HomeKarnatakaBIG NEWS: ನನಗೆ ಗಡುವು ನೀಡಲು ವಿಜಯೇಂದ್ರ ಯಾರು? ಆತನ ಸಾಧನೆಯೇನು?; ಕೆ.ಎಸ್.ಈಶ್ವರಪ್ಪ ವಾಗ್ದಾಳಿ

BIG NEWS: ನನಗೆ ಗಡುವು ನೀಡಲು ವಿಜಯೇಂದ್ರ ಯಾರು? ಆತನ ಸಾಧನೆಯೇನು?; ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ: ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಡುವು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಈಶ್ವರಪ್ಪ, ನನಗೆ ಗಡುವು ನೀಡಲು ವಿಜಯೇಂದ್ರ ಯಾರು? ಎಂದು ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ.ಎಸ್.ಈಶ್ವರಪ್ಪ ಮತ್ತೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಕ್ಕಳ ವಿರುದ್ಧ ಗುಡುಗಿದ್ದಾರೆ. ನನಗೆ ಗಡುವು ನೀಡಲು ಬಿಜೆಪಿಯಲ್ಲಿ ವಿಜಯೇಂದ್ರ ಸಾಧನೆ ಏನು? ಪಕ್ಷಕ್ಕೆ ಆತ ನೀಡಿರುವ ಕೊಡುಗೆ ಏನು? ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.

ಆತನ ತಂದೆ ಪಕ್ಷವನ್ನು ಕಟ್ಟಿದ್ದಾರೆ. ಆದರೆ ವಿಜಯೇಂದ್ರ ಏನು ಮಾಡಿದ್ದಾನೆ? ರಾತ್ರೋ ರಾತ್ರಿ ದೆಹಲಿಗೆ ತೆರಳಿ ವರಿಷ್ಠರ ಬಳಿ ಹೋಗಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮೊದಲು ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಲಿ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular