HomeEntertainmentBreaking News: ಕನ್ನಡ ಕಿರುತೆರೆ ನಟಿ ರಶ್ಮಿ ಲೀಲಾ ವಿಧಿವಶ

Breaking News: ಕನ್ನಡ ಕಿರುತೆರೆ ನಟಿ ರಶ್ಮಿ ಲೀಲಾ ವಿಧಿವಶ

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಕಿರುತೆರೆ ನಟಿ ರಶ್ಮಿ ಲೀಲಾ ವಿಧಿವಶರಾದರು. ರಶ್ಮಿ ಲೀಲಾ ಆರೋಗ್ಯ ಸುಧಾರಿಸಲಿ ಎಂದು ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದರು.

ಬೆಂಗಳೂರು ನಗರ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಟಿ ರಶ್ಮಿ ಲೀಲಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕರು ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

ರಶ್ಮಿ ಲೀಲಾ ಹಲವು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅವರ ನಿಧನದ ವಿಚಾರವನ್ನು ಅವರ ಪತಿ ಸಾರಕ್ಕಿ ಮಂಜು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾರಕ್ಕಿ ಮಂಜು ಅವರು ಸೋಮವಾರ ಬೆಳಗ್ಗೆ ‘ಹೃದಯದ ಬಡಿತ ತೀವ್ರ ಇಳಿಮುಖ ಆಗ್ತಿದೆ. ಕೊನೆಯ ಬಾರಿಗೆ ಒಂದು ಸಲ, ಒಂದೇ ಒಂದು ಸಲ ಈ ನನ್ನ ಜೀವ Actress Rashmi Leela Actress Rashmi Sarakki Manju ಉಳಿದು ಬಿಡಲಿ, ಉಳಿಸಿಕೊಡಲೆಂದು ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಬಿಡಿ’ ಎಂದು ಪೋಸ್ಟ್ ಹಾಕಿದ್ದರು.

ಬಳಿಕ ‘ನಮ್ಮ ಪ್ರಾಣ ಹೊರಟು ಹೋಯ್ತು’ ಎಂದು ಮತ್ತೊಂದು ಪೋಸ್ಟ್ ಹಾಕಿ ರಶ್ಮಿ ಲೀಲಾ ನಿಧನದ ವಿಚಾರ ತಿಳಿಸಿದ್ದಾರೆ.

ನಟಿ ರಶ್ಮಿ ಲೀಲಾ ಅವರು 2019ರಿಂದ ಪಲ್ಮನರಿ ಫೈಬ್ರೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಇದು ಹಂತಹಂತವಾಗಿ ಮುಂದುವರಿದು ನಿಧಾನವಾಗಿ ಶ್ವಾಸಕೋಶಗಳಲ್ಲಿ ಗಾಯ ಮಾಡುತ್ತ, ಉಸಿರಾಟಕ್ಕೆ ತೊಂದರೆ ಮಾಡಿತ್ತು.

ಔಷಧಿಯಿಂದ ಗುಣಪಡಿಸೋಕೆ ಸಾಧ್ಯವಿಲ್ಲ ಹೀಗಾಗಿ ಲಂಗ್ ಟ್ರಾನ್ಸ್‌ಪ್ಲಾಂಟ್ ಮಾಡಬೇಕು ಎಂದು ರಶ್ಮಿ ಲೀಲಾ ಮಾಹಿತಿ ನೀಡಿದ್ದರು. ಕಳೆದ ಫೆಬ್ರವರಿಯಲ್ಲಿ ಲಂಗ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ಕೂಡ ಆಗಿತ್ತು. ಹೀಗಿದ್ದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.

ಸಾರಕ್ಕಿ ಮಂಜು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪತ್ನಿ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡುತ್ತಿದ್ದರು. ಸ್ನೇಹಿತರೇ, ಜೀವನ ಕೆಲವೊಮ್ಮೆ ನಾವು ಊಹೆ ಮಾಡದ ರೀತಿಯಲ್ಲಿ ನಮ್ಮನ್ನು ಪರೀಕ್ಷಿಸುತ್ತದೆ. ಕಳೆದ 6–7 ವರ್ಷಗಳಿಂದ ನನ್ನ ಶ್ರೀಮತಿ ರಶ್ಮಿ ಅವರು ತೀವ್ರವಾದ Rheumatoid Arthritis ಎಂಬ ಕಠಿಣ ಕಾಯಿಲೆಯೊಂದಿಗೆ ಧೈರ್ಯವಾಗಿ ಹೋರಾಡುತ್ತಿದ್ದರು. ಕಾಲಕ್ರಮೇಣ, ಆ ಕಾಯಿಲೆಯ ಭೀಕರ side effect ಪರಿಣಾಮವಾಗಿ ಅವರ ಎರಡೂ ಶ್ವಾಸಕೋಶಗಳು ನಿಧಾನವಾಗಿ ಕಾರ್ಯನಿರ್ವಹಣೆ ನಿಲ್ಲಿಸುವ ಹಂತಕ್ಕೆ ತಲುಪಿದವು ಎಂದು ಹೇಳಿದ್ದರು.

ಉಸಿರಾಡುವುದು ನಾವು ಸಾಮಾನ್ಯವಾಗಿ ಗಮನಿಸದ ಅತಿ ಸಹಜವಾದ ಕ್ರಿಯೆ.ಆದರೆ ರಶ್ಮಿಯವರಿಗೆ ಪ್ರತಿದಿನದ ಹೋರಾಟವಾಗಿಬಿಟ್ಟಿತು. ಕಳೆದ ಒಂದು ವರ್ಷದಿಂದ, ಅವರು ಆಕ್ಸಿಜನ್ ಸಿಲಿಂಡರ್ ಸಹಾಯದಿಂದಲೇ ಜೀವನವನ್ನು ಹಿಡಿದುಕೊಂಡಿದ್ದಾರೆ. ನೋವು, ಕಷ್ಟ, ಭಯ… ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡು, ಅಸಾಧಾರಣ ಧೈರ್ಯದಿಂದ ಬದುಕಿದ್ದಾರೆ ಎಂದು ಪೋಸ್ಟ್ ಹಾಕಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular