ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ನಿರುದ್ಯೋಗಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಈ ವರ್ಷದ ಅತಿ ದೊಡ್ಡ ಅಪ್ರೆಂಟಿಸ್ ನೇಮಕಾತಿ ಪ್ರಕ್ರಿಯೆಯನ್ನು ಬ್ಯಾಂಕ್ ಕೈಗೊಂಡಿದೆ.
ಅಪ್ರೆಂಟಿಸ್ಶಿಪ್ ಕಾಯ್ದೆ 1961ರ ಅನ್ವಯ, ದೇಶಾದ್ಯಂತ ವಿವಿಧ ಬ್ಯಾಂಕ್ ಶಾಖೆಗಳಲ್ಲಿ ಖಾಲಿ ಇರುವ ಒಟ್ಟು 7,150 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಎಸ್ಬಿಐ ಈ ಹಿಂದೆ ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಗಡುವನ್ನು ಜೂನ್ 15, 2026 ರವರೆಗೆ ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಕೆ ವಿವರ:
- ಅಧಿಕೃತ ವೆಬ್ಸೈಟ್: https://sbi.bank.in/web/careers/current-openings
- ಅರ್ಜಿ ಸಲ್ಲಿಕೆ ಆರಂಭ: ಮೇ 19, 2026.
- ಕೊನೆಯ ದಿನಾಂಕ: ಜೂನ್ 15, 2026.
- ತರಬೇತಿ ಅವಧಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್ಶಿಪ್ ತರಬೇತಿ ನೀಡಲಾಗುತ್ತದೆ. ಪರೀಕ್ಷೆಯ ದಿನಾಂಕಗಳನ್ನು ಬ್ಯಾಂಕ್ ಶೀಘ್ರದಲ್ಲೇ ಪ್ರತ್ಯೇಕವಾಗಿ ಪ್ರಕಟಿಸಲಿದೆ.
ಅರ್ಹತೆಗಳು:
- ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Degree) ಪಡೆದಿರಬೇಕು.
- ವಯೋಮಿತಿ: ಏಪ್ರಿಲ್ 30, 2026 ರಂತೆ ಅಭ್ಯರ್ಥಿಗಳ ವಯಸ್ಸು 20 ರಿಂದ 28 ವರ್ಷಗಳ ನಡುವೆ ಇರಬೇಕು. ಸರ್ಕಾರಿ ನಿಯಮದಂತೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆ ನಾಲ್ಕು ಹಂತಗಳಲ್ಲಿ ನಡೆಯಲಿದೆ:
- ಲಿಖಿತ ಪರೀಕ್ಷೆ
- ಸ್ಥಳೀಯ ಭಾಷಾ ಪರೀಕ್ಷೆ
- ಪ್ರಮಾಣಪತ್ರಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
- ಸಾಮಾನ್ಯ, ಒಬಿಸಿ (OBC), ಮತ್ತು ಇಡಬ್ಲ್ಯುಎಸ್ (EWS) ಅಭ್ಯರ್ಥಿಗಳಿಗೆ: ರೂ. 300.
- ಎಸ್ಸಿ (SC), ಎಸ್ಟಿ (ST) ಮತ್ತು ಅಂಗವಿಕಲ (PWD) ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ (ವಿನಾಯಿತಿ ನೀಡಲಾಗಿದೆ).
ಶುಲ್ಕವನ್ನು ಆನ್ಲೈನ್ ಮೂಲಕ ಮಾತ್ರ ಪಾವತಿಸಬೇಕಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ನೇಮಕಾತಿ ಪೋರ್ಟಲ್ನಲ್ಲಿರುವ ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಲು ಬ್ಯಾಂಕ್ ಸೂಚಿಸಿದೆ.

