HomeKarnatakaJOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ಇಂದು, ನಾಳೆ ಆಳ್ವಾಸ್ ನಲ್ಲಿ 'ಉದ್ಯೋಗ ಮೇಳ'.!

JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ಇಂದು, ನಾಳೆ ಆಳ್ವಾಸ್ ನಲ್ಲಿ ‘ಉದ್ಯೋಗ ಮೇಳ’.!

ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಇಂದು (ಜೂ.7) ಹಾಗೂ ನಾಳೆ (ಜೂ.8) ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಿಎಸ್ಆರ್ ಚಟುವಟಿಕೆಯಡಿ ಉದ್ಯೋಗ ಮೇಳವನ್ನು ಉಚಿತವಾಗಿ ಆಯೋಜಿಸಿದ್ದು, ನೇಮಕಾತಿ ನಡೆಸುವ ಕಂಪನಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. 300ಕ್ಕೂ ಅಧಿಕ ಕಂಪನಿಗಳು ನೋಂದಾಯಿಸಿಕೊಂಡಿದ್ದು, 10 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಸಿದ್ದಾರೆ.
ವೈದ್ಯಕೀಯ, ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲೆ, ನಿರ್ವಹಣೆ, ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೋಮಾ, ಪಿಯುಸಿ, ಎಸ್ಎಸ್ಎಲ್ಸಿ, ಅಂತಿಮ ಸೆಮಿಸ್ಟರ್ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಐಟಿ ವಲಯದಲ್ಲಿ 207 ಸಾಫ್ಟ್ವೇರ್ ಇಂಜಿನಿಯರಿಂಗ್ ಹುದ್ದೆ ಸೇರಿದಂತೆ 20 ಕಂಪನಿಗಳಲ್ಲಿ 843 ಉದ್ಯೋಗಾವಕಾಶ ಇದೆ. ಯಾವುದೇ ಹಿನ್ನೆಲೆಯ ಪದವೀಧರರಿಗೆ ಅಮೆಜಾನ್ ಮತ್ತು ಟಿಸಿಎಸ್ ಕಂಪನಿಗಳು 400ಕ್ಕೂ ಅಧಿಕ ಉದ್ಯೋಗ ನೀಡಲಿವೆ. ಉತ್ಪಾದನಾ ವಲಯದಲ್ಲಿ 70,000ಕ್ಕೂ ಅಧಿಕ ಉದ್ಯೋಗದಾತರ 52 ಕಂಪನಿಗಳು ವಲಯದಲ್ಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಎಫ್ಎಸ್ಐ ವಲಯದಲ್ಲಿ 28 ಕಂಪನಿಗಳಿಂದ 2300 ಹುದ್ದೆಗಳು, ಐಟಿಇಎಸ್ ವಲಯದಲ್ಲಿ 4000ಕ್ಕೂ ಅಧಿಕ ಉದ್ಯೋಗಗಳು, ಫಾರ್ಮಾದಲ್ಲಿ 700ಕ್ಕೂ ಅಧಿಕ ಉದ್ಯೋಗಗಳು, ಆರೋಗ್ಯ ವಲಯದಲ್ಲಿ 24 ಆರೋಗ್ಯ ಸಂಸ್ಥೆಗಳಿಂದ ಒಂದು ಸಾವಿರಕ್ಕೂ ಅಧಿಕ ಉದ್ಯೋಗಗಳು, ಮಾರಾಟ ವಲಯದಲ್ಲಿ 47 ಕಂಪನಿಗಳಿಂದ 3300 ಉದ್ಯೋಗಗಳು, ಮಾಧ್ಯಮ ವಲಯದಲ್ಲಿ 75 ಹೆಚ್ಚು ಖಾಲಿ ಹುದ್ದೆಗಳಿವೆ, ನಿರ್ಮಾಣ ವಲಯದಲ್ಲಿ 600ಕ್ಕೂ ಅಧಿಕ ಉದ್ಯೋಗ, ಆತಿಥ್ಯ ವಿಭಾಗದಲ್ಲಿ 12 ಕಂಪನಿಗಳಲ್ಲಿ 295 ಹುದ್ದೆಗಳಿವೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular