HomeLatest Newsಕಲಬುರಗಿಯಲ್ಲಿ 1,000 ಎಕರೆ ‘ಪಿಎಂ-ಮಿತ್ರ’ ಜವಳಿ ಪಾರ್ಕ್: ಪ್ರಿಯಾಂಕ್ ಖರ್ಗೆ ನೀಡಿದ ಮಹತ್ವದ ಅಪ್‌ಡೇಟ್

ಕಲಬುರಗಿಯಲ್ಲಿ 1,000 ಎಕರೆ ‘ಪಿಎಂ-ಮಿತ್ರ’ ಜವಳಿ ಪಾರ್ಕ್: ಪ್ರಿಯಾಂಕ್ ಖರ್ಗೆ ನೀಡಿದ ಮಹತ್ವದ ಅಪ್‌ಡೇಟ್

ಬೆಂಗಳೂರು: ಕಲಬುರಗಿಯಲ್ಲಿ ಸ್ಥಾಪನೆಯಾಗಲಿರುವ ಮಹತ್ವಾಕಾಂಕ್ಷಿ ‘ಪಿಎಂ-ಮಿತ್ರ ಜವಳಿ ಪಾರ್ಕ್’ ಯೋಜನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ವೇಗವಾಗಿ ಅನುಷ್ಠಾನಗೊಳಿಸಲು ಮೊದಲ ಹಂತದ ಮೂಲಸೌಕರ್ಯ ನೀಲನಕ್ಷೆ ಮತ್ತು ಆಡಳಿತಾತ್ಮಕ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ Priyank Kharge ತಿಳಿಸಿದ್ದಾರೆ.

1,000 ಎಕರೆ ಪ್ರದೇಶದಲ್ಲಿ ಮೊದಲ ಹಂತದ ಕಾಮಗಾರಿ ಆರಂಭ

ಕಲಬುರಗಿ ಬಳಿ ಮೊದಲ ಹಂತದಲ್ಲಿ 1,000 ಎಕರೆ ಪ್ರದೇಶದಲ್ಲಿ ರೂಪಿಸಲಾಗುತ್ತಿರುವ ಜವಳಿ ಪಾರ್ಕ್ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲು ಸಚಿವರು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಮೊದಲ ಹಂತದಲ್ಲಿ 1,000 ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣ ಕಾಮಗಾರಿಗಳು ಆರಂಭವಾಗಲಿದ್ದು, ಹೂಡಿಕೆ ಮಾಡುವ ಉದ್ಯಮಗಳಿಗೆ ತಕ್ಷಣವೇ ಉತ್ಪಾದನೆ ಆರಂಭಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಮೂಲಸೌಕರ್ಯಗಳನ್ನು ಒಳಗೊಂಡ ‘ಪ್ಲಗ್ ಅಂಡ್ ಪ್ಲೇ’ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಸ್ತೆ, ಡ್ರೈನೇಜ್, ವಿದ್ಯುತ್ ವ್ಯವಸ್ಥೆಗೆ ಆದ್ಯತೆ

ಮೊದಲ ಹಂತದಲ್ಲಿ ಕೋರ್ ಮೂಲಸೌಕರ್ಯಗಳ ಕಾಮಗಾರಿಗಳು ಆರಂಭವಾಗಲಿದ್ದು, ಸಿವಿಲ್ ಮತ್ತು ಭೂ ಅಭಿವೃದ್ಧಿ, ಆಂತರಿಕ ರಸ್ತೆಗಳ ನಿರ್ಮಾಣ ಮತ್ತು ಮಳೆನೀರನ್ನು ಸುಲಭವಾಗಿ ಹೊರಹಾಕಲು ಸುಸಜ್ಜಿತ ಆರ್‌ಸಿಸಿ (RCC) ಡ್ರೈನೇಜ್ ವ್ಯವಸ್ಥೆ ಕಲ್ಪಿಸಲಾಗುವುದು.

ಇಡೀ ಪಾರ್ಕ್‌ನಲ್ಲಿ ಭೂಗತ (UG) ಹೈ-ಟೆನ್ಷನ್/ಲೋ-ಟೆನ್ಷನ್ (HT/LT) ವಿದ್ಯುತ್ ವಿತರಣಾ ಮಾರ್ಗಗಳು ಮತ್ತು ಪರಿಸರ ಸ್ನೇಹಿ ಸೋಲಾರ್ ಬೀದಿ ದೀಪಗಳ ಅಳವಡಿಸುವ ಪ್ರಕ್ರಿಯೆಯೂ ನಡೆಯಲಿದೆ ಎಂದು ಸಚಿವರು ವಿವರಿಸಿದರು.

ನೀರು ಪೂರೈಕೆ ಮತ್ತು ತ್ಯಾಜ್ಯ ಸಂಸ್ಕರಣೆಗೆ ವಿಶೇಷ ವ್ಯವಸ್ಥೆ

5 ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಾಗಾರ (GLSR) ಮೂಲಕ ಶುದ್ಧ ನೀರು ಸರಬರಾಜು ಜಾಲ ಮತ್ತು ಸಂಸ್ಕರಿಸಿದ ನೀರಿಗಾಗಿ 10 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ (ELSR) ನಿರ್ಮಾಣ ಮಾಡಲಾಗುವುದು.

ಪರಿಸರ ಸಂರಕ್ಷಣೆಗಾಗಿ ಶೂನ್ಯ ದ್ರವ ವಿಸರ್ಜನೆ (ZLD) ತಂತ್ರಜ್ಞಾನ ಹೊಂದಿರುವ ಅತ್ಯಾಧುನಿಕ 2.5 MLD ಸಾಮರ್ಥ್ಯದ ಸಾಮಾನ್ಯ ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಘಟಕ (CETP) ಹಾಗೂ ಅದಕ್ಕೆ ಪೂರಕವಾದ ಪೈಪ್‌ಲೈನ್ ಜಾಲದ ಸ್ಥಾಪನೆ ಕಾರ್ಯ ಆರಂಭಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಗುಣಮಟ್ಟ ಕಾಪಾಡಲು ಕಟ್ಟುನಿಟ್ಟಿನ ಸೂಚನೆ

ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಅಧಿಕಾರಿಗಳ ಸಭೆಯಲ್ಲಿ ಚರ್ಚೆ

ಸಭೆಯಲ್ಲಿ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ Dr. Selvakumar S, ಜವಳಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ Rohini Sindhuri, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ Govinda Reddy ಹಾಗೂ ವಿಸಿ ಮೂಲಕ ಕಲಬುರಗಿ ಜಿಲ್ಲಾಧಿಕಾರಿ Mohammed Iqramulla Shariff ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular