HomeIndiaಕಾಶಿಯಲ್ಲಿ ಗೋಲ್ಗಪ್ಪಾ, ಬನಾರಸಿ ಥಾಲಿ ಸವಿದ ಜಪಾನಿ ರಾಯಭಾರಿ

ಕಾಶಿಯಲ್ಲಿ ಗೋಲ್ಗಪ್ಪಾ, ಬನಾರಸಿ ಥಾಲಿ ಸವಿದ ಜಪಾನಿ ರಾಯಭಾರಿ

ದೇಶದುದ್ದಗಲಕ್ಕೂ ಜನಪ್ರಿಯವಾದ ಪಾನಿ ಪೂರಿಯನ್ನು ಭಾರತಕ್ಕೆ ಭೇಟಿ ಕೊಡುವ ವಿದೇಶಿಗರೂ ಸಹ ಸವಿಯುತ್ತಾರೆ. ಖಟ್ಟಾ-ಮೀಠಾ ನೀರಿನೊಂದಿಗೆ ಪೂರಿಯಲ್ಲಿ ಹಾಕಿಕೊಡುವ ಥರಾವರಿ ರುಚಿಯ ಸ್ವಾದ ಎಂಥವನ್ನೂ ಹಿಡಿದಿಡುತ್ತದೆ.

ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಜಪಾನ್ ಪ್ರಧಾನ ಮಂತ್ರಿ ಫುಮಿಯೋ ಕಿಶಿಡಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಹ ಈ ಜನಪ್ರಿಯ ಸ್ಟ್ರೀಟ್ ಫುಡ್ ಸವಿದಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತಕ್ಕೆ ಜಪಾನ್ ರಾಯಭಾರಿಯಾಗಿರುವ ಹಿರೋಶಿ ಸುಜ಼ುಕಿ ಇತ್ತೀಚೆಗೆ ವಾರಣಾಸಿಗೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಸ್ವಕ್ಷೇತ್ರದಲ್ಲಿ ಜನಪ್ರಿಯವಾಗಿರುವ ಈ ಖಾದ್ಯವನ್ನು ಸವಿಯುವ ತಮ್ಮ ಬಯಕೆಯನ್ನು ತಮ್ಮ ದೇಶದ ಪ್ರಧಾನಿ ಕಳೆದ ಬಾರಿ ಭಾರತಕ್ಕೆ ಭೇಟಿ ಕೊಟ್ಟಾಗಿನಿಂದಲೂ ಹೇಳಿಕೊಂಡಿದ್ದರು ಸುಜ಼ುಕಿ.

ತನ್ನ ಕಾಶಿ ಭೇಟಿ ಸಂದರ್ಭದಲ್ಲಿ ಈ ಇಚ್ಛೆಯನ್ನು ಈಡೇರಿಸಿಕೊಂಡಿದ್ದಾರೆ ಸುಜ಼ುಕಿ, ಗೋಲ್‌ಗಪ್ಪಾ ಸವಿದು, ’’ಆಲೂಗೆಡ್ಡೆಯ ಸ್ವಾದಗಳು ಬಾಯಿ ತುಂಬುತ್ತಿವೆ, ಬಹಳ ಟೇಸ್ಟಿಯಾಗಿದೆ,” ಎಂದು ಹೇಳಿಕೊಂಡಿದ್ದಾರೆ.

ಇದರ ಬೆನ್ನಿಗೇ ಕಾಶಿಯ ಜನಪ್ರಿಯ ಗಂಗಾ ಆರತಿಯನ್ನು ನೋಡಿದ ಬಳಿಕ ರಾತ್ರಿ ಭೋಜನಕ್ಕೆ ಬನಾರಸಿ ಥಾಲಿ ಭೋಜನ ಸವಿದಿದ್ದಾರೆ ಸುಜ಼ುಕಿ.

For Latest News Updates, Join Our Whatsapp Community🚩
RELATED ARTICLES

Most Popular