HomeKarnatakaಕೋರ್ಟ್ ಆವರಣದಲ್ಲಿಯೇ ವ್ಯಕ್ತಿಯ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ

ಕೋರ್ಟ್ ಆವರಣದಲ್ಲಿಯೇ ವ್ಯಕ್ತಿಯ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ

ಕಲಬುರ್ಗಿ: ಕೋರ್ಟ್ ಆವರಣದಲ್ಲಿಯೇ ದುಷ್ಕರ್ಮಿಗಳು ವ್ಯಕ್ತಿ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿರುವ ಘಟನೆ ಕಲಬುರ್ಗಿ ಜಿಲ್ಲಾ ಕೋರ್ಟ್ ನಲ್ಲಿ ನಡೆದಿದೆ.

ಧೀರಜ್ ಹಲ್ಲೆಗೊಳಗಾದ ವ್ಯಕ್ತಿ . ವ್ಯಕ್ತಿಯ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿದ್ದಂತೆ ಸಾರ್ವಜನಿಕರು ಹಾಗೂ ವಕೀಲರು ಹಲ್ಲೆಕೋರರನ್ನು ತಡೆದಿದ್ದಾರೆ. ಹಳೇ ದ್ವೇಷದ ಕಾರಣದಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಗಾಯಾಳು ಧೀರಜ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆ ನಡೆಸಿದ ಆರೋಪಿಗಳಾದ ಪ್ರಶಾಂತ್ ಪಾಟೀಲ್ (200 ವೀರೇಶ್ ಪಾಟೀಲ್ (19) ರಾಮು ಪಾಟೀಲ್ (38) ರನ್ನು ಬಂಧಿಸಲಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular