HomeEntertainmentಸಲ್ಮಾನ್ ಖಾನ್ ಮದುವೆ ಯಾವಾಗ ಎಂಬ ಪ್ರಶ್ನೆಗೆ ಕತ್ರಿನಾ ಕೈಫ್ ಉತ್ತರ ಹೀಗಿತ್ತು

ಸಲ್ಮಾನ್ ಖಾನ್ ಮದುವೆ ಯಾವಾಗ ಎಂಬ ಪ್ರಶ್ನೆಗೆ ಕತ್ರಿನಾ ಕೈಫ್ ಉತ್ತರ ಹೀಗಿತ್ತು

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್‌ರ ಡೇಟಿಂಗ್ ವದಂತಿಗಳು ಹಾಗೂ ಅವರ ನಡುವಿನ ತೆರೆಯ ಮೇಲಿನ ಕೆಮಿಸ್ಟ್ರಿಯನ್ನು ಅವರ ಅಭಿಮಾನಿಗಳು ಇನ್ನೂ ಮರೆತಿಲ್ಲ.

ನಂತರದ ದಿನಗಳಲ್ಲಿ ಇಬ್ಬರೂ ಪ್ರತ್ಯೇಕ ಹಾದಿಗಳನ್ನು ಹಿಡಿದು, ನಟ ವಿಕ್ಕಿ ಕೌಶಲ್‌ರನ್ನು ಕತ್ರಿನಾ ಮದುವೆಯಾಗಿದ್ದಾರೆ. ಇತ್ತ ಸಲ್ಮಾನ್ ಖಾನ್, 57, ತಮ್ಮ ಬ್ರಹ್ಮಚರ್ಯವನ್ನು ಮುಂದುವರೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಪಿಲ್ ಶರ್ಮಾ ಶೋ ವೇಳೆ ಆಯೋಜಿಸಿದ್ದ ಗೇಮ್ ಒಂದರಲ್ಲಿ ಭಾಗಿಯಾಗಿದ್ದ ಸಲ್ಮಾನ್ ಹಾಗೂ ಕತ್ರಿನಾಗೆ, ’ಸಲ್ಮಾನ್‌ರ ನೆಚ್ಚಿನ ನಟಿ ಯಾರು’ ಎಂದು ಕಪಿಲ್ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕತ್ರಿನಾ, ’’ಬಹುಶಃ ಈ ತಲೆಮಾರಿನವರು ಯಾರೋ ಇರಬಹುದು,” ಎಂದಿದ್ದಾರೆ.

ಕೂಡಲೇ ಮಧ್ಯ ಪ್ರವೇಶಿಸಿದ ಸಲ್ಮಾನ್ ತಮಗೆ ಈಗಲೂ ಕತ್ರಿನಾ ಫೇವರಿಟ್ ನಟಿ ಎಂದಿದ್ದಾರೆ.

ಇದೇ ವೇಳೆ, ಸಲ್ಮಾನ್ ಖಾನ್‌ರ ಮದುವೆ ಯಾವಾಗ ಆಗಬಹದು ಎಂದು ಕತ್ರಿನಾರನ್ನು ಕಪಿಲ್ ಕೇಳಿದಾಗ, ಇದಕ್ಕೆ ಬುದ್ಧಿವಂತಿಕೆಯಿಂದ ಉತ್ತರಿಸಿದ ಕತ್ರಿನಾ, ದೇವರು ಹಾಗೂ ಸಲ್ಮಾನ್ ಖಾನ್‌ಗೆ ಮಾತ್ರವೇ ಆ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಿದೆ ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular