ಭಯೋತ್ಪಾದಕರಿಂದ ಗುಂಡಿನ ದಾಳಿ: ಬಿಹಾರದ ಕಾರ್ಮಿಕನ ಹತ್ಯೆ

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಬಿಹಾರ ಮೂಲದ ಕಾರ್ಮಿಕನೊಬ್ಬನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಈ ವರ್ಷ ಇದುವರೆಗೆ ಕಣಿವೆಯಲ್ಲಿ ಇದು ಮೂರನೇ ಘಟನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜ್‌ಬೆಹೆರಾ ಪ್ರದೇಶದ ಜಬ್ಲಿಪೋರಾದಲ್ಲಿ ಭಯೋತ್ಪಾದಕರು ರಾಜಾ ಶಾ ಮೇಲೆ ಪಾಯಿಂಟ್-ಬ್ಲಾಂಕ್ ರೇಂಜ್ನಿಂದ ಗುಂಡು ಹಾರಿಸಿದರು, ಇದರಿಂದಾಗಿ ಗಂಭೀರವಾದ ಗಾಯಗಳಾದ ಅವರನ್ನು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರನ್ನು ಬಿಹಾರದ ನಿವಾಸಿ ಶಂಕರ್ ಶಾ ಎಂಬವರ ಪುತ್ರ ರಾಜಾ ಶಾ ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ, ಅವರ ಕುತ್ತಿಗೆಯಲ್ಲಿ ಎರಡು ಗುಂಡು ಮತ್ತು ಹೊಟ್ಟೆಯಲ್ಲಿ ಮತ್ತೊಂದು ಗಾಯವಾಗಿದೆ. ಮೇ 7 ರಂದು ಮೂರನೇ ಹಂತದ ಚುನಾವಣೆ ನಡೆಯಲಿರುವ ಅನಂತನಾಗ್ ಲೋಕಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಇಂದು ಅನಂತ್‌ನಾಗ್‌ನ ಬಿಜ್‌ಬೆಹರಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಬಿಹಾರದ ನಿವಾಸಿ ಹುತಾತ್ಮ ನಾಗರೀಕ ರಾಜಾ ಶಾ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಬಿಹಾರ ಕಾರ್ಮಿಕರ ಮೇಲಿನ ದಾಳಿಯನ್ನು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಅಧ್ಯಕ್ಷ ಗುಲಾಂ ನಬಿ ಆಜಾದ್ ಖಂಡಿಸಿದ್ದಾರೆ. ಇಂತಹ ಕೃತ್ಯದ ವಿರುದ್ಧ ಜನರು ಒಟ್ಟಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.

ಫೆಬ್ರವರಿ 7 ರಂದು, ನಗರದ ಹಬ್ಬಾ ಕಡಲ್ ಪ್ರದೇಶದ ಶಲ್ಲಾ ಕಡಲ್ ಪ್ರದೇಶದಲ್ಲಿ ಪಂಜಾಬ್‌ನ ಅಮೃತಸರದ ಕಾರ್ಮಿಕ ಅಮೃತಪಾಲ್ ಸಿಂಗ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದರು.

ಏಪ್ರಿಲ್ 8 ರಂದು, ಶೋಪಿಯಾನ್ ಜಿಲ್ಲೆಯಲ್ಲಿ ಭಯೋತ್ಪಾದಕರು ದಿಲ್ರಂಜಿತ್ ಸಿಂಗ್ ಎಂದು ಗುರುತಿಸಲ್ಪಟ್ಟ ಸ್ಥಳೀಯರಲ್ಲದ ಕ್ಯಾಬ್ ಚಾಲಕನನ್ನು ಗುಂಡಿಕ್ಕಿ ಗಾಯಗೊಳಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read