HomeKarnatakaಕರವೇ ಕಾರ್ಯಕರ್ತರಿಂದ ತೀವ್ರಗೊಂಡ ಹೋರಾಟ; ಇಂಗ್ಲೀಷ್ ನಾಮಫಲಕ, ಬೋರ್ಡ್ ಗಳು ಧ್ವಂಸ; ನಮ್ಮ ಚಳುವಳಿಗೆ ಅಡ್ಡಿಯಾಗಬೇಡಿ...

ಕರವೇ ಕಾರ್ಯಕರ್ತರಿಂದ ತೀವ್ರಗೊಂಡ ಹೋರಾಟ; ಇಂಗ್ಲೀಷ್ ನಾಮಫಲಕ, ಬೋರ್ಡ್ ಗಳು ಧ್ವಂಸ; ನಮ್ಮ ಚಳುವಳಿಗೆ ಅಡ್ಡಿಯಾಗಬೇಡಿ ಎಂದು ಪೊಲೀಸರಿಗೆ ನಾರಾಯಣಗೌಡ ಮನವಿ

ಬೆಂಗಳೂರು: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿರುವ ಬೆನ್ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜನಜಾಗೃತಿಗೆ ಮುಂದಾಗಿದ್ದು, ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಿಂದ ವಿಶೇಷ ಪ್ರತಿಭಟನಾ ರ್ಯಾಲಿ ಆರಂಭಿಸಿದ್ದಾರೆ.

ಏರ್ ಪೋರ್ಟ್ ಬಳಿಯ ಸಾದಹಳ್ಳಿ ಗೇಟ್ ನಿಂದ ಕರವೇ ನಾರಾಯಣಗೌಡ ನೇತೃತ್ವದಲ್ಲಿ ಬೃಹತ್ ರ್ಯಾಲಿ ಆರಂಭಿಸಿರುವ ಕಾರ್ಯಕರ್ತರು, ಇಂಗ್ಲೀಷ್ ನಾಮಫಲಕಗಳನ್ನು, ಜಾಹೀರಾತು ಬೋರ್ಡ್ ಗಳನ್ನು ಕಿತ್ತು, ದ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾದಹಳ್ಳಿ ಬ್ಲೂಮ್ ಹೋಟೆಲ್ ಬಳಿ ಇದ್ದ ಇಂಗ್ಲೀಷ್ ನಾಮಫಲಕಗಳನ್ನು ಧ್ವಂಸ ಮಾಡಿದ್ದು, ಲೈಟಿಂಗ್ ಬೋರ್ಡ್ ಗಳನ್ನು ಕಿತ್ತು ಹಾಕಿದ್ದಾರೆ. ಬೃಹತ್ ಇಂಗ್ಲೀಷ್ ಕಟೌಟ್, ಬ್ಯಾನರ್ ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರವೇ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಕಾರ್ಯಕರ್ತರನ್ನು ತಡೆಯಲು ಯತ್ನಿಸಿದ್ದಾರೆ.

ಈ ನಡುವೆ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿರುವ ನಾರಾಯಣಗೌಡ, ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಪ್ರಮುಖ ಆದ್ಯತೆ. ಯಾರೇ ಆಗಿರಲಿ ಮೊದಲು ಕನ್ನಡದಲ್ಲಿ ಮಾತನಾಡಬೇಕು. ಬೋರ್ಡ್ ಗಳು ಕನ್ನಡದಲ್ಲಿಯೇ ಇರಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾವು ಕಾನೂನು ಚೌಕಟ್ಟಿನಲ್ಲಿಯೇ ಚಳುವಳಿ ಆರಂಭಿಸಿದ್ದೇವೆ. ಪೊಲೀಸರು ಅನಗತ್ಯವಾಗಿ ನಮ್ಮ ಹೋರಾಟ, ಚಳುವಳಿಗೆ ಅಡ್ಡಿಪಡಿಸಬಾರದು ಎಂದು ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular