HomeKarnatakaಜೆಡಿಎಸ್‌ನ ‘ನಥಿಂಗ್‌ ನೈಸ್‌’ ಅಭಿಯಾನಕ್ಕೆ ಹೊಸ ಬಲ

ಜೆಡಿಎಸ್‌ನ ‘ನಥಿಂಗ್‌ ನೈಸ್‌’ ಅಭಿಯಾನಕ್ಕೆ ಹೊಸ ಬಲ

ಬೆಂಗಳೂರು-ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ಯೋಜನೆಯಲ್ಲಿ ನೈಸ್ (NICE) ಸಂಸ್ಥೆ ಮಾಡಿರುವ ನಿಯಮಗಳ ಉಲ್ಲಂಘನೆ ಮತ್ತು ರೈತರಿಗೆ ಆಗಿರುವ ಅನ್ಯಾಯವನ್ನು ಸಾರ್ವಜನಿಕರ ಮುಂದಿಡಲು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ‘ನಥಿಂಗ್ ನೈಸ್’ (Nothing NICE) ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಸುದ್ದಿಗೋಷ್ಠಿ ಮತ್ತು ವೆಬ್‌ಸೈಟ್ ಬಿಡುಗಡೆ

ಸುದ್ದಿಗೋಷ್ಠಿಯಲ್ಲಿ ‘ನಥಿಂಗ್ ನೈಸ್’ ವೆಬ್‌ಸೈಟ್ ಮತ್ತು ಕ್ಯೂಆರ್ ಕೋಡ್ ಬಿಡುಗಡೆ ಮಾಡಲಾಯಿತು

ನೈಸ್ ರಸ್ತೆಗೆ ಟೋಲ್ ಏಕೆ ಕಟ್ಟಬಾರದು ಹಾಗೂ ಯೋಜನೆಯಲ್ಲಿನ ಲೋಪಗಳ ಬಗ್ಗೆ ಜನರಲ್ಲಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡುವುದು ಈ ಜನಾಂದೋಲನದ ಪ್ರಮುಖ ಗುರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೈಸ್‌ ಯೋಜನೆಗೆ ಸಂಬಂಧಿಸಿದ ದಾಖಲೆಗಳು, ಭೂಸ್ವಾಧೀನದ ವಿವರಗಳು, ರೈತರಿಗೆ ಪರಿಹಾರ ದೊರಕದಿರುವ ವಿಚಾರ, ಟೋಲ್‌ ಸಂಗ್ರಹದ ಕುರಿತು ಇರುವ ಪ್ರಶ್ನೆಗಳು ಹಾಗೂ ಯೋಜನೆಯ ಮೂಲ ಒಪ್ಪಂದದಲ್ಲಿನ ಷರತ್ತುಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಈ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಜೆಡಿಎಸ್‌ ಹೇಳಿದೆ. QR ಕೋಡ್‌ ಮೂಲಕ ಸಾರ್ವಜನಿಕರು ಸಂಬಂಧಿತ ಮಾಹಿತಿಯನ್ನು ಪಡೆಯುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ.

ಪೂರ್ಣಗೊಳ್ಳದ ಯೋಜನೆ ಮತ್ತು ರೈತರಿಗೆ ಅನ್ಯಾಯ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ 111 ಕಿ.ಮೀ. ಎಕ್ಸ್‌ಪ್ರೆಸ್‌ ಹೆದ್ದಾರಿ, 41 ಕಿ.ಮೀ. ಪೆರಿಫೆರಲ್ ರಿಂಗ್ ರಸ್ತೆ ಮತ್ತು 9.8 ಕಿ.ಮೀ. ಲಿಂಕ್ ರಸ್ತೆ ನಿರ್ಮಾಣಕ್ಕೆ ಮೂಲ ಒಪ್ಪಂದ ಮಾಡಿಕೊಳ್ಳಲಾಗಿತ್ತು. 26 ವರ್ಷ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ.

ಕಳಪೆ ಕಾಮಗಾರಿ ಹಾಗೂ ರೈತರಿಗೆ ಅನ್ಯಾಯ: ಪೆರಿಫೆರಲ್ ರಸ್ತೆಗಾಗಿ 554 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದರೂ, ರೈತರಿಗೆ ಪರಿಹಾರ ಸಿಕ್ಕಿಲ್ಲ. ಒಪ್ಪಂದದಂತೆ ಕಾಂಕ್ರೀಟ್ ರಸ್ತೆ ನಿರ್ಮಿಸದೆ, ಕೇವಲ ಡಾಂಬರ್ ರಸ್ತೆ ನಿರ್ಮಿಸಲಾಗಿದೆ.

ಸದನ ಸಮಿತಿಯ ವರದಿಯಂತೆ ನೈಸ್ ಸಂಸ್ಥೆಯು 22 ಷರತ್ತುಗಳ ಪೈಕಿ 16 ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ.

ಹೈಕೋರ್ಟ್ ಆದೇಶದ ಅನ್ವಯ, ಜಮೀನು ಕಳೆದುಕೊಂಡ ರೈತರಿಗೆ ತಕ್ಷಣವೇ ಭೂಮಿ ವಾಪಸ್ ನೀಡಬೇಕು.ಇಲ್ಲವಾದಲ್ಲಿ, ಭೂಮಿಗೆ ಬಡ್ಡಿ ಸಹಿತ ಸೂಕ್ತ ಪರಿಹಾರ ಒದಗಿಸಬೇಕು.ವಿವಾದಿತ ನೈಸ್ ಯೋಜನೆಯನ್ನು ತಕ್ಷಣವೇ ರಾಜ್ಯ ಸರ್ಕಾರದ ವಶಕ್ಕೆ ಪಡೆಯಬೇಕು.

ರಾಜ್ಯ ಸರ್ಕಾರದ ವಿರುದ್ಧ ಆರೋಪಗಳು

ಸರ್ಕಾರದ ವಿರುದ್ಧ ವಾಗ್ದಳಿ

ಐಸಿ ಹಾಗೂ ಪಾರ್ಕ್‌ಗಳಲ್ಲಿ ಶೇ.5 ರಷ್ಟು ವಾಣಿಜ್ಯ ಬಳಕೆಗೆ ಅವಕಾಶ ನೀಡುವ ಕಾನೂನು ತರುತ್ತಿರುವ ರಾಜ್ಯ ಸರ್ಕಾರ ಸಂಪೂರ್ಣ ರಿಯಲ್ ಎಸ್ಟೇಟ್ ಪರವಾಗಿದೆ. ಮುಖ್ಯಮಂತ್ರಿಗಳು ರಿಯಲ್ ಎಸ್ಟೇಟ್ ಕಂಪನಿಯ ಸಿಇಒ ರೀತಿ ವರ್ತಿಸುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಜಿಬಿಐಟಿ ಹೆಸರಿನಲ್ಲಿ ಸರ್ಕಾರ ಬಲವಂತವಾಗಿ ಜಾರಿಗೊಳಿಸುತ್ತಿರುವ ಈ ಯೋಜನೆ ರೈತ ವಿರೋಧಿಯಾಗಿದ್ದು, ಇದರ ವಿರುದ್ಧದ ಹೋರಾಟವನ್ನು ರಾಜಕೀಕರಣಗೊಳಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸೌಹಾರ್ದಯುತ ಚರ್ಚೆ ನಡೆಸಲಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ರಾಜ್ಯ ರಾಜಕಾರಣದ ಮರಳುವಿಕೆ ಬಗ್ಗೆ ವರಿಷ್ಠರು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ. ಮಾಜಿ ಸಚಿವ ನಾಗೇಂದ್ರ ಅವರ ರಾಜೀನಾಮೆ ವಿಚಾರದಲ್ಲಿ ಸರ್ಕಾರ ಮೊದಲೇ ಕ್ರಮ ಕೈಗೊಂಡಿದ್ದರೆ ಅಧಿವೇಶನ ಸುಗಮವಾಗಿ ನಡೆಯುತ್ತಿತ್ತು ಎಂದು ಅವರು ಸ್ಪಷ್ಟಪಡಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular