ತುಮಕೂರು ಜಿಲ್ಲೆಯ ಇಬ್ಬರು ಪ್ರಭಾವಿ ರಾಜಕೀಯ ನಾಯಕರು ಬೀಗರಾಗುತ್ತಿದ್ದಾರೆ. ಗುಬ್ಬಿ ಕ್ಷೇತ್ರದ ಶಾಸಕ ಎಸ್ .ಆರ್.ಶ್ರೀನಿವಾಸ್ ಪುತ್ರ ದುಷ್ಯಂತ್ ಶ್ರೀನಿವಾಸ್ ನಿಶ್ಚಿತಾರ್ಥ ಮಾಜಿ ಸಂಸದ ಮುದ್ದಹನುಮೇಗೌಡ ಪುತ್ರಿ ಜೊತೆ ನಡೆಯಿತು.
ಈ ಕುರಿತು ದುಷ್ಯಂತ್ ಶ್ರೀನಿವಾಸ್ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಕು.ರಚನಾ ಮುದ್ದಹನುಮೇಗೌಡ ಅವರೊಂದಿಗಿನ ನನ್ನ ವಿವಾಹ ಕಾರ್ಯಕ್ರಮವು 26 ಫೆಬ್ರವರಿ ಗುರುವಾರ ಮಧ್ಯಾಹ್ನ ಚಾಮರ ವಜ್ರದಲ್ಲಿ (ಬೆಂಗಳೂರು ಅರಮನೆ ಮೈದಾನ) ನಡೆಯಲಿದೆ ಎಂದು ಹೇಳಿದ್ದಾರೆ.
ಮಾರ್ಚ್ 1ರ ಭಾನುವಾರ ಬೀಗರ ಊಟ ಆರತಕ್ಷತೆಯು ಬೆಂಗಳೂರಿನ ಮುಖ್ಯ ಅರಮನೆಯಲ್ಲಿ ನಡೆಯಲಿದೆ. ನಿಮ್ಮ ಹಾರೈಕೆ, ಆಶೀರ್ವಾದ ಇರಲಿ ಎಂದು ದುಷ್ಯಂತ್ ಶ್ರೀನಿವಾಸ್ ನಿಶ್ಚಿತಾರ್ಥ, ವಿವಾಹದ ವಿಚಾರವನ್ನು ತಿಳಿಸಿದ್ದಾರೆ.
ರಾಜಕೀಯ, ಸಿನಿಮಾ: ದುಷ್ಯಂತ್ ಶ್ರೀನಿವಾಸ್ ಗುಬ್ಬಿ ಕ್ಷೇತ್ರದ ಶಾಸಕ ಎಸ್ .ಆರ್.ಶ್ರೀನಿವಾಸ್ ಪುತ್ರ. ರಚನಾ ಮುದ್ದಹನುಮೇಗೌಡ ತುಮಕೂರು ಕ್ಷೇತ್ರದ ಮಾಜಿ ಸಂಸದ ಮುದ್ದಹನುಮೇಗೌಡ ಪುತ್ರಿ.
ಇದು ರಾಜಕೀಯ ಮತ್ತು ಸಿನಿಮಾ ಕ್ಷೇತ್ರಗಳ ಸಂಗಮ. ಹೌದು ಎಸ್ .ಆರ್ ಶ್ರೀನಿವಾಸ್ ಪುತ್ರ ದುಷ್ಯಂತ್ ಶ್ರೀನಿವಾಸ್ ಕೆಲವು ದಿನಗಳ ಹಿಂದೆ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.
ಅಪ್ಪನ ವಿರೋಧದ ನಡುವೆಯೇ ಅವರು ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾದಲ್ಲಿ ನಾಯಕನಾಗುವ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿದ್ದರು.
ದುಶ್ಯಂತ್ ಶ್ರೀನಿವಾಸ್ ಕನ್ನಡ ಚಿತ್ರರಂಗದ ಯುವನಟ. ಟೆಂಟ್ ಸಿನಿಮಾ ಎಂಬ ನಟನಾ ಶಾಲೆಯಲ್ಲಿ ಮೂರು ವರ್ಷದ ಕೋರ್ಸ್ ಮಾಡಿ ಸಿಂಪಲ್ ಸುನಿ ನಿರ್ದೇಶನದ ಗತವೈಭವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾರ್ದಪಣೆ ಮಾಡಿದ್ದರು.
ಮೊದಲ ಸಿನಿಮಾ ಬಿಡುಗಡೆಯಾದ ಕೆಲವೇ ದಿನಕ್ಕೆ ದುಷ್ಯಂತ್ ಶ್ರೀನಿವಾಸ್ ರಚನಾ ಮುದ್ದಹನುಮೇಗೌಡ ಜೊತೆ ವಿವಾಹವಾಗುತ್ತಿರುವ ವಿಚಾರವನ್ನು ಬಹಿರಂಗ ಮಾಡಿದ್ದಾರೆ.

