HomeKarnatakaBREAKING NEWS: ಹಾಡಹಗಲೇ ವಕೀಲನ ಹತ್ಯೆ ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್

BREAKING NEWS: ಹಾಡಹಗಲೇ ವಕೀಲನ ಹತ್ಯೆ ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್

ಕಲಬುರ್ಗಿ: ಕಲಬುರ್ಗಿಯಲ್ಲಿ ಹಾಡಹಗಲೇ ವಕೀಲನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಗುಲಬರ್ಗಾ ವಿವಿ ಪೊಲಿಸರು ಬಂಧಿಸಿದ್ದಾರೆ.

ಅವಣ್ಣ ನಾಯಿಕೊಡಿ, ಮಲ್ಲಿನಾಥ್ ನಾಯಿಕೊಡಿ, ಭಾಗೇಶ್ ಬಂಧಿತರು. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ಚುರುಕುಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಕೀಲನ ಹತ್ಯೆ ನಡೆದು 24 ಗಂಟೆಯೊಳಗೆ ಪೊಲೀಸರು ಮೂವರು ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವ ಪ್ರಮುಖ ಆರೋಪಿಗಾಗಿ ಹುಡುಕಾಟ ನಡೆಸಲಾಗಿದೆ.

ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಕೋರ್ಟ್ ನಲ್ಲಿ ಅಂತಿಮ ವಿಚಾರಣೆ ಇತ್ತು. ವಕೀಲ ಈರಣ್ಣಗೌಡ ಪಾಟೀಲ್ ಕೋರ್ಟ್ ಗೆ ತೆರಳುತ್ತಿದ್ದಾ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಬಂದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಆರೋಪಿಗಳು ಕಲಬುರ್ಗಿ ಲಾಡ್ಜ್ ನಲ್ಲಿ ಇದ್ದು, ಮೂರು ದಿನಗಳಿಂದ ಹೊಂಚು ಹಾಕಿ ವಕಿಲನನ್ನು ಹತ್ಯೆಗೈದಿದ್ದರು ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular