HomeLatest NewsBIG NEWS: ಜೆಡಿಎಸ್ ನಾಯಕಿ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ: PSI ಸಸ್ಪೆಂಡ್

BIG NEWS: ಜೆಡಿಎಸ್ ನಾಯಕಿ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ: PSI ಸಸ್ಪೆಂಡ್

ಕಾರವಾರ: ಕಾರವಾರದ ಜೆಡಿಎಸ್ ನಾಯಕಿ ಚೈತ್ರಾ ಅವರ ಪುತ್ರನ ಕಿರುಕುಳಕ್ಕೆ ನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ ಐ ಓರ್ವರನ್ನು ಅಮಾಅನತು ಮಾಡಿರುವ ಘಟನೆ ನಡೆದಿದೆ.

ಕಾರವಾರದ ಕದ್ರಾ ಠಾಣೆಯ ಪಿಎಸ್ ಐ ಸುನಿಲ್ ಬಂಡಿವಡ್ಡರ್ ಅಮಾನತುಗೊಂಡಿರುವ ಪಿಎಸ್ ಐ. ಪ್ರಕರಣದ ಪ್ರಾಥಮಿಕ ತನಿಖೆ ನಡೆಸುವಲ್ಲಿ ವಿಫಲ, ನಿಷ್ಕಾಳಜಿ ಆರೋಪದಲ್ಲಿ ಪಿಎಸ್ ಐ ಅವರನ್ನು ಅಮಾನತುಗೊಳಿಸಿ ಆದೇಶ ಹೊರದಿಸಿದ್ದಾರೆ.

ಜೆಡಿಎಸ್ ನಾಯಕಿಯ ಪುತ್ರ ಚಿರಾಗ್ ಎಂಬಾತ ರಿಶೆಲ್ ಡಿಸೋಜಾ ಎಂಬ ಯುವತಿಗೆ ಲೈಂಗಿಕ ಕಿರುಕುಳ ನೀಡಿ, ದೌರ್ಜನ್ಯವೆಸಗಿದ್ದ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ನೊಂದಿದ್ದ ಯುವತಿ ಜ.9 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಮೃತ ಯುವತಿಯ ರಿಶೇಲ್ ಡಿಸೋಜಾ ತಂದೆ ಕ್ರಿಸ್ತೋದ್ ಡಿಸೋಜಾ ಕಾರವಾರದ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಚಿರಾಗ್ ತಲೆಮರೆಸಿಕೊಂಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

  ಪ್ರಕರಣ ನಡೆದು ಇಷ್ಟುದಿಬವಾದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಅನಗತ್ಯವಾಗಿ ಪೊಲೀಸರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಯುವತಿಯ ಪೋಷಕರು, ಸಂಬಂಧಿಕರು ಠಾಣೆಯ ಬಳಿ ಪ್ರತಿಭಟನೆ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಪಿಎಸ್ ಐ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular