HomeJobsJOB ALERT : 'ಏಕಲವ್ಯ ಮಾದರಿ ವಸತಿ ಶಾಲೆ'ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಏ.11...

JOB ALERT : ‘ಏಕಲವ್ಯ ಮಾದರಿ ವಸತಿ ಶಾಲೆ’ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಏ.11 ರಂದು ‘ವಾಕ್ ಇನ್ ಇಂಟರ್ವ್ಯೂ’

ಬಳ್ಳಾರಿ : ಬಳ್ಳಾರಿ ತಾಲ್ಲೂಕಿನ ಕೊಳಗಲ್ಲಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ 2025-26ನೇ ಸಾಲಿಗೆ ವಿವಿಧ ಹುದ್ದೆಗಳ ಭರ್ತಿಗೆ ಏ.11 ರಂದು ವಾಕ್ ಇನ್ ಇಂಟರ್ವ್ಯೂ ಗೆ ಅರ್ಹ ಮತ್ತು ಅನುಭವವುಳ್ಳ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.

ಅರ್ಹ 21 ರಿಂದ 60 ವರ್ಷ ವಯೋಮಿತಿಗೊಳಪಟ್ಟ, ನವೋದಯ ಅಥವಾ ಕೇಂದ್ರಿಯ ವಿದ್ಯಾಲಯ ಶಾಲೆಗಳಲ್ಲಿ ಉಪನ್ಯಾಸ ಮಾಡಿದ ಅನುಭವವುಳ್ಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ವಾಕ್ ಇನ್ ಇಂಟರ್ವ್ಯೂ ಅಂದು ಬೆಳಿಗ್ಗೆ 09 ಗಂಟೆಗೆ ಕೊಳಗಲ್ಲಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಏರ್ಪಡಿಸಲಾಗಿದೆ. ಹುದ್ದೆಗಳು ತಾತ್ಕಾಲಿಕ ಆಗಿರುತ್ತವೆ.ಸಂದರ್ಶನಕ್ಕೆ ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ಶೈಕ್ಷಣಿಕ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಸಂದರ್ಶನ ಸಮಯದಲ್ಲಿ ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಹುದ್ದೆಗಳು
ಕನ್ನಡ ಶಿಕ್ಷಕ: ಹುದ್ದೆ 01, ಜೀವಶಾಸ್ತç ಶಿಕ್ಷಕ: ಹುದ್ದೆ 01, ಇಂಗ್ಲೀಷ್ ಭಾಷೆಯಲ್ಲಿ ತರಬೇತಿ ಪಡೆದ ಶಿಕ್ಷಕ-01, ಕನ್ನಡದಲ್ಲಿ ತರಬೇತಿ ಪಡೆದ ಪದವೀಧರ ಶಿಕ್ಷಕರು-02, ದೈಹಿಕ ಶಿಕ್ಷಕರು(ಪುರುಷ ಮತ್ತು ಮಹಿಳೆ)-01+01 ಮತ್ತು ಹಾಸ್ಟೆಲ್ ವಾರ್ಡನ್-01.
ವಿದ್ಯಾರ್ಹತೆ ಮತ್ತು ಹೆಚ್ಚಿನ ಮಾಹಿತಿಗಾಗಿ ನಗರದ ವಾಲ್ಮೀಕಿ ಭವನದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ದೂ.08392-242453 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular