HomeKarnatakaBIG NEWS: ಮೂರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

BIG NEWS: ಮೂರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕಲಬುರಗಿ: ಪತಿ-ಪತ್ನಿ ನಡುವಿನ ವೈಮನಸ್ಯಕ್ಕೆ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಂಗ್ಲಿಪೀರ್ ತಾಂಡಾದಲ್ಲಿ ನಡೆದಿದೆ.

30 ವರ್ಷದ ಗೀತಾಬಾಯಿ ಸಂತೋಷ್ ರಾಥೋಡ್ ಪತಿ ಮೇಲಿನ ಸಿಟ್ಟಿಗೆ, ಕ್ರಿಮಿನಾಶಕವನ್ನು ಬೆರೆಸಿ ಮೂವರು ಮಕ್ಕಳಿಗೆ ಕೊಟ್ಟಿದ್ದಾಳೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಕ್ಕಳಾದ 4 ವರ್ಷದ ಚೈತನ್ಯ, 3 ವರ್ಷದ ಧನುಷ್ ಹಾಗೂ ಒಂದುವರೆ ತಿಂಗಳ ಹಸುಗೂಸು ಲಕ್ಷ್ಮೀ ಸ್ಥಿತಿ ಗಂಭೀರವಾಗಿದೆ.

ಪತಿ ಸಂತೋಷ್ ಕೆಲಸಕ್ಕೆ ಹೋದ ಬಳಿಕ ಪತ್ನಿ ಗೀತಾ ಈ ಕೃತ್ಯವೆಸಗಿದ್ದಾಳೆ. ವಿಷಸೇವಿಸಿದ ಬಳಿಕ ಮಕ್ಕಳು ತೀವ್ರ ಹೊಟ್ಟೆನೋವು, ಅಸಹನೀಯ ಸಂಕಟದಿಂದ ಚೀರಾಟ ನಡೆಸಿದ್ದಾರೆ. ಇದನ್ನು ಗಮನಿಸಿದ ನೆರೆಹೊರೆಯವರು ಬಂದು ನೋಡಿದಾಗ ಗೀತಾ ತಾನೂ ವಿಷ ಸೇವಿಸಿ ಮಕ್ಕಳಿಗೂ ವಿಷ ಕುಡಿಸಿರುವುದು ಗೊತ್ತಾಗಿದೆ. ತಕ್ಷಣ ನಾಲ್ವರನ್ನು ಚಿಂಚೋಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದುವರೆ ತಿಂಗಳ ಹಸುಗೂಸಿನ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular