HomeKarnatakaBIG NEWS: ಸಿಲಿಂಡರ್ ಅಭಾವ: ಸೌದೆ ಒಲೆ ಬಳಸುವಂತೆ ಸಚಿವ ಮುನಿಯಪ್ಪ ಮನವಿ

BIG NEWS: ಸಿಲಿಂಡರ್ ಅಭಾವ: ಸೌದೆ ಒಲೆ ಬಳಸುವಂತೆ ಸಚಿವ ಮುನಿಯಪ್ಪ ಮನವಿ

ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ 30ನೇ ದಿನಕ್ಕೆ ಕಾಲಿಟ್ಟಿದೆ. ಎಲ್ ಪಿಜಿ ಸಿಲಿಂಡರ್, ತೈಲ ಕೊರತೆ ಎದುರಾಗಿದ್ದು, ಒಂದೆಡೆ ಹೋಟೆಲ್ ಉದ್ಯಮಗಳು ಬಂದ್ ಆಗುತ್ತಿವೆ. ಮತ್ತೊಂದೆಡೆ ಅಡುಗೆ ಸಿಲಿಂಡರ್ ಸಿಗದೇ ಜನರು ಪರದಾಡುತ್ತಿದ್ದಾರೆ.

ಯುದ್ಧದ ಪರಿಣಾಮ ಕರ್ನಾಟಕದ ಮೇಲೂ ಎಫೆಕ್ಟ್ ಆಗಿದ್ದು, ಅಡುಗೆ ಅನಿಲ ಅಭಾವ ಮುಂದುವರಿದಿದೆ. ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್, ಕೈಗಾರಿಕೆಗಳು ಸ್ಥಗಿತಗೊಳ್ಳುತ್ತಿವೆ. ಆಟೋ ಗ್ಯಾಸ್ ಗಳು ಸಿಗದೇ ಆಟೋ ಚಾಲಕರ ಬದುಕು ದುಸ್ಥರವಾಗಿದೆ. ಈ ಮಧ್ಯೆ ಆಹಾರ ಸಚಿವ ಕೆ.ಹೆಚ್​.ಮುನಿಯಪ್ಪ, ಸಿಲಿಂಡರ್​ ಅಭಾವ ಇರುವುದರಿಂದ ಸೌದೆ ಒಲೆ ಬಳಸುವಂತೆ ಕರೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ಖಾಸಗಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮುನಿಯಪ್ಪ, ಸಿಲಿಂಡರ್​ ಅಭಾವ ಇರುವುದರಿಂದ ಹಳ್ಳಿ ಭಾಗದ ಜನರು ಸೌದೆ ಒಲೆಗಳನ್ನು ಬಳಸಿ. ಬೆಂಗಳೂರು ಬಿಟ್ಟು 40 ಕಿಲೋಮೀಟರ್ ಹೋದರೆ ಸೌದೆ ಸಿಗುತ್ತದೆ. ಅರಣ್ಯ ಪ್ರದೇಶದ ಹಸಿ ಮರ ಬಿಟ್ಟು ಒಣ ಕಟ್ಟಿಗೆ ಬಳಸುವಂತೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಸಿಲಿಂಡರ್​ ಕೊರತೆಗೆ ಕೇಂದ್ರ ಸರ್ಕಾರ ಕಾರಣ. ಡಿಸ್ಟ್ರಿಬ್ಯೂಟರ್​ಗಳ ಮೇಲೆ ದೂರು ಬರುತ್ತಿವೆ. ಡೊಮೆಸ್ಟಿಕ್ ಸಿಲಿಂಡರ್ ಈ ಹಿಂದಿನಂತೆ ಮುಂದುವರಿಯುತ್ತೆ. ಆಯಿಲ್ ಕಂಪನಿಗಳಿಗೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ.

ಸಕಾಲಕ್ಕೆ ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸಬೇಕು. ಸಿಲಿಂಡರ್​ಗಾಗಿ ಯಾರು ಕೂಡ ಕ್ಯೂ ನಿಲ್ಲಬಾರದು. ನೀವು ಬುಕ್ಕಿಂಗ್ ಮಾಡಿದ್ದರೆ ನಿಮ್ಮ ಮನೆಗೆ ಸಿಲಿಂಡರ್ ಬರುತ್ತೆ. ಕೇಂದ್ರ ಸರ್ಕಾರ ಗ್ಯಾಸ್​ ಪೂರೈಸಲು ಪ್ರಯತ್ನ ಮಾಡುತ್ತಿದೆ. ಈಗ 40% ಸಿಲಿಂಡರ್ ಪೂರೈಕೆ ಆಗುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯಕ್ಕೆ ವಾಣಿಜ್ಯ ಎಲ್​​ಪಿಜಿ ಸಿಲಿಂಡರ್ ಪೂರೈಕೆಯನ್ನು ಶೇ. 68 ಗೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರವು ಇಂದಿನಿಂದಲೇ ಹೆಚ್ಚುವರಿ ವಾಣಿಜ್ಯ ಎಲ್​​ಪಿಜಿ ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳು, ಆಸ್ಪತ್ರೆ ಮತ್ತು ಇತರೆ ಅವಶ್ಯಕ ಸಂಸ್ಥೆಗಳಿಗೆ 4200 ಸಿಲಿಂಡರ್ ಹಂಚಿಕೆ ಮಾಡಲಾಗಿದೆ. ಸರ್ಕಾರಿ, ಪಿಎಸ್​​ಯು ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು, ಬಸ್ ನಿಲ್ದಾಣಗಳ ಕ್ಯಾಂಟೀನ್‌ಗಳಿಗೆ 1200 ಸಿಲಿಂಡರ್ ಹಂಚಲಾಗಿದೆ ಎಂದರು.

ಹೋಟೆಲ್, ಡಾಬಾ, ರೆಸ್ಟೋರೆಂಟ್, ಕ್ಯಾಂಟೀನ್, ಕೇಫೆ, ಬೇಕರಿ, ಸಮುದಾಯ ಅಡುಗೆ ಕೇಂದ್ರಗಳು, ಪಿ.ಜಿ, ಫುಡ್ ವಸ್ತು ನಿಲಯಗಳಿಗೆ 17500 ಸಿಲಿಂಡರ್, ಬೀಜ ಸಂಸ್ಕರಣೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು, ಜೈವೋದ್ಯಮ, ಮೀನುಗಾರಿಕೆ, ಕೋಳಿ ಸಾಕಣೆ, ರೇಷ್ಮೆ ಹುಳು ಸಾಕಣೆ ಕೇಂದ್ರಗಳಿಗೆ 6000, ಇತರ ಅವಶ್ಯಕತೆ ಆಧಾರದ ಮೇಲೆ 563 ಸಿಲಿಂಡರ್‌ ಸೇರಿದಂತೆ ಒಟ್ಟು 29463 ಕಮರ್ಷಿಯಲ್ ಸಿಲಿಂಡರ್ ನಿತ್ಯ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular