HomeKarnatakaSHOCKING: ಪತ್ನಿ ಮೇಲಿನ ಅನುಮಾನಕ್ಕೆ ಜಿಲೆಟಿನ್ ಸ್ಫೋಟ: ತಂದೆ-ಮಗಳು ಸ್ಥಳದಲ್ಲೇ ಸಾವು

SHOCKING: ಪತ್ನಿ ಮೇಲಿನ ಅನುಮಾನಕ್ಕೆ ಜಿಲೆಟಿನ್ ಸ್ಫೋಟ: ತಂದೆ-ಮಗಳು ಸ್ಥಳದಲ್ಲೇ ಸಾವು

ಕಲಬುರಗಿ: ಪತ್ನಿ ಮೇಲಿನ ಅನುಮಾನಕ್ಕೆ ವ್ಯಕ್ತಿಯೋರ್ವ ಮನೆಯೊಳಗೆ ಜಿಲೆಟಿನ್ ಕಡ್ಡಿ ಸ್ಫೋಟಿಸಿದ್ದು, ಘಟನೆಯಲ್ಲಿ ತಂದೆ-ಮಗಳು ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಟಕಿ ತಾಂಡದಲ್ಲಿ ಈ ದುರಂತ ನಡೆದಿದೆ. ಜಿಲೆಟಿನ್ ಕಡ್ಡಿ ಸ್ಫೋಟದಿಂದ ಆರೋಪಿ ಹಾಗೂ ಆತನ ಮಗಳು ಮೃತಪಟ್ಟಿದ್ದಾರೆ. ಪತ್ನಿ ಹಾಗೂ ನಾಲ್ವರು ಗಂಭಿರವಾಗಿ ಗಾಯಗೊಂಡಿದ್ದಾರೆ.

ಶಿವಲಾಲ್ ಬಳಿರಾಮ್ ರಾಠೋಡ್ (50) ಹಾಗೂ ಮೀರಾ (15) ಮೃತರು. ಶಿವಲಾಲ್ ತನ್ನ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ. ಇದರಿಂದ ತಾನು ಕೆಲಸ ಮಾಡುತ್ತಿದ್ದ ಕಲ್ಲು ಕ್ವಾರಿಯಿಂದ ಜಿಲೇಟಿನ್ ಕಡ್ಡಿ ತಂದು ಮನೆಯನ್ನು ಸ್ಫೋಟಿಸಿ ಇಡೀ ಕುಟುಂಬವನ್ನೇ ಸಾಯಿಸುವುದಾಗಿ ಹೇಳಿ ಜಿಲೆಟಿನ್ ಕಡ್ಡಿ ಬ್ಲಾಸ್ಟ್ ಮಾಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯಲ್ಲಿ ಸ್ವತಃ ಶಿವಲಾಲ್ ಹಾಗೂ ಆತನ ಪುತ್ರಿ ಇಬ್ಬರು ಸಾವನ್ನಪ್ಪಿದ್ದಾರೆ. ಶಿವಲಾಲ್ ಪತ್ನಿ ಸವಿತಾ ಹಾಗೂ ಮನೆಯಲ್ಲಿದ್ದ ಪ್ರಕಾಶ್, ಸುರೇಖಾ ಹಾಗೂ ವಿವೇಕ್ ಎಂಬವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular