HomeLatest NewsJOB ALERT : ರೈಲ್ವೇ ಗ್ರೂಪ್-ಡಿ 22,195 ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಆ....

JOB ALERT : ರೈಲ್ವೇ ಗ್ರೂಪ್-ಡಿ 22,195 ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಆ. 3 ರಿಂದ CBT ಪರೀಕ್ಷೆ ಆರಂಭ |RRB Recruitment 2026

ನವದೆಹಲಿ: ರೈಲ್ವೇ ಇಲಾಖೆಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ರೈಲ್ವೇ ನೇಮಕಾತಿ ಮಂಡಳಿ (RRB) ಸಿಹಿಸುದ್ದಿ ನೀಡಿದೆ. ದೇಶದ ವಿವಿಧ ರೈಲ್ವೇ ವಲಯಗಳಲ್ಲಿ ಖಾಲಿ ಇರುವ 22,195 ಗ್ರೂಪ್-ಡಿ (ಲೆವೆಲ್-1) ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಪರೀಕ್ಷೆಗಳು ಆಗಸ್ಟ್ 3ರಿಂದ ಆಗಸ್ಟ್ 21ರವರೆಗೆ ವಿವಿಧ ಹಂತಗಳಲ್ಲಿ ನಡೆಯಲಿವೆ.ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಆರ್‌ಆರ್‌ಬಿ ಪ್ರಮುಖ ಮಾಹಿತಿಯನ್ನೂ ಬಿಡುಗಡೆ ಮಾಡಿದೆ. ಪರೀಕ್ಷೆ ಆರಂಭವಾಗುವ 10 ದಿನಗಳ ಮೊದಲು ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರದ ನಗರವನ್ನು ತಿಳಿಸುವ ‘ಸಿಟಿ ಇಂಟಿಮೇಷನ್ ಸ್ಲಿಪ್’ ಅನ್ನು ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಹಾಗೆಯೇ, ಪರೀಕ್ಷೆಯ 4 ದಿನಗಳ ಮೊದಲು ಪ್ರವೇಶ ಪತ್ರ (ಅಡ್ಮಿಟ್ ಕಾರ್ಡ್/ಹಾಲ್ ಟಿಕೆಟ್) ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.

ಈ ಬೃಹತ್ ನೇಮಕಾತಿ ಪ್ರಕ್ರಿಯೆಯಲ್ಲಿ ರೈಲ್ವೇ ಇಲಾಖೆಯ ಹಲವು ಪ್ರಮುಖ ವಿಭಾಗಗಳ ಹುದ್ದೆಗಳು ಭರ್ತಿಯಾಗಲಿವೆ. ಅವುಗಳಲ್ಲಿ ಪ್ರಮುಖವಾಗಿ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಪಾಯಿಂಟ್ಸ್‌ಮನ್
  • ಅಸಿಸ್ಟೆಂಟ್
  • ಟ್ರ್ಯಾಕ್ ಮೆಂಟೈನರ್
  • ಅಸಿಸ್ಟೆಂಟ್ ಲೋಕೋ ಶೆಡ್
  • ಅಸಿಸ್ಟೆಂಟ್ ಆಪರೇಷನ್ಸ್ ಸೇರಿದಂತೆ ತಾಂತ್ರಿಕ ಮತ್ತು ತಾಂತ್ರಿಕೇತರ ಸಹಾಯಕ ಹುದ್ದೆಗಳು ಸೇರಿವೆ.

ದಕ್ಷಿಣ ಮಧ್ಯ ರೈಲ್ವೆ (ಸಿಕಂದರಾಬಾದ್ ವಲಯ) ವ್ಯಾಪ್ತಿಯಲ್ಲಿ ಒಟ್ಟು 1,012 ಹುದ್ದೆಗಳು ಲಭ್ಯವಿರುವುದು ವಿಶೇಷ.

ಆಯ್ಕೆ ಪ್ರಕ್ರಿಯೆ

ರೈಲ್ವೇ ಗ್ರೂಪ್-ಡಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಹಲವು ಹಂತಗಳಲ್ಲಿ ನಡೆಯಲಿದೆ.

  • ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ಬಳಿಕ ಅರ್ಹರಾದವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ (PET)
  • ನಂತರ ದಾಖಲೆಗಳ ಪರಿಶೀಲನೆ (Document Verification)
  • ಕೊನೆಗೆ ವೈದ್ಯಕೀಯ ಪರೀಕ್ಷೆ (Medical Examination)

ಈ ಎಲ್ಲಾ ಹಂತಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಅಂತಿಮವಾಗಿ ರೈಲ್ವೇ ಗ್ರೂಪ್-ಡಿ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular