HomeLatest NewsBIG NEWS: ಡಿಕೆಶಿ ಸಿಎಂ ಆಗ್ತಾರೋ, ಪಿಎಂ ಆಗ್ತಾರೋ ಅದು ಹೈಕಮಾಂಡ್ ಗೆ ಬಿಟ್ಟದ್ದು ಎಂದ...

BIG NEWS: ಡಿಕೆಶಿ ಸಿಎಂ ಆಗ್ತಾರೋ, ಪಿಎಂ ಆಗ್ತಾರೋ ಅದು ಹೈಕಮಾಂಡ್ ಗೆ ಬಿಟ್ಟದ್ದು ಎಂದ ಸಚಿವ ರಾಜಣ್ಣ

ತುಮಕೂರು: ಸೆಪ್ಟೆಂಬರ್ ನಲ್ಲಿ ರಾಜ್ಯ ರಾಜಕರಾಣದಲಿ ಭಾರಿ ಬದಲಾವಣೆಯಾಗಲಿದೆ ಎಂದು ಬಾಂಬ್ ಸಿಡಿಸಿದ್ದ ಸಚಿವ ಕೆ.ಎನ್.ರಾಜಣ್ಣ ಬಳಿಕ ತಮ್ಮ ಹೇಳಿಕೆಗಳಿಗೆ ನನ್ನ ರಾಜಕೀಯ ಅನುಭವದಿಂದ ಹೇಳುತ್ತಿದ್ದೇನೆ. ಈ ಬಗ್ಗೆ ನನಗೆ ಯಾರೂ ಹೇಳಿಲ್ಲ ಎಂದು ಹೇಳುವ ಮೂಲಕ ಸಮಜಾಯಿಷಿ ನೀಡಿದ್ದರು. ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ನಾಡಿನ ಪ್ರಭುವಾಗಲಿ ಎಂಬ ಸ್ವಾಮೀಜಿಗಳ ಹೇಳಿಕೆ ವಿಚಾರವಾಗಿ ಅದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ, ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೋ, ಪಿಎಂ ಆಗ್ತಾರೋ ಅದು ಹೈಕಮಾಂಡ್ ಗೆ ಬಿಟ್ಟಿದ್ದು, ಈ ಬಗ್ಗೆ ಹೈಕಮಾಂಡ್ ನವರು ನಿರ್ಧಾರ ಮಾಡ್ತಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಸೆಪ್ಟೆಂಬರ್ ನಲ್ಲಿ ರಾಜಕೀಯ ಕ್ರಾಂತಿ ಹೇಳಿಕೆ ವಿಚಾರವಾಗಿ, ಕ್ರಾಂತಿ ಎಂದರೆ ಹಸಿರು ಕ್ರಾಂತಿಯೂ ಇರಬಹುದು. ನಾನು ಹೇಳಿದ್ದು ಕಾಅಂಗ್ರೆಸ್ ನಲ್ಲಿ ಕ್ರಾಂತಿಯೆಂದಲ್ಲ. ಯಾವ ಕ್ರಾಂತಿ ಬೇಕಾದರೂ ಆಗಿರಬಹುದು. ಕಾಂಗ್ರೆಸ್ ನಲ್ಲಿ ಮಾತ್ರ ಕ್ರಾಂತಿ ಎಂದು ಯಾಕೆ ಭಾವಿಸುತ್ತೀರಿ? ಬಿಜೆಪಿಯಲ್ಲಿಯೂ ಕ್ರಾಂತಿ ಆಗುತ್ತಿದೆ. ಕೇಂದ್ರದಲ್ಲೂ ಕ್ರಾಂತಿಯಾಗಬಹುದು. ನನ್ನ ಪ್ರಕಾರ ಕಾಂಗ್ರೆಸ್ ನಲ್ಲಿ ಮೂರು ಪವರ್ ಸೆಂಟರ್ ಗಳಿವೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಅಡ್ವಾಣಿಗೆ 75 ವರ್ಷ ಆಗಿದ್ದಕ್ಕೆ ಪಿಎಂ ಹುದ್ದೆ ತಪ್ಪಿಸಿದ್ರು. ಕೇಂದ್ರ ಬಿಜೆಪಿಯಲ್ಲಿಯೂ ಕ್ರಾಂತಿಯಾಗಬಹುದು. ಬಿಜೆಪಿಯಲ್ಲಿ ಬೆಳವಣಿಗೆಗಳು ನಡೆಯುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular