ಬೆಂಗಳೂರು : ಕಾಕ್ರೋಚ್ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. “ಕಾಕ್ರೋಚ್ ಮತ್ತು ಕಾಂಗ್ರೆಸ್ ಒಂದೇ ಎಂದು ಹೇಳಲು ನಾಚಿಕೆಯಾಗುವುದಿಲ್ಲವೇ?” ಎಂದು ಪ್ರಶ್ನಿಸಿರುವ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಸತ್ಯವನ್ನು ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ. ಸುಳ್ಳನ್ನೇ ಹೇಳಿಕೊಂಡು ಹೆಚ್ಚು ದಿನ ಬದುಕಲೂ ಸಾಧ್ಯವಿಲ್ಲ ಎಂಬುದನ್ನು ನಿಮ್ಮ ಮಾತುಗಳೇ ಸಾರಿ ಹೇಳುತ್ತಿವೆ. ಕಾಂಗ್ರೆಸ್ ಪಕ್ಷದ ಸೋಲಿನ ಇತಿಹಾಸ ಇಂದು ನಿನ್ನೆಯದಲ್ಲ. ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಪಕ್ಷ ದೇಶದಲ್ಲಿ ಹಂತಹಂತವಾಗಿ ಇತಿಹಾಸದ ಪುಟ ಸೇರುತ್ತಿರುವುದಕ್ಕೆ ಅದರ ಬೌದ್ಧಿಕ ದಾರಿದ್ರ್ಯವೇ ಕಾರಣ. ಆದರೆ, ನೀವು ಮಾತ್ರ ಕಾಂಗ್ರೆಸ್ ಸೋಲಿಗೆ ‘ವೋಟ್ ಚೋರಿ’ ಎಂದು ಸಬೂಬು ನೀಡುತ್ತಾ ಬೊಬ್ಬೆ ಹೊಡೆಯುತ್ತಿದ್ದೀರಿ ಎಂದು ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಮಾನ್ಯ
@PriyankKharge ಅವರೇ, ಸತ್ಯವನ್ನು ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ. ಸುಳ್ಳನ್ನೇ ಹೇಳಿಕೊಂಡು ಹೆಚ್ಚು ದಿನ ಬದುಕಲೂ ಸಾಧ್ಯವಿಲ್ಲ ಎಂಬುದನ್ನು ನಿಮ್ಮ ಮಾತುಗಳೇ ಸಾರಿ ಹೇಳುತ್ತಿವೆ. ಕಾಂಗ್ರೆಸ್ ಪಕ್ಷದ ಸೋಲಿನ ಇತಿಹಾಸ ಇಂದು ನಿನ್ನೆಯದಲ್ಲ. ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಪಕ್ಷ ದೇಶದಲ್ಲಿ ಹಂತಹಂತವಾಗಿ ಇತಿಹಾಸದ ಪುಟ ಸೇರುತ್ತಿರುವುದಕ್ಕೆ ಅದರ ಬೌದ್ಧಿಕ ದಾರಿದ್ರ್ಯವೇ ಕಾರಣ. ಆದರೆ, ನೀವು ಮಾತ್ರ ಕಾಂಗ್ರೆಸ್ ಸೋಲಿಗೆ ‘ವೋಟ್ ಚೋರಿ’ ಎಂದು ಸಬೂಬು ನೀಡುತ್ತಾ ಬೊಬ್ಬೆ ಹೊಡೆಯುತ್ತಿದ್ದೀರಿ. ನಿಜ ಏನು ಗೊತ್ತೇ? ಕಾಂಗ್ರೆಸ್ ಪಕ್ಷ ಸೋಲುತ್ತಿರುವುದು ಅದರ ನಾಯಕರ ಮೆದುಳೇ ಚೋರಿಯಾಗಿರುವುದರಿಂದ! ಅದು ಗೊತ್ತಾಗುವವರೆಗೆ ಕಾಂಗ್ರೆಸ್ ಸೋಲಿಗೆ ಮದ್ದು ಸಿಗುವುದಿಲ್ಲ ಬಿಡಿ!@Cockroachisbackಮತ್ತು
@INCIndia ಎರಡೂ ಒಂದೇ ಎಂದು ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಭಾರತದ ಚುನಾಯಿತ ಸರ್ಕಾರವನ್ನು ಬುಡಮೇಲು ಮಾಡುವುದಕ್ಕೋಸ್ಕರವೇ ವಿದೇಶಿ ಟೂಲ್ ಕಿಟ್ ಭಾಗವಾಗಿ ಹುಟ್ಟಿದ್ದು ಈ ಸಿಜೆಪಿ. ಕೇಂದ್ರದ ಬಿಜೆಪಿ ಸರ್ಕಾರವನ್ನು ಬೀಳಿಸುವುದೇ ಅಂತಿಮ ಗುರಿ ಎಂದು ಸಿಜೆಪಿ ಬೆಂಬಲಿಗ ನಟ ಪ್ರಕಾಶ್ ರಾಜ್ ಹಾಗೂ ಸಿಜೆಪಿ ಮತ್ತು ಕಾಂಗ್ರೆಸ್ನ ಇತರ ನಾಯಕರು ಹೇಳುತ್ತಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಬಂದಿದ್ದು ಅಮೆರಿಕದಿಂದ. ಸಿಜೆಪಿ ಬೆಂಬಲಿಗ ಧ್ರುವ ರಾಠಿ ಬಂದಿದ್ದು ಜರ್ಮನಿಯಿಂದ. ಇವರಿಬ್ಬರ ಬಳಿಕ ಬೆಳಕಿಗೆ ಬಂದ ನೇಹಾ ಬೋರಾ ಹೇಳುತ್ತಾಳೆ ಈ ಹೋರಾಟದ ಐಡಿಯಾ ಸಿಕ್ಕಿದ್ದು ಬಾಂಗ್ಲಾದಲ್ಲಿ ಶುರುವಾದ ಇಸ್ಲಾಮಿಕ ಮೂಲಭೂತವಾದಿ ಬಂಡುಕೋರರಿಂದ ಎಂದು. ಅದೇ ನೇಹಾ ಬೋರ ಹೆಗಲ ಮೇಲೆ ಕೈಹಾಕಿ ನಿಂತು ರಾಹುಲ್ ಗಾಂಧಿ ಪೋಸ್ ಕೊಡುತ್ತಾರೆ. ಈ ನೇಹಾ ಬೋರಾ ಯಾರು ಎಂಬುದಕ್ಕೆ ಒಂದೇ ಒಂದು ಉದಾಹರಣೆ ಕೊಡುತ್ತೇನೆ, ಕೇಳಿ. ಈ ನೇಹಾ ಬೋರಾ ಎಂಬ ‘ಕಾಕ್ರೋಚ್ ಲೀಡರ್’ AISA ಎಂಬ ಹೆಸರಿನ ನಕ್ಸಲ್ ಗ್ರೂಪ್ ಗೆ ಸೇರಿದವಳು!! ಹಾಗೆಯೇ ಆಕೆಯ ಸಿದ್ಧಾಂತ ಏನು ಗೊತ್ತಾ?! 2010 ರಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ 76 CRPF ಯೋಧರು ಮೃತಪಟ್ಟಿದ್ದರು! ನೇಹಾ ಬೋರಾಳ ಇದೇ AISA ನಕ್ಸಲ್ ಗ್ರೂಪ್ ಇದನ್ನು JNU ನಲ್ಲಿ ಸಂಭ್ರಮಿಸಿತ್ತು. ಕಾಂಗ್ರೆಸ್ ಪಕ್ಷ ತನ್ನ ಸೋಲಿನ ಮೂಲ ಶೋಧಿಸುವ ಬದಲು ಈ ವಿದೇಶಿ ಶಕ್ತಿಗಳ ಜೊತೆಗೂಡಿ ಭಾರತದಲ್ಲಿ ಬುಡಮೇಲು ಕೃತ್ಯಕ್ಕೆ ಕೈಹಾಕಿರುವುದು, ಆಮೂಲಕ ತಾನು ಅಧಿಕಾರದ ಗದ್ದುಗೆ ಏರಬಹುದು ಎಂಬುದು ನಿಮ್ಮ ಬಾಲಿಶತನವನ್ನು ತೋರುತ್ತದೆ. ನಿಮ್ಮ ಮೂರ್ಖತನವನ್ನು ತೋರಿಸುತ್ತದೆ. ದೇಶದ ಬಗ್ಗೆ ನಿಮ್ಮ ಬದ್ಧತೆಯನ್ನು ತೋರಿಸುತ್ತದೆ. ಸಿಜೆಪಿ-ಕಾಂಗ್ರೆಸ್ ಒಂದೇ ಎಂದು ಹೇಳುವ ಮೂಲಕ ಈಗ ಇರುವುದು ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಅಲ್ಲ, ದೇಶವಿರೋಧಿ ಸೋನಿಯಾ–ರಾಹುಲ್ ಕಾಂಗ್ರೆಸ್ ಎಂಬುದನ್ನು ನೀವೇ ಎತ್ತಿ ತೋರಿಸಿದ್ದೀರಿ. CAA ವಿರುದ್ಧ ಗದ್ದಲ ಮಾಡಿದವರು ಯಾರು? Art. 370 ರದ್ದತಿ ವಿರೋಧದ ಹಿಂದೆ ಇದ್ದವರು ಯಾರು? NEET ವಿರುದ್ಧ ಅನಗತ್ಯ ಗೊಂದಲ ಸೃಷ್ಟಿ ಮಾಡಿದವರು ಯಾರು? SIR ವಿರುದ್ಧ ಅಪಪ್ರಚಾರ ಮಾಡುತ್ತಿರುವುದರ ಹಿಂದೆ ಇದ್ದವರು ಯಾರು, ಉದ್ದೇಶ ಏನು ಎಂಬುದೆಲ್ಲ ಬಟಾ ಬಯಲಾಗಿದೆ ಎಂದು ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

