HomeIndiaBIG NEWS: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪತ್ನಿ ಕಾರು ಕಳ್ಳತನ, 'FIR' ದಾಖಲು

BIG NEWS: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪತ್ನಿ ಕಾರು ಕಳ್ಳತನ, ‘FIR’ ದಾಖಲು

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಪತ್ನಿ ಕಾರು ಕಳ್ಳತನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜೆ.ಪಿ.ನಡ್ಡಾ ಪತ್ನಿ ಮಲ್ಲಿಕಾ ನಡ್ಡಾ ಅವರ ಫಾರ್ಚುನರ್ ಕಾರನ್ನು ಚಾಲಕ ಸರ್ವೀಸ್ ಗೆ ತೆಗೆದುಕೊಂಡು ಹೋಗಿದ್ದರು. ಮಾರ್ಚ್ 19ರಂದು ಸರ್ವಿಸ್ ಸೆಂಟರ್ ನಲ್ಲಿದ್ದ ಕಾರು ಕಳ್ಳತನವಾಗಿದೆ. ಚಾಲಕನ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರಿಗಾಗಿ ಹುಡುಕಾಟ ನಡೆಸಿದ್ದಾರೆ.

ಅರೋರಾ ಪ್ರಾಪರ್ಟೀಸ್ ಆರ್ ಡಿ ಮಾರ್ಗದ ಮುಂಭಾಗದಲ್ಲಿರುವ ಗೋವಿಂದಪುರಿಯಿಂದ ಕಾರು ಕಳುವು ಮಾಡಲಾಗಿದೆ ಎಂದು ಕಾರು ಚಾಲಕ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular