HomeLatest Newsಕಾಂಗ್ರೆಸ್ ಸಚಿವ ಸಂಪುಟದಲ್ಲಿ ಒಬ್ಬ ಬ್ರಾಹ್ಮಣನೂ ಇಲ್ಲ ; 30 ವರ್ಷಗಳ ಕರ್ನಾಟಕ ರಾಜಕಾರಣದಲ್ಲಿ ಇದೇ...

ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಒಬ್ಬ ಬ್ರಾಹ್ಮಣನೂ ಇಲ್ಲ ; 30 ವರ್ಷಗಳ ಕರ್ನಾಟಕ ರಾಜಕಾರಣದಲ್ಲಿ ಇದೇ ಮೊದಲು!

ಹಲವು ದಿನಗಳ ಕಸರತ್ತಿನ ಬಳಿಕ ಡಿಕೆ ಶಿವಕುಮಾರ್ ನೇತೃತ್ವದ ಮಂತ್ರಿ ಮಂಡಲ ಸಂಪೂರ್ಣವಾಗಿ ಸಿದ್ಧವಾಗಿದ್ದು, ಮೊನ್ನೆ 19 ನೂತನ ಸಚಿವರು ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಈ ಮೂಲಕ ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆಗೆ ಪೂರ್ಣವಿರಾಮ ಬಿದ್ದಿದ್ದು, ಒಟ್ಟು 34 ಸಚಿವರು ನಾಡ ಜನರ ಸೇವೆಗೆ ಸಿದ್ಧರಾಗಿದ್ದಾರೆ. ಬಿಟಿವಿ ಸೇರಿ ಹಲವು ವರದಿಗಳ ಪ್ರಕಾರ ಈ ಸಚಿವ ಸಂಪುಟದಲ್ಲಿ ದಲಿತರು 10, ಲಿಂಗಾಯತರು 7, ಹಿಂದುಳಿದ ವರ್ಗಗಳು 7, ಒಕ್ಕಲಿಗರು 6, ಅಲ್ಪಸಂಖ್ಯಾತರು 4 ಮಂದಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪೋಸ್ಟ್‌ಗಳು ವೈರಲ್ ಆಗಿದ್ದು, ಎಲ್ಲೆಡೆ ಬ್ರಾಹ್ಮಣ ಸಮುದಾಯದವರಿಗೆ ಒಂದೇ ಒಂದು ಸಚಿವ ಸ್ಥಾನ ಸಹ ಸಿಕ್ಕಿಲ್ಲ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.

1996ರಿಂದ 30 ವರ್ಷಗಳ ಕಾಲ ಸತತವಾಗಿ ರಾಜ್ಯದ ಎಲ್ಲ ಸಚಿವ ಸಂಪುಟದಲ್ಲೂ ಬ್ರಾಹ್ಮಣ ಸಮುದಾಯದವರಿಗೆ ಸ್ಥಾನ ನೀಡಲಾಗಿತ್ತು. ಹಲಿಯಾಳ ಕ್ಷೇತ್ರದಿಂದ 9 ಬಾರಿ ಎಂಎಲ್‌ಎ ಆಗಿದ್ದ ಆರ್‌ವಿ ದೇಶಪಾಂಡೆ ಎಚ್‌ಡಿ ದೇವೇಗೌಡ, ಜೆಎಚ್ ಪಾಟೀಲ್ ಹಾಗೂ ಎಸ್‌ಎಂ ಕೃಷ್ಣ ಸಚಿವ ಸಂಪುಟಗಳಲ್ಲಿ 1994ರಿಂದ 2004ರವರೆಗೆ ಸತತ ಹತ್ತು ವರ್ಷಗಳ ಕಾಲ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2015ರಿಂದ 2018ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲೂ ಸಹ ಮಂತ್ರಿಯಾಗಿದ್ದರು. ಆದರೆ ಪ್ರಸ್ತುತ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಲೂ ಹಾಗೂ ಡಿಕೆ ಶಿವಕುಮಾರ್ ಸಿಎಂ ಆದಾಗಲೂ ಇವರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ.

ಬೆಂಗಳೂರಿನ ಗಾಂಧಿನಗರದಿಂದ ಆರು ಬಾರಿ ಎಂಎಲ್‌ಎ ಆಗಿ ಆಯ್ಕೆಯಾದ ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದರು. ಆದರೆ ಈಗ ಇವರಿಗೂ ಸಹ ಅಧಿಕಾರ ಸಿಗದೇ ಇದ್ದು, ಸದ್ಯ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯದವರು ಯಾರೂ ಇಲ್ಲ ಎಂದು ಡೆಕ್ಕನ್ ಹೆರಾಲ್ಡ್ ಸಹ ವರದಿ ಮಾಡಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular