HomeEntertainmentಅರಣ್ಯಕ್ಕೆ ಬೆಂಕಿ, ಸ್ಪೋಟಕ ಬಳಕೆ ಆರೋಪ ನಿರಾಕರಿಸಿದ 'ಕಾಂತಾರ' ಚಿತ್ರತಂಡ

ಅರಣ್ಯಕ್ಕೆ ಬೆಂಕಿ, ಸ್ಪೋಟಕ ಬಳಕೆ ಆರೋಪ ನಿರಾಕರಿಸಿದ ‘ಕಾಂತಾರ’ ಚಿತ್ರತಂಡ

ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆರೂರು ಅರಣ್ಯ ಪ್ರದೇಶದಲ್ಲಿ ‘ಕಾಂತಾರ -1’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಅರಣ್ಯ ನಿಯಮ ಉಲ್ಲಂಘಿಸಿಲ್ಲವೆಂದು ಚಿತ್ರತಂಡ ತಿಳಿಸಿದೆ.

ಅರಣ್ಯ ನಿಯಮ ಉಲ್ಲಂಘಿಸಿ ಬೆಂಕಿ ಹಚ್ಚಿ ಮತ್ತು ಸ್ಫೋಟಕಗಳನ್ನು ಸಿಡಿಸಿ ಅರಣ್ಯ ನಾಶ ಮಾಡಲಾಗಿದೆ ಎಂಬ ಆರೋಪವನ್ನು ಚಿತ್ರತಂಡ ನಿರಾಕರಿಸಿದೆ. ನಾವು ಚಿತ್ರೀಕರಣ ಸ್ಥಳದಲ್ಲಿ ಯಾವುದೇ ಅರಣ್ಯವನ್ನು ನಾಶಪಡಿಸಿಲ್ಲ. ಈ ಕುರಿತಾಗಿ ಮಾಧ್ಯಮಗಳಲ್ಲಿ ಬಂದಿರುವ ವರದಿ ನಿರಾಧಾರವಾಗಿದೆ. ಅರಣ್ಯ ಸಂರಕ್ಷಣೆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಧಿಸಿರುವ ನಿಯಮಗಳನ್ನು ಪಾಲಿಸಿದ್ದೇವೆ. ಚಿತ್ರೀಕರಣದಿಂದ ಅರಣ್ಯ ನಾಶವಾಗಿಲ್ಲ. ಅರಣ್ಯ ರಕ್ಷಣೆಗೆ ನಾವು ಬದ್ಧವಾಗಿದ್ದೇವೆ ಎಂದು ಹೊಂಬಾಳೆ ಫಿಲಂಸ್ ನ ಚಲುವೆಗೌಡ ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular