HomeEntertainment'ಜುಗಲ್ ಬಂದಿ' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ಜುಗಲ್ ಬಂದಿ’ ಚಿತ್ರದ ಲಿರಿಕಲ್ ಹಾಡು ರಿಲೀಸ್

ದಿವಾಕರ್ ಡಿಂಡಿಮ ನಿರ್ದೇಶನದ ‘ಜುಗಲ್ ಬಂದಿ’ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿ ರಾಜ್ಯದೆಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಜುಗಲ್ ಬಂದಿ ಚಿತ್ರತಂಡ ಯೂಟ್ಯೂಬ್ ನಲ್ಲಿ ಲಿರಿಕಲ್ ಹಾಡೊಂದನ್ನು ನಿನ್ನೆ ಬಿಡುಗಡೆ ಮಾಡಿದೆ.

”ನಿನಗೂ ಭೂಮಿಯಲ್ಲೇ” ಎಂಬ ಈ ಹಾಡಿಗೆ ತಿರುಮೂರ್ತಿ ಧ್ವನಿಯಾಗಿದ್ದು, ಪ್ರದ್ದ್ಯೋತ್ತನ್ ಸಂಗೀತ ಮತ್ತು ದಿವಾಕರ್ ಡಿಂಡಿಮ ಸಾಹಿತ್ಯವಿದೆ.

ಈ ಸಿನಿಮಾದಲ್ಲಿ ‘ಕಾಂತಾರ’ ಖ್ಯಾತಿಯ ಮಾನಸಿ ಸುಧೀರ್ ಸೇರಿದಂತೆ ಯಶ್ ಶೆಟ್ಟಿ, ಸಂತೋಷ್ ಆಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನ ಕೊಟ್ಟಿಗೆ, ಚಂದ್ರಪ್ರಭ, ರಂಜನ್, ಅರವಿಂದ್ ರಾವ್, ಅನಂತ್ ವೇಳು ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದು, ಪ್ರಸಾದ್ ಎಚ್ ಎಂ ಸಂಕಲನವಿದೆ. ಬಾಲಕೃಷ್ಣ ಯಾದವ್ ಮತ್ತು ಶ್ರೀನಿವಾಸ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular