HomeEntertainmentಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದ 'ಕರಟಕ ಗಮನಕ' ಚಿತ್ರದ ''ಹಿತ್ತಲಕ ಕರಿಬ್ಯಾಡ ಮಾವ'' ಹಾಡು

ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದ ‘ಕರಟಕ ಗಮನಕ’ ಚಿತ್ರದ ”ಹಿತ್ತಲಕ ಕರಿಬ್ಯಾಡ ಮಾವ” ಹಾಡು

ಮಾರ್ಚ್ 8ರಂದು ತೆರೆ ಮೇಲೆ ಬರಲು ಸಜ್ಜಾಗಿರುವ ‘ಕರಟಕ ಗಮನಕ’ ಚಿತ್ರದ ”ಹಿತ್ತಲಕ ಕರಿಬ್ಯಾಡ ಮಾವ” ಹಾಡು ಇತ್ತೀಚಿಗಷ್ಟೇ youtubeನಲ್ಲಿ ಬಿಡುಗಡೆಯಾಗಿದ್ದು, 9 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಮಲು ನಿಪಾನಲ್ ಮತ್ತು ಶೃತಿ ಪ್ರಹಲ್ಲಾದ ಧ್ವನಿಯಾಗಿರುವ ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯವಿದೆ. ಡ್ಯಾನ್ಸ್ ಕಿಂಗ್ ಪ್ರಭುದೇವ್ ಜೊತೆ ನಿಶ್ವಿಕಾ ನಾಯ್ಡು ಹೆಜ್ಜೆ ಹಾಕಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಪ್ರಭುದೇವ್, ಪ್ರಿಯಾ ಆನಂದ್, ನಿಷ್ವಿಕ ನಾಯ್ಡು, ಪ್ರಮುಖ ಪಾತ್ರದಲ್ಲಿದ್ದು, ರಾಕ್ ಲೈನ್ ವೆಂಕಟೇಶ್ ತಮ್ಮ ರಾಕ್ ಲೈನ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದು,  ಕೆ ಎಂ ಪ್ರಕಾಶ್ ಸಂಕಲನ, ಸಂತೋಷ್ ರಾಯ್ ಪತಾಜೆ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular