HomeLatest NewsBREAKING: ಮಾಜಿ ಸಿಎಂ ಜಗನ್ ರೆಡ್ದಿ ರ್ಯಾಲಿ ವೇಳೆ ಘೋರ ದುರಂತ: ಜಗನ್ ಕಾರಿನ ಚಕ್ರದಡಿ...

BREAKING: ಮಾಜಿ ಸಿಎಂ ಜಗನ್ ರೆಡ್ದಿ ರ್ಯಾಲಿ ವೇಳೆ ಘೋರ ದುರಂತ: ಜಗನ್ ಕಾರಿನ ಚಕ್ರದಡಿ ಸಿಲುಕಿ ವೃದ್ಧ ಸಾವು

ಹೈದರಾಬಾದ್: ಆಂಧ್ರ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ರ್ಯಾಲಿ ವೇಳೆ ಘೋರ ದುರಂತ ಸಂಭವಿಸಿದೆ. ಜಗನ್ ಕಾರಿನ ಚಕ್ರದಡಿ ಸಿಲುಕಿ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಪಲ್ನಾಡು ಜಿಲ್ಲೆಯ ಸತ್ತೇನಹಳ್ಳಿಯಲ್ಲಿ ಮಾಜಿ ಸಿಎಂ ಜಗನ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಈ ದುರಂತ ಸಂಭವಿಸಿದೆ. ಜೂನ್ 18ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂದು ರ್ಯಾಲಿ ವೇಳೆ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆದಿದೆ. ಈ ವೇಳೆ ವೃದ್ಧರೊಬ್ಬರು ಕೆಳಗೆ ಬಿದ್ದಿದ್ದು, ಅವರ ಮೇಲೆಯೇ ಜಗನ್ ಕಾರು ಹಾದುಹೋಗಿದೆ. ಕಾರಿನ ಚಕ್ರದಡಿಗೆ ಸಿಲುಕಿ ವೃದ್ಧರು ಸಾವನ್ನಪ್ಪಿದ್ದಾರೆ. 70 ವರ್ಷದ ಸಂಗಯ್ಯ ಮೃತರು. ನೂಕಾಟ, ತಳ್ಳಾಟ, ಜೈಕಾರಗಳ ನಡುವೆ ವ್ಯಕ್ತಿಯೊಬ್ಬರು ಕಾರಿನ ಚಕ್ರದಡಿ ಸಿಲುಕಿ ಸಾವನ್ನಪ್ಪಿರುವುದೇ ಯಾರಿಗೂ ತಿಳಿದಿರಲಿಲ್ಲ. ಆದರೆ ಈ ಘಟನೆಯ ವಿಡಿಯೋ ಹೊರಬರುತ್ತಿದ್ದಂತೆ ಜಗನ್ ಕಾರಿನಡಿ ಸಿಲುಕಿ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular