HomeKarnatakaಪತಿ-ಪತ್ನಿಯಿಂದ ಒಟ್ಟಿಗೆ ಎಣ್ಣೆ ಪಾರ್ಟಿ: ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನೇ ಹೊಡೆದು ಕೊಂದ ಗಂಡ

ಪತಿ-ಪತ್ನಿಯಿಂದ ಒಟ್ಟಿಗೆ ಎಣ್ಣೆ ಪಾರ್ಟಿ: ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನೇ ಹೊಡೆದು ಕೊಂದ ಗಂಡ

ಕಲಬುರಗಿ: ಒಟ್ಟಾಗಿ ಕೆಲಸ ಮಾಡುತ್ತಿದ್ದ ಪತಿ-ಪತ್ನಿ ಒಟ್ಟೊಟ್ಟಿಗೆ ಎಣ್ಣೆ ಪಾರ್ಟಿಯನ್ನೂ ಮಾಡುತ್ತಾ ಆರಾಮವಾಗಿ ಇದ್ದವರು, ಕಂಠ ಪೂರ್ತಿ ಕುಡಿದು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಪತಿ ಮಹಾಶಯ ಪತ್ನಿಯನ್ನೇ ಇಟ್ಟಿಗೆಯಿಂದ ಹೊಡೆದು ಕೊಂದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಕಲಬುರ್ಗಿ ನಗರದ ಹೊರವಲಯದ ಶಬಾದ್ ರಸ್ತೆಯ ಇಟ್ಟಿಗೆ ಭಟ್ಟಿ ಬಳಿ ಈ ಭೀಕರ ಕೊಲೆ ನಡೆದಿದೆ. ಪತಿಯೇ ಪತ್ನಿ ಪ್ರಿಯಾಂಕಾ (35)ಳನ್ನು ಹತ್ಯೆ ಮಾಡಿದ್ದಾನೆ. ಇಟ್ಟಿಗೆ ಭಟ್ಟಿ ಬಳಿಯೇ ಮನೆ ಮಾಡಿಕೊಂಡು ಮಕ್ಕೊಳೊಂದಿಗೆ ವಾಸವಾಗಿದ್ದ ದಂಪತಿ ನಿತ್ಯೂ ಕಂಠಪೂರ್ತಿ ಕುಡಿಯುತ್ತಿದ್ದರು.

ಕಳೆದ ರತರಿಯೂ ಪತಿ-ಪತ್ನಿ ಕಂಠಪೂರ್ತಿ ಕುಡಿದಿದ್ದು, ಅಮಲಿನಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಇಟ್ಟಿಗೆಯಿಂದ ಪ್ರಿಯಾಂಕಾ ತಲೆಗೆ ಜಜ್ಜಿ ಪತಿ ವಕೀಲ್ ರಾಠೋಡ್ ಹತ್ಯೆ ಮಾಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಂದೆ-ತಾಯಿ ಜಗಳದಲ್ಲಿ ಮಕ್ಕಳು ಅನಾಥರಾಗಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular