
ಕಾಕೆಟಕು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಡ್ಯಾನ್ಸ್ ವಿಡಿಯೋವನ್ನು ಹಂಚಿಕೊಂಡಿದ್ದು, ಅವರ ಡ್ಯಾನ್ಸ್ ಕೌಶಲ್ಯವನ್ನು ತೋರ್ಪಡಿಸಿದೆ. ಇದರ ಜೊತೆ ಬಾಲಿವುಡ್ ಮೇಲೆ ಅವರಿಗಿರುವ ಪ್ರೀತಿ ಈ ಡ್ಯಾನ್ಸ್ ವಿಡಿಯೋದ ಮೂಲಕ ತಿಳಿದು ಬಂದಿದೆ.
ವಿಡಿಯೋದಲ್ಲಿ ನೃತ್ಯ ಸಂಯೋಜನೆ ಮಾಡಿದ ಖ್ಯಾತ ನೃತ್ಯ ಸಂಯೋಜಕಿ ಫರಾ ಖಾನ್ ಮತ್ತು ಕಂಟೆಂಟ್ ಕ್ರಿಯೇಟರ್‌ಗಳಾದ ಅನೂಷಾ ಮತ್ತು ಸೌರಭ್ ಅವರಿಗೆ ಕಾಕೆಟಕು ಧನ್ಯವಾದವನ್ನು ಸಹ ಸಲ್ಲಿಸಿದ್ದಾರೆ.
ಈ ಅದ್ಭುತ ಡ್ಯಾನ್ಸ್ ವಿಡಿಯೋ ಬಾಲಿವುಡ್ ಅಭಿಮಾನಿಗಳ ಹೃದಯ ಗೆಲ್ಲುವ ಜೊತೆ ಶಾರುಖ್‌ಖಾನ್ ಅವರ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಕಾಕೆಟಕು ಅವರ ಅದ್ಬುತ ನಿರೂಪಣೆ ಕಲೆಯ ಶಕ್ತಿ ಮತ್ತು ಪ್ರಪಂಚದಾದ್ಯಂತ ಇರುವ ಸಂಸ್ಕೃತಿಗಳನ್ನು ಕನೆಕ್ಟ್ ಮಾಡುವುದಕ್ಕು ಸಾಕ್ಷಿಯಾಗಿದೆ.

