HomeEntertainment'ಜಿಗರ್' ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ಜಿಗರ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಪ್ರವೀಣ್ ತೇಜ್ ಅಭಿನಯದ ‘ಜಿಗರ್’ ಚಿತ್ರದ ”ನಕ್ಷತ್ರ ಒಂದು” ಎಂಬ ಲಿರಿಕಲ್ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ವಿಜಯ ಪ್ರಕಾಶ್ ಹಾಗೂ ಸುನಿಧಿ ಗಣೇಶ್  ಧ್ವನಿಯಾಗಿದ್ದು, ರಿತ್ವಿಕ್ ಮುರುಳಿಧರ್ ಸಂಗೀತ ಸಂಯೋಜನೆ ನೀಡಿದ್ದಾರೆ. ಗಣೇಶ್ ಪರಶುರಾಮ್ ಸಾಹಿತ್ಯವಿದೆ.

ಆಕ್ಷನ್ ಡ್ರಾಮಾ  ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸೂರಿ ಕುಂದಾರ್ ಆಕ್ಷನ್ ಕಟ್ ಹೇಳಿದ್ದು, ಪ್ರವೀಣ್ ತೇಜ್ ಹಾಗೂ ವಿಜಯಶ್ರೀ ಕಲ್ಬುರ್ಗಿ ಪ್ರಮುಖ ಪಾತ್ರದಲ್ಲಿದ್ದಾರೆ.  ಜ್ಞಾನೇಶ್ ಬಿ ಮಾತಾಡ್ ಸಂಕಲನ, ಹಾಗೂ ಶಿವಸೇನಾ ಛಾಯಾಗ್ರಹಣವಿದೆ. ಯುಕೆ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಪೂಜಾ ವಸಂತ್ ಕುಮಾರ್ ನಿರ್ಮಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular