HomeKarnatakaBIG NEWS: ಅವಧಿಗೂ ಮೀರಿ ಸ್ಟಾರ್ ನಟರ ಭರ್ಜರಿ ಪಾರ್ಟಿ; ಜೆಟ್ ಲ್ಯಾಗ್ ರೆಸ್ಟೋಬಾರ್ ವಿರುದ್ಧ...

BIG NEWS: ಅವಧಿಗೂ ಮೀರಿ ಸ್ಟಾರ್ ನಟರ ಭರ್ಜರಿ ಪಾರ್ಟಿ; ಜೆಟ್ ಲ್ಯಾಗ್ ರೆಸ್ಟೋಬಾರ್ ವಿರುದ್ಧ FIR ದಾಖಲು

ಬೆಂಗಳೂರು: ಅವಧಿಗೂ ಮೀರಿ ಪಬ್ ತೆರೆದಿದ್ದ ಹಿನ್ನೆಲೆಯಲ್ಲಿ ಜೆಟ್ ಲ್ಯಾಗ್ ರೆಸ್ಟೋಬಾರ್ ಮಾಲೀಕನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಇತ್ತೀಚೆಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರ ಚಿತ್ರ ಬಿಡುಗಡೆಯಾಗಿತ್ತು. ಚಿತ್ರದ ಯಶಸ್ವಿ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ನಟರು ಬೆಂಗಳೂರಿನ ಒರಾಯನ್ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ರೆಸ್ಟೋಬಾರ್ ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಮಧ್ಯರಾತ್ರಿ ಒಂದುಗಂಟೆ ಕಳೆದರೂ ಜೆಟ್ ಲ್ಯಾಗ್ ಪಬ್ ಬಾಗಿಲು ಮುಚ್ಚಿರಲಿಲ್ಲ. ಬೆಳಗಿನ ಜಾವದವರೆಗೂ ಪಾರ್ಟಿ ನಡೆದಿದೆ ಎನ್ನಲಾಗಿದೆ.

ಅವಧಿ ಮೀರಿ ಪಬ್ ಓಪನ್ ಇದ್ದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಪಬ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೆಟ್ ಲ್ಯಾಗ್ ರೆಸ್ಟೋಬಾರ್ ಮಾಲೀಕ ಶಶಿರೇಖಾ ಜಗದೀಶ್ ಹಾಗೂ ಮ್ಯಾನೇಜ ಪ್ರಶಾಂತ್ ವಿರುದ್ಧ ಅಬಕಾರಿ ಕಾಯ್ದೆ, ಪೊಲೀಸ್ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular