ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೇಲಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಜನಿಸಿದೆ. 2023ರಲ್ಲಿ ದಂಪತಿಗೆ ಮೊದಲ ಹೆಣ್ಣು ಮಗು ಜನಿಸಿತ್ತು. ಇದೀಗ ಅವಳಿ ಮಕ್ಕಳು ಜನಿಸಿದ್ದು, ರಾಮ್ ಚರಣ್ ತಂದೆ ನಟ ಮೆಗಾಸ್ಟಾರ್ ಚಿರಂಜೀವಿ ಸಂತಸ ಹಂಚಿಕೊಂಡಿದ್ದಾರೆ.
ರಾಮಚರಣ್ ಮತ್ತು ಉಪಾಸನಾ ಅವರಿಗೆ ಅವಳಿ ಮಕ್ಕಳು ಜನಿಸಿವೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು. ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಅವಳಿ ಮಕ್ಕಳನ್ನು ಸ್ವಾಗತಿಸಿದ್ದಾರೆ ಎಂದು ಚಿರಂಜೀವಿ ಸಂತೋಷ ಹಂಚಿಕೊಂಡಿದ್ದಾರೆ.
ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕೊನಿಡೇಲಾ ಈಗ ಮೂರು ಮಕ್ಕಳ ಪೋಷಕರಾಗಿದ್ದಾರೆ. ದಂಪತಿಗಳು ಶನಿವಾರ ಅವಳಿ ಮಕ್ಕಳನ್ನು ಸ್ವಾಗತಿಸಿದರು. ಅಪಾರ ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿದ ಹೃದಯದಿಂದ ಹಂಚಿಕೊಳ್ಳಲು ನಮಗೆ ಸಂತೋಷವಾಗಿದೆ. ಶಿಶುಗಳು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ. ಈ ಪುಟ್ಟ ಮಕ್ಕಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುವುದು ಅಜ್ಜ, ಅಜ್ಜಿಯರಾದ ನಮಗೆ ಸಂತೋಷ ಮತ್ತು ದೈವಿಕ ಆಶೀರ್ವಾದದ ಕ್ಷಣವಾಗಿದೆ. ಅವರ ಪ್ರಾರ್ಥನೆ, ಪ್ರೀತಿ, ಆಶೀರ್ವಾದ ಮತ್ತು ಶುಭ ಹಾರೈಕೆಗಳಿಗಾಗಿ ನಾವು ಎಲ್ಲರಿಗೂ ಪ್ರಾಮಾಣಿಕವಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.
2025 ರ ದೀಪಾವಳಿಯ ಸಮಯದಲ್ಲಿ ಉಪಾಸನಾ ತನ್ನ ಸೀಮಂತಂ(ಬೇಬಿ ಶವರ್) ವೀಡಿಯೊವನ್ನು ಹಂಚಿಕೊಂಡಿದ್ದರು. ಈ ದೀಪಾವಳಿಯು ಡಬಲ್ ಆಚರಣೆ, ಡಬಲ್ ಪ್ರೀತಿ ಮತ್ತು ಡಬಲ್ ಆಶೀರ್ವಾದಗಳ ಬಗ್ಗೆ ಎಂದು ಅವರು ಬರೆದಿದ್ದರು.
ರಾಮ್ ಚರಣ್ ಮತ್ತು ಉಪಾಸನಾ ವರ್ಷಗಳಿಂದ ಸ್ನೇಹಿತರಾಗಿದ್ದರು. ಡಿಸೆಂಬರ್ 2011 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಂತರ ಜೂನ್ 2012 ರಲ್ಲಿ ಇಬ್ಬರೂ ವಿವಾಹವಾದರು. ಜೂನ್ 2023 ರಲ್ಲಿ ದಂಪತಿಗೆ ಮೊದಲ ಮಗು ಕ್ಲಿನ್ ಕಾರಾ ಜನಿಸಿದ್ದಳು. ಈಗ ಅವರ ಅವಳಿ ಮಕ್ಕಳ ಆಗಮನದೊಂದಿಗೆ ರಾಮ್ ಮತ್ತು ಉಪಾಸನ ಮೂರು ಮಕ್ಕಳ ಪೋಷಕರಾಗಿದ್ದಾರೆ. ಉಪಾಸನ ಅವರು ಅಪೋಲೋ ಆಸ್ಪತ್ರೆಗಳ ಸಂಸ್ಥಾಪಕ ಪ್ರತಾಪ್ ಸಿ. ರೆಡ್ಡಿ ಅವರ ಮೊಮ್ಮಗಳು.

