HomeKarnatakaಪ್ರಧಾನಿ ಮೋದಿ ನಾಯಕತ್ವಕ್ಕೆ ಮೆಚ್ಚಿ ಬಿಜೆಪಿ ಸೇರಿದ್ದೇನೆ : ಸಂಸದೆ ಸುಮಲತಾ

ಪ್ರಧಾನಿ ಮೋದಿ ನಾಯಕತ್ವಕ್ಕೆ ಮೆಚ್ಚಿ ಬಿಜೆಪಿ ಸೇರಿದ್ದೇನೆ : ಸಂಸದೆ ಸುಮಲತಾ

ಬೆಂಗಳೂರು : ಪ್ರಧಾನಿ ಮೋದಿ ಅವರ ನಾಯಕತ್ವ ಗುಣ ಮೆಚ್ಚಿ ನಾನು ಬಿಜೆಪಿಗೆ ಬಂದಿದ್ದೇನೆ ಎಂದು ಸಂಸದೆ ಸುಮಲತಾ ಹೇಳಿದರು.

ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಂಸದೆ ಸುಮಲತಾ ಇವತ್ತಿನ ದಿನ ನನ್ನ ರಾಜಕೀಯ ಜೀವನದಲ್ಲಿ ಮಹತ್ವ ಪಡೆದುಕೊಂಡ ಸುದಿನ. ಐದು ವರ್ಷಗಳ ಹಿಂದೆ ಐತಿಹಾಸಿಕ ಗೆಲುವು ಸಿಕ್ಕಿತ್ತು. ಆ ಚುನಾವಣೆ ಎಂದೆಂದೂ ಮರೆಯಲ್ಲ ಎಂದರು. ಈ ಐದು ವರ್ಷಗಳ ಪ್ರಯಾಣದಲ್ಲಿ ಸಾಕಷ್ಟು ಪಾಠ ಕಲಿತಿದ್ದೇನೆ. ಬಿಜೆಪಿಯ ಸಾಕಷ್ಟು ಹಿರಿಯರ ಬೆಂಬಲ, ಸಹಕಾರ ಸಿಕ್ಕಿದೆ, ಎಲ್ಲರಿಗೂ ಧನ್ಯವಾದ ಎಂದರು.

ಐದು ವರ್ಷದ ಹಿಂದೆ ಮೋದಿಯವ್ರು ಮಂಡ್ಯಕ್ಕೆ ಬಂದಿದ್ರು. ಅವರೂ ನನ್ನ ಪರ ಮತ ಕೇಳಿ ಜನರ ಸಹಕಾರ ಕೇಳಿದ್ರು, ಇದನ್ನು ನಾನು ಯಾವತ್ತೂ ಮರೆಯಲ್ಲ ಎಂದರು. ಪ್ರಧಾನಿ ಮೋದಿ ಅವರ ನಾಯಕತ್ವ ಗುಣ ಮೆಚ್ಚಿ ನಾನು ಬಿಜೆಪಿಗೆ ಬಂದಿದ್ದೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular