HomeIndiaಸಚಿವರ ಬೆಂಗಾವಲು ವಾಹನ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ದುರ್ಮರಣ; ಐವರ ಸ್ಥಿತಿ ಗಂಭೀರ

ಸಚಿವರ ಬೆಂಗಾವಲು ವಾಹನ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ದುರ್ಮರಣ; ಐವರ ಸ್ಥಿತಿ ಗಂಭೀರ

ಸಚಿವರ ಬೆಂಗಾವಲು ವಾಹನ ಭೀಕರ ಅಪಘಾತಕ್ಕೀಡಾಗಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಜಾರ್ಖಂಡ್ ಸಚಿವ ಚಂಪೈ ಸೊರೆನ್ ಅವರ ಎಸ್ಕಾರ್ಟ್ ವಾಹನ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಎಸ್ಕಾರ್ಟ್ ಚಾಲಕ ಕಾನ್ಸ್ ಟೇಬಲ್ ವಿನಯ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐವರು ಯೋಧರು ಗಾಯಗೊಂಡಿದ್ದಾರೆ.

ಚಂಪೈ ಸೊರೆನ್ ಅವರನ್ನು ಅವರ ಜಿಲ್ಲಿಂಗೊಡದಲ್ಲಿರುವ ಮನೆಗೆ ತಲುಪಿಸಿ ವಾಪಾಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಮನೋಜ್ ಭಗತ್, ಹರೀಶ್ ಲಗುರಿ, ಸಾವನ್ ಚಂದ್ರ ಹೆಂಬ್ರಾಮ್, ದಯಾಲ್ ಮಹತೋ ಸೇರಿದಂತೆ ಒಟ್ಟು ಐವರು ಯೋಧರೆಂದು ಗುರುತಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular