇ ಬರುವ ಸೆಪ್ಟೆಂಬರ್ 30, 2026 ರಿಂದ ರಾಜ್ಯಾದ್ಯಂತ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಕುರಿತು ಕಾರ್ಮಿಕ ಇಲಾಖೆಯು ಅಧಿಸೂಚನೆ (ಸಂಖ್ಯೆ: No.920) ಹೊರಡಿಸಿದೆ.

2024 ರಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಈ ಕಾಯ್ದೆಯ ವಿಧೇಯಕವನ್ನು ಮಂಡಿಸಿ, ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತ್ತು. ತದನಂತರ 2024ರ ಸೆಪ್ಟೆಂಬರ್ 23 ರಂದು ರಾಜ್ಯಪಾಲರು ಈ ವಿಧೇಯಕಕ್ಕೆ ಅಂಕಿತ ಹಾಕಿದ್ದರು ಹಾಗೂ ಸೆಪ್ಟೆಂಬರ್ 24, 2024 ರಂದು ಇದನ್ನು ರಾಜ್ಯಪತ್ರದಲ್ಲಿ (Gazette Notification) ಪ್ರಕಟಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದಾಗ್ಯೂ, ನಿಯಮಗಳ ರಚನೆ ಮತ್ತು ತಾಂತ್ರಿಕ ಪ್ರಕ್ರಿಯೆಗಳಿಂದಾಗಿ ಜಾರಿಗೆ ಬರಲು ಎರಡು ವರ್ಷಗಳ ಕಾಲ ವಿಳಂಬವಾಗಿತ್ತು. ಇದೀಗ ಸರ್ಕಾರ ಜಾರಿ ದಿನಾಂಕವನ್ನು ನಿಗದಿಪಡಿಸುವುದರೊಂದಿಗೆ ಕಾಯ್ದೆ ಅನುಷ್ಠಾನಕ್ಕೆ ಕಾಲಕೂಡಿ ಬಂದಿದೆ.

ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪನೆ

ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪನೆ:

ಚಲನಚಿತ್ರ ಹಾಗೂ ರಂಗಭೂಮಿ, ಸಾಂಸ್ಕೃತಿಕ ಕ್ಷೇತ್ರದ ಅಸಂಘಟಿತ ಕಾರ್ಯಕರ್ತರಿಗಾಗಿ ಪ್ರತ್ಯೇಕ ಕ್ಷೇಮಾಭಿವೃದ್ಧಿ ಮಂಡಳಿ ರಚನೆಯಾಗಲಿದೆ.

ಸಾಮಾಜಿಕ ಭದ್ರತೆ:

ಚಲನಚಿತ್ರೀಕರಣ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಯದಲ್ಲಿ ಆಕಸ್ಮಿಕ ಅಪಘಾತಕ್ಕೊಳಗಾಗುವ, ಆರೋಗ್ಯ ಸಮಸ್ಯೆ ಎದುರಿಸುವ ಕಾರ್ಯಕರ್ತರಿಗೆ ಪಿಂಚಣಿ, ವೈದ್ಯಕೀಯ ಧನಸಹಾಯ ಮತ್ತು ಇತರೆ ಭದ್ರತೆಗಳನ್ನು ಕಲ್ಪಿಸುವುದು ಇದರ ಮೂಲ ಉದ್ದೇಶವಾಗಿದೆ.

ಸೆಸ್ (Cess) ಸಂಗ್ರಹ ಹೇಗೆ?

ಸೆಸ್ (Cess) ಸಂಗ್ರಹ ಹೇಗೆ?

ಈ ಕ್ಷೇಮಾಭಿವೃದ್ಧಿ ಮಂಡಳಿಯ ನಿಧಿ ಸಂಗ್ರಹಕ್ಕಾಗಿ ಸರ್ಕಾರವು ಸಿನಿಮಾ ಟಿಕೆಟ್‌ಗಳು ಹಾಗೂ ಸಂಬಂಧಿತ ಆದಾಯದ ಮೇಲೆ “ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಉಪಕರ” (Cess) ವಿಧಿಸಲು ತೀರ್ಮಾನಿಸಿದೆ.

ಸೆಸ್ ಪ್ರಮಾಣ:

ಸಿನಿಮಾ ಟಿಕೆಟ್‌ ದರ, ಚಂದಾದಾರಿಕೆ ಶುಲ್ಕ (OTT / Subscription Fees) ಮತ್ತು ಸಂಬಂಧಿತ ಸಂಸ್ಥೆಗಳ ಮೂಲದಿಂದ ಜನ್ಯವಾಗುವ ಆದಾಯದ ಮೇಲೆ ಕನಿಷ್ಠ ಶೇ. 1 ರಿಂದ ಗರಿಷ್ಠ ಶೇ. 2 ರವರೆಗೆ ಸೆಸ್ ವಿಧಿಸಲಾಗುತ್ತದೆ.

ಟಿಕೆಟ್ ದರದ ಸ್ಪಷ್ಟತೆ

ಟಿಕೆಟ್ ದರದ ಸ್ಪಷ್ಟತೆ:

ಸೆಸ್ ಲೆಕ್ಕಾಚಾರ ಮಾಡುವಾಗ ಸಿನಿಮಾ ಟಿಕೆಟ್‌ನ ಮೂಲ ಬೆಲೆಯನ್ನು ಮಾತ್ರ ಪರಿಗಣಿಸಲಾಗುತ್ತದೆ (ಪಾವತಿಸಿದ ಅಥವಾ ಪಾವತಿಸಬೇಕಾದ ಇತರ ಯಾವುದೇ ತೆರಿಗೆಗಳನ್ನು ಹೊರತುಪಡಿಸಿ).

ಪರಿಷ್ಕರಣೆ:

ಸರ್ಕಾರವು ಪ್ರತಿ ಮೂರು ವರ್ಷಗಳಿಗೊಮ್ಮೆ ಅಧಿಸೂಚನೆಯ ಮೂಲಕ ಈ ಉಪಕರ ಅಥವಾ ಟಿಕೆಟ್ ದರ ಸಂಬಂಧಿ ದರಗಳನ್ನು ಪರಿಷ್ಕರಿಸುವ ಅಧಿಕಾರ ಹೊಂದಿರುತ್ತದೆ.

ಪ್ರತಿಕ್ರಿಯೆಗಳು ಮತ್ತು ಚರ್ಚೆಗಳು

ಈ ಕಾಯ್ದೆಯು ಸಾವಿರಾರು ತಂತ್ರಜ್ಞರು, ಪೋಷಕ ನಟರು ಮತ್ತು ಕಾರ್ಮಿಕರ ಬದುಕಿಗೆ ಆಸರೆಯಾಗಲಿದೆ ಎಂಬ ಮೆಚ್ಚುಗೆ ಒಂದೆಡೆಯಾದರೆ, ಪ್ರಸ್ತುತ ಚಿತ್ರರಂಗ ಎದುರಿಸುತ್ತಿರುವ ಆರ್ಥಿಕ ಸವಾಲುಗಳ ಹಿನ್ನೆಲೆಯಲ್ಲಿ ಈ ಸೆಸ್ ಸಂಗ್ರಹದ ಬಗ್ಗೆ ಪರ-ವಿರೋಧ ಚರ್ಚೆಗಳೂ ಆರಂಭವಾಗಿವೆ.

ಇಂದಿನ ಡಿಜಿಟಲ್ ಯುಗದಲ್ಲಿ ಥಿಯೇಟರ್‌ಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಕ್ಷೀಣಿಸುತ್ತಿರುವಾಗ ಟಿಕೆಟ್ ದರ ಹಾಗೂ OTT ಚಂದಾದಾರಿಕೆ ಮೇಲಿನ ಸೆಸ್‌ನಿಂದಾಗಿ ದರ ಏರಿಕೆಯಾಗಿ ಪ್ರೇಕ್ಷಕರಿಗೆ ಹೊರೆಯಾಗಬಹುದೇ ಎಂಬ ಕಳವಳ ಪ್ರದರ್ಶಕರ ವಲಯದಲ್ಲಿದೆ. ಆದರೆ, ಪ್ರಾಣ ಮುಡಿಪಾಗಿಟ್ಟು ಚಿತ್ರೀಕರಣದಲ್ಲಿ ಭಾಗವಹಿಸುವ ಸಿನಿಕಾರ್ಮಿಕರಿಗೆ ನೈಜ ಅರ್ಥದಲ್ಲಿ ನೆರವಾಗಲು ಬಲವಾದ ಆರ್ಥಿಕ ಮೂಲದ ಅಗತ್ಯವಿದ್ದು, ಸರ್ಕಾರದ ಈ ನಿರ್ಧಾರವು ಅವರ ಭವಿಷ್ಯಕ್ಕೆ ಭದ್ರತೆ ನೀಡಲಿದೆ ಎಂಬ ಭರವಸೆಯೂ ವ್ಯಕ್ತವಾಗಿದೆ.

ಟಿಕೆಟ್ನ ಮೂಲ ದರ-ವಿಧಿಸುವ ಸೆಸ್ (2%)ಹೊಸ ಅಂದಾಜು ದರ

₹100 ₹2 ₹102

₹200 ₹4 ₹204

₹500 ₹10 ₹510

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular