HomeLatest NewsBREAKING : 'ಜೈ ಹಿಂದ್, ಜೈ ಭಾರತ್' : ಬಾಹ್ಯಾಕಾಶದಿಂದ ಸಂದೇಶ ರವಾನಿಸಿದ ಶುಭಾಂಶು ಶುಕ್ಲಾ...

BREAKING : ‘ಜೈ ಹಿಂದ್, ಜೈ ಭಾರತ್’ : ಬಾಹ್ಯಾಕಾಶದಿಂದ ಸಂದೇಶ ರವಾನಿಸಿದ ಶುಭಾಂಶು ಶುಕ್ಲಾ |AXIOM MISSION 4 Launch

ಅಮೆರಿಕದ ಫ್ಲೋರಿಡಾದಲ್ಲಿರುವ ನಾಸಾ(NASA)ದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬೆಳಗಿನ ಜಾವ 2:31ಕ್ಕೆ (ಭಾರತೀಯ ಸಮಯ ಮಧ್ಯಾಹ್ನ 12:01) ಗಗನಯಾತ್ರಿಗಳನ್ನು ಹೊತ್ತ ರಾಕೆಟ್ (AXIOM MISSION 4) ಉಡಾವಣೆಯಾಗಿದೆ.

ಸ್ಪೇಸ್ಎಕ್ಸ್ನ ಫಾಲ್ಕನ್ 9 ರಾಕೆಟ್ನಲ್ಲಿರುವ ಡ್ರ್ಯಾಗನ್ ಗಗನಯಾತ್ರಿಗಳನ್ನು ಹೊತ್ತೊಯ್ದಿದೆ. ಈ ನೌಕೆ ಗುರುವಾರ ಅಂದರೆ ನಾಳೆ ಬೆಳಗ್ಗೆ 7:00ಕ್ಕೆ (ಭಾರತೀಯ ಸಮಯ ಸಂಜೆ 4:30) ಐಎಸ್ಎಸ್ನೊಂದಿಗೆ ಡಾಕ್ ಆಗುತ್ತದೆ.
ಜೈ ಹಿಂದ್, ಜೈ ಭಾರತ್ ಎಂದು ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಸಂದೇಶ ಕಳುಹಿಸಿದ್ದಾರೆ.

”ನನ್ನ ಈ ಗಗನಯಾನದಲ್ಲಿ ಭಾರತೀಯ ಪಾತ್ರ ಇದೆ . ನಾನು ಒಬ್ಬಂಟಿಯಲ್ಲ, ಭಾರತದ ತ್ರಿವಣ ಧ್ವಜ ನನ್ನ ಹೆಗಲ ಮೇಲಿದೆ . 41 ವರ್ಷದ ಬಳಿಕ ನಾವು ಬಾಹ್ಯಾಕಾಶ ತಲುಪಿದ್ದೇವೆ, ಎಲ್ಲಾ ಭಾರತೀಯರಿಗೂ ‍ಧನ್ಯವಾದಗಳು. ಜೈ ಹಿಂದ್, ಜೈ ಭಾರತ್” ಎಂದು ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಸಂದೇಶ ಕಳುಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಬುಧವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದು, ಆಕ್ಸಿಯಮ್ -4 ಮಿಷನ್ ಉಡಾವಣೆಯಾಗಿದೆ. ಭಾರತೀಯ ಶುಭಾಂಶು ಶುಕ್ಲಾ ಇತರೆ ಮೂವರಿಂದ ಅಂತರಿಕ್ಷ ಪ್ರವಾಸ ಕೈಗೊಳ್ಳಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular