HomeLatest News'ಕಿಡ್ನಾಪ್' ಆದರಾ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ? ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿ...

‘ಕಿಡ್ನಾಪ್’ ಆದರಾ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ? ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ !

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು, ಇದರಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹಾಗೂ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಅವರ ಬಾಯಿಗೆ ಬಟ್ಟೆ ಬಿಗಿದು, ಕೈಗಳನ್ನು ಕಟ್ಟಿ ಕೆಲವರು ಎಳೆದುಕೊಂಡು ಹೋಗುತ್ತಿದ್ದಾರೆ.

ಈ ವಿಡಿಯೋವನ್ನು ಟೀಮ್ ಇಂಡಿಯಾದ ಮತ್ತೊಬ್ಬ ಮಾಜಿ ಆಟಗಾರ ಗೌತಮ್ ಗಂಭೀರ್ ಹಂಚಿಕೊಂಡಿದ್ದು, ಕಪಿಲ್ ದೇವ್ ಅಪಹರಣವಾಗಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಹೇಳಿದ್ದಾರೆ. ಅಷ್ಟಕ್ಕೂ ಈ ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ.

ಜಾಹೀರಾತು ಒಂದಕ್ಕೆ ಈ ವಿಡಿಯೋವನ್ನು ಶೂಟ್ ಮಾಡಲಾಗಿದ್ದು, ಇದಕ್ಕಾಗಿ ಕಪಿಲ್ ದೇವ್ ಅವರ ಕೈಕಟ್ಟಿ, ಬಾಯಿಗೆ ಬಟ್ಟೆ ಬಿಗಿದು ಕೆಲವರು ಕರೆದುಕೊಂಡು ಹೋಗುವಂತೆ ಬಿಂಬಿಸಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈಗ ಜಾಹೀರಾತು ಸಂಸ್ಥೆಗೆ ಜರೆಯುತ್ತಿದ್ದು, ಪ್ರಚಾರಕ್ಕಾಗಿ ಈ ರೀತಿ ಮಾಡುವುದು ಸರಿಯೇ ಎಂದು ಪ್ರಶ್ನಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular