HomeIndiaBREAKING : ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್; ಇಬ್ಬರು ಉಗ್ರರು ಮಟಾಶ್

BREAKING : ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್; ಇಬ್ಬರು ಉಗ್ರರು ಮಟಾಶ್

ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಹತರಾದ ಉಗ್ರರು ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (JeM) ಸಂಘಟನೆಗೆ ಸೇರಿದವರಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ.

ಪ್ರದೇಶದಲ್ಲಿ ಕೆಲವರು ಅನುಮಾನಾಸ್ಪದವಾಗಿ ಸಂಚರಿಸುತ್ತಿರುವ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸೋಹನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಬೃಹತ್ ಕಾರ್ಡನ್ ಆ್ಯಂಡ್ ಸರ್ಚ್ ಆಪರೇಷನ್ (CASO) ಆರಂಭಿಸಿದವು.

ಈ ವೇಳೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಕಾರ್ಯಾಚರಣೆ ಬಳಿಕ ಗುರುವಾರ ಮುಂಜಾನೆ ಇಬ್ಬರು ಉಗ್ರರ ಮೃತದೇಹಗಳು ಪತ್ತೆಯಾಗಿವೆ. ಹತರಾದ ಉಗ್ರರು ವಿದೇಶಿಯರು ಹಾಗೂ ಬಹುತೇಕ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದವರಾಗಿರಬಹುದು ಎಂದು ಶಂಕಿಸಲಾಗಿದೆ. ಅವರ ಬಳಿಯಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಜಂಟಿ ಕಾರ್ಯಾಚರಣೆಯನ್ನು ರಾಷ್ಟ್ರೀಯ ರೈಫಲ್ಸ್, ಪ್ಯಾರಾ (ಸ್ಪೆಷಲ್ ಫೋರ್ಸಸ್) ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ್ದಾರೆ.ಸೆಪ್ಟೆಂಬರ್ 5ರಂದು ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಕಮಾಂಡರ್ ಒಬ್ಬನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ ಬಳಿಕ ಉಧಂಪುರದಲ್ಲಿ ನಡೆದಿರುವ ಈ ಎನ್‌ಕೌಂಟರ್ ಗಮನ ಸೆಳೆದಿದೆ.

ಯಾಸಿರ್ ಎಂದು ಗುರುತಿಸಲಾಗಿದ್ದ ಆ ಉಗ್ರನು ಲಷ್ಕರ್-ಎ-ತೊಯ್ಬಾದ ಸುಲೈಮಾನ್ ಮೂಸಾ ಗುಂಪಿನ ಭಾಗವಾಗಿದ್ದ. ಆದರೆ ಸುಮಾರು ಒಂದು ವರ್ಷದ ಹಿಂದೆ ಆತ ಆ ಗುಂಪಿನಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಭದ್ರತಾ ಸಂಸ್ಥೆಗಳು ಯಾಸಿರ್‌ನ ಚಲನವಲನಗಳ ಮೇಲೆ ನಿಗಾ ಇರಿಸಿದ್ದವು. ಬುದ್ಗಾಮ್‌ನ ಯೂಸ್ಮಾರ್ಗ್ ಪ್ರದೇಶದಲ್ಲಿ ಆತನ ಚಟುವಟಿಕೆಗಳನ್ನು ಕೆಲಕಾಲದಿಂದ ಮೇಲ್ವಿಚಾರಣೆ ಮಾಡಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ವಿದೇಶಿ ನಿಧಿ ಅವ್ಯವಹಾರ ಆರೋಪ: ಅಮೆರಿಕದ ಕ್ರಿಶ್ಚಿಯನ್ ಸಂಘಟನೆ ವಿರುದ್ಧ ಸಿಬಿಐ ಪ್ರಕರಣ

ನವದೆಹಲಿ: ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಮೂಲದ ಕ್ರಿಶ್ಚಿಯನ್ ಮಿಷನರಿ ಸಂಘಟನೆ ‘ದಿ ತಿಮೋತಿ ಇನಿಷಿಯೇಟಿವ್’ (TTI), ಅದರ ಭಾರತ ಕಾರ್ಯಾಚರಣೆ ಮುಖ್ಯಸ್ಥ ಜೊನಾಥನ್ ರಾಜನ್, ಭಾರತ ಹಣಕಾಸು ವಿಭಾಗದ ಮುಖ್ಯಸ್ಥ ಅಜಿತ್ ವರ್ಗೀಸ್ ಮಥಾಯಿ ಸೇರಿದಂತೆ ಇತರರ ವಿರುದ್ಧ ಕೇಂದ್ರ ತನಿಖಾ ದಳ (CBI) ಪ್ರಕರಣ ದಾಖಲಿಸಿದೆ.

2025ರ ನವೆಂಬರ್‌ನಿಂದ 2026ರ ಏಪ್ರಿಲ್‌ವರೆಗೆ ಸುಮಾರು ₹92.55 ಕೋಟಿ ವಿದೇಶಿ ನಿಧಿಯನ್ನು ಸ್ವೀಕರಿಸಿ, ಕಾನೂನು ನಿಯಮಗಳಿಗೆ ವಿರುದ್ಧವಾಗಿ ಮಿಷನರಿ ಚಟುವಟಿಕೆಗಳಿಗೆ ಬಳಸಲಾಗಿದೆ ಎಂಬ ಆರೋಪವನ್ನು ಸಿಬಿಐ ಮಾಡಿದೆ.ಜಾರಿ ನಿರ್ದೇಶನಾಲಯ (ED) ನೀಡಿದ ಮಾಹಿತಿಯ ಆಧಾರದ ಮೇಲೆ ಸಿಬಿಐ ಈ ಎಫ್‌ಐಆರ್ ದಾಖಲಿಸಿದೆ. ಟಿಟಿಐಗೆ ವಿದೇಶಿ ನಿಧಿ ಹರಿದುಬಂದಿರುವುದು ಹಾಗೂ ಅದನ್ನು ಹೇಗೆ ಬಳಸಲಾಗಿದೆ ಎಂಬ ಕುರಿತು ಇ.ಡಿ. ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.

ಎಟಿಎಂಗಳ ಮೂಲಕ ವಿದೇಶಿ ನಿಧಿ ವಿತ್‌ಡ್ರಾ ಆರೋಪ

ಅಮೆರಿಕದ ಟ್ರೂಯಿಸ್ಟ್ ಬ್ಯಾಂಕ್ ನೀಡಿದ್ದ ವಿದೇಶಿ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ದೇಶದ ವಿವಿಧೆಡೆ ಎಟಿಎಂಗಳ ಮೂಲಕ ವಿದೇಶಿ ಹಣವನ್ನು ನಗದಾಗಿ ಹಿಂಪಡೆಯಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ಇ.ಡಿ. ತನಿಖೆಯ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ 1,000ಕ್ಕೂ ಹೆಚ್ಚು ವಿದೇಶಿ ಡೆಬಿಟ್ ಕಾರ್ಡ್‌ಗಳನ್ನು ವಿತರಿಸಲಾಗಿತ್ತು. ದೇಶದ ವಿವಿಧ ಸ್ಥಳಗಳ ಎಟಿಎಂಗಳಿಂದ ವಿದೇಶಿ ಹಣವನ್ನು ಹಿಂಪಡೆಯಲು ಈ ಕಾರ್ಡ್‌ಗಳನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.ಈ ಹಣವನ್ನು ಸ್ವೀಕರಿಸಿದ ರೀತಿ, ಹಿಂಪಡೆದ ವಿಧಾನ ಮತ್ತು ಅದರ ಬಳಕೆ FCRA ನಿಯಮಗಳಿಗೆ ವಿರುದ್ಧವಾಗಿದೆಯೇ ಎಂಬುದನ್ನು ಸಿಬಿಐ ತನಿಖೆ ನಡೆಸಲಿದೆ.

ಮಿಷನರಿ ಚಟುವಟಿಕೆಗಳ ಬಗ್ಗೆಯೂ ಇ.ಡಿ. ತನಿಖೆ

ವಿದೇಶದಿಂದ ಬಂದ ಹಣವನ್ನು ತರಬೇತಿ ಹಾಗೂ ಧಾರ್ಮಿಕ ಬೋಧನೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಬಳಸಲಾಗಿದೆ ಎಂದು ಇ.ಡಿ. ಆರೋಪಿಸಿದೆ.ಈ ಸಂಘಟನೆಯ ಚಟುವಟಿಕೆಗಳು ಬಡ ಜನರ ಮೇಲೆ ಪ್ರಭಾವ ಬೀರಿ, ಎಡಪಂಥೀಯ ಉಗ್ರವಾದಕ್ಕೆ ಕಾರಣವಾಗುವಂತಹ ಚಟುವಟಿಕೆಗಳಿಗೆ ಸಂಬಂಧಿಸಿದ್ದವು ಎಂಬ ಆರೋಪವನ್ನೂ ಇ.ಡಿ. ಮಾಡಿದೆ. ಇವು ಇ.ಡಿ. ತನಿಖೆಯಲ್ಲಿ ಮಾಡಲಾಗಿರುವ ಆರೋಪಗಳಾಗಿದ್ದು, ಮುಂದಿನ ತನಿಖೆಯಲ್ಲಿ ಪರಿಶೀಲನೆಗೆ ಒಳಪಡಲಿವೆ.

ವಿದೇಶಿ ಡೆಬಿಟ್ ಕಾರ್ಡ್‌ಗಳ ಮೂಲಕ ಭಾರತದಲ್ಲಿ ಹಣವನ್ನು ಹೇಗೆ ವರ್ಗಾಯಿಸಲಾಯಿತು ಮತ್ತು ಬಳಿಕ ಹೇಗೆ ಪಡೆಯಲಾಯಿತು ಎಂಬುದನ್ನೂ ತನಿಖಾ ಸಂಸ್ಥೆ ಪರಿಶೀಲಿಸುತ್ತಿದೆ.

ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪ

ತನಿಖೆಯ ಭಾಗವಾಗಿ ನಡೆದ ಶೋಧ ಕಾರ್ಯಾಚರಣೆಗಳ ವೇಳೆ ಸಾಕ್ಷ್ಯಗಳನ್ನು ನಾಶಪಡಿಸಲು ಟಿಟಿಐ, ಅಮೆರಿಕ ಪ್ರಯತ್ನಿಸಿದೆ ಎಂದು ಇ.ಡಿ. ಮತ್ತೊಂದು ಆರೋಪ ಮಾಡಿದೆ.ಸಂಸ್ಥೆಯ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಮಾಹಿತಿಯನ್ನು ದೂರದಿಂದಲೇ ಪ್ರವೇಶಿಸಿ ಅಳಿಸಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಇದೀಗ ಸಿಬಿಐ ತನ್ನ ಪ್ರಕರಣದಲ್ಲಿ ಟಿಟಿಐ, ಜೊನಾಥನ್ ರಾಜನ್, ಅಜಿತ್ ವರ್ಗೀಸ್ ಮಥಾಯಿ ಹಾಗೂ ಗುರುತು ಪತ್ತೆಯಾಗದ ಇತರ ವ್ಯಕ್ತಿಗಳನ್ನು ಆರೋಪಿಗಳಾಗಿ ಹೆಸರಿಸಿದೆ. ವಿದೇಶಿ ನಿಧಿಯ ಸ್ವೀಕೃತಿ, ಹಣ ಹಿಂಪಡೆದು ಬಳಕೆ ಮಾಡಿದ ವಿಧಾನ ಹಾಗೂ FCRA ನಿಯಮಗಳ ಸಂಭಾವ್ಯ ಉಲ್ಲಂಘನೆಗಳ ಕುರಿತು ತನಿಖೆ ಮುಂದುವರಿಯಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular