HomeKarnatakaಉಪೇಂದ್ರ ಆ ರೀತಿ ಹೇಳಿಕೆ ನೀಡಿದ್ದರೆ ತಪ್ಪು: ಸಚಿವ ಮಧು ಬಂಗಾರಪ್ಪ

ಉಪೇಂದ್ರ ಆ ರೀತಿ ಹೇಳಿಕೆ ನೀಡಿದ್ದರೆ ತಪ್ಪು: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ನಟ ಉಪೇಂದ್ರ ಅವರು ನನ್ನ ಸ್ನೇಹಿತರು. ದಲಿತರನ್ನು ಅವಮಾನಿಸಿ ಹೇಳಿಕೆ ನೀಡಿದ್ದರೆ ಅದು ತಪ್ಪು ತಪ್ಪೇ. ಅವರು ಕೂಡ ಒಂದು ಪಕ್ಷದ ನಾಯಕರು. ಮಾತನಾಡುವಾಗ ಬಹಳ ಎಚ್ಚರದಿಂದ ಮಾತನಾಡಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆ ರೀತಿ ಯಾಕೆ ಹೇಳಿದ್ದಾರೋ ಗೊತ್ತಿಲ್ಲ. ಯಾರೇ ಆಗಲಿ ಸ್ವಲ್ಪ ವಿಚಾರ ಮಾಡಿ ಹೇಳಬೇಕು. ಮೇಲು, ಕೀಳು ಎಂಬುದು ಇಡೀ ದೇಶದಲ್ಲಿಯೇ ಇಲ್ಲ. ಇರುವ ಎಲ್ಲರೂ ಕೂಡ ಪ್ರಜೆಗಳು. ಉಪೇಂದ್ರ ಹಾಗೆ ಮಾತನಾಡಬಾರದಿತ್ತು. ಅವರು ನನ್ನ ಸ್ನೇಹಿತರಾಗಿದ್ದರೂ ಕೂಡ ಮಾತನಾಡಿದ್ದು ತಪ್ಪು ತಪ್ಪೇ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸಿಎಂ ಭೇಟಿ ಮಾಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. ಈ ಕುರಿತು ಪತ್ರಕರ್ತರು ಪ್ರಶ್ನಿಸುತ್ತಿದ್ದಂತೆ ಧನ್ಯವಾದ ತಿಳಿಸಿದ ಸಚಿವ ಮಧು ಬಂಗಾರಪ್ಪ, ಎದ್ದು ಹೊರಟರು.

For Latest News Updates, Join Our Whatsapp Community🚩
RELATED ARTICLES

Most Popular