HomeEntertainmentBIG NEWS: ಶಾಸಕ ಶಿವಲಿಂಗೇಗೌಡ ಹೇಳಿಕೆಗೆ ನಟ ಜಗ್ಗೇಶ್ ತಿರುಗೇಟು: ಒಮ್ಮೆ ಸಂಘಕ್ಕೆ ಭೇಟಿ ನೀಡಿ...

BIG NEWS: ಶಾಸಕ ಶಿವಲಿಂಗೇಗೌಡ ಹೇಳಿಕೆಗೆ ನಟ ಜಗ್ಗೇಶ್ ತಿರುಗೇಟು: ಒಮ್ಮೆ ಸಂಘಕ್ಕೆ ಭೇಟಿ ನೀಡಿ ಎಂದು ಆಹ್ವಾನ

ಬೆಂಗಳೂರು: ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವಿಧಾನಸಭೆಯಲ್ಲಿ ಮಾತನಾಡುತ್ತಾ ಆರ್.ಎಸ್.ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹಗುರವಗೈ ಮಾತನಾಡಿದ್ದರು. ಇದೇ ವಿಚಾರವಾಗಿ ಶಾಸಕರಿಗೆ ತಿರುಗೇಟು ನೀಡಿರುವ ನಟ ಜಗ್ಗೇಶ್, ಶಿವಲಿಂಗೇಗೌಡರನ್ನು ಸಂಘಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ.

ಆರ್​​ಎಸ್​​ಎಸ್​ ಬಗ್ಗೆ ಶಾಸಕ ಶಿವಲಿಂಗೇಗೌಡ ಅವರು ಹಗುರವಾಗಿ ಮಾತನಾಡಿದ್ದನ್ನು ಬಿಜೆಪಿ ಹಾಗೂ ಆರ್.ಎಸ್.ಎಸ್ ನಾಯಕರನ್ನು ಕೆರಳಿಸಿತ್ತು. ಶಾಸಕರು ಆಡಿರುವ ಮಾತು ಸರಿಯಲ್ಲ ಎಂದು ಕಿಡಿಕಾರಿದ್ದರು. ಈಗ ನಟ ಹಾಗೂ ರಾಜ್ಯ ಸಭಾ ಸದಸ್ಯ ಜಗ್ಗೇಶ್ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದು, ಆರ್.ಎಸ್.ಎಸ್ ಬಗ್ಗೆ ಹಗುರವಾಗಿ ಮಾತನಾಡುವವರಿಗೆ, ಸಂಘದ ಬಗ್ಗೆ ತಪ್ಪು ತಿಳಿದವರಿಗೆ ಸಂಘಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚಿಗೆ ಒಬ್ಬ ದಡ್ಡ ಶಾಸಕ ವಿಧಾನಸಭೆಯಲ್ಲಿ ಹಾಗೂ ಒಬ್ಬ ಅಜ್ಞಾನಿ ಶಾಸಕ ವಿಧಾನಪರಿಷತ್​ನಲ್ಲಿ ಆರ್​​ಎಸ್​​ಎಸ್​ ಸಂಘಟನೆ ಬಗ್ಗೆ ಲಘುವಾಗಿ ಮಾತಾಡಿದರು. ಸಂಘದ ಬಗ್ಗೆ ಹೀಗೆ ಅರಿವಿರದ ಅನೇಕರು ಇದ್ದಾರೆ. ಜೊತೆಗೆ ಕಲಾವಿದ ಪ್ರಕಾಶ್ ರಾಜ್ ಇವರಂತೆ ಸಂಘಕ್ಕೆ ಒಮ್ಮೆ ಭೇಟಿಕೊಡಿ ಮನಸ್ಥಿತಿ ಬದಲಾಗಿ ಸಂಘದ ದೇಶ ಚಿಂತನೆ ಅರಿವಾಗುತ್ತೆ ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular