HomeLatest Newsರಾಜ್ಯದ 'ಆಸ್ತಿ' ಮಾಲೀಕರೇ ಗಮನಿಸಿ : ಮನೆಯಲ್ಲೇ ಕುಳಿತು ಜಮೀನಿಗೆ ಇ-ಖಾತಾ ಪಡೆಯಲು ಜಸ್ಟ್...

ರಾಜ್ಯದ ‘ಆಸ್ತಿ’ ಮಾಲೀಕರೇ ಗಮನಿಸಿ : ಮನೆಯಲ್ಲೇ ಕುಳಿತು ಜಮೀನಿಗೆ ಇ-ಖಾತಾ ಪಡೆಯಲು ಜಸ್ಟ್ ಹೀಗೆ ಮಾಡಿ.!

ಬೆಂಗಳೂರು : ಮನೆಯಲ್ಲೇ ಕುಳಿತು ಜಮೀನಿಗೆ ಇ-ಖಾತಾ ಪಡೆಯುವುದು ಈಗ ಬಹಳ ಸುಲಭ.   ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಕೃಷಿಯೇತರ ಜಮೀನಿನ ಇ-ಖಾತಾ ಪಡೆದುಕೊಳ್ಳಿ

https://eswathu.karnataka.gov.in/  ಪೋರ್ಟಲ್‌ನಲ್ಲಿ ನಮೂನೆ 9 ಮತ್ತು ನಮೂನೆ 11 ಸಿಗಲಿದೆ. ಇ-ಸ್ವತ್ತು ಸಹಾಯವಾಣಿ ಸಂಖ್ಯೆ9483476000 ಗೆ ಕರೆ ಮಾಡಿ ನೀವು ನಿಮ್ಮ ಗೊಂದಲಕ್ಕೆ ಉತ್ತರ  ಪಡೆಯಬಹುದು.  ಗ್ರಾಮೀಣ ಜನರು ದಾಖಲೆಗಾಗಿ ಅಲೆದಾಡುವ ಅಗತ್ಯ ಇನ್ನಿಲ್ಲ

ಬೇಕಾದ ದಾಖಲಾತಿಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1. ಮಾಲೀಕರ ಭಾವಚಿತ್ರ ಮತ್ತು ಆಧಾರ್

2. ಆಸ್ತಿ ತೆರಿಗೆ ಎಸ್.ಎ.ಎಸ್ ಚಲನ್ ಸಂಖ್ಯೆ

3. ಸ್ವತ್ತಿನ ಕ್ರಯ/ ನೋಂದಾಯಿತ ಪತ್ರ ಸಂಖ್ಯೆ ಕಾವೇರಿ ತಂತ್ರಾಶದಿಂದ ವಿದ್ಯುನ್ಮಾನವಾಗಿ ಪಡೆದುಕೊಳ್ಳುವುದು!

4. ವಿದ್ಯುತ್ ಆರ್ ಆರ್ ಸಂಖ್ಯೆ (ಖಾಲಿ ನಿವೇಶನಗಳಿಗೆ ಆಗತ್ಯವಿಲ್ಲ)

5. ಸ್ವತ್ತಿನ ಛಾಯಾಚಿತ್ರ

6. EC: 15/16

7. ಸ್ವತ್ತಿಗೆ ಸಂಬಂಧಿಸಿದ ಇತರೆ ಪೂರಕ ಅಗತ್ಯ ದಾಖಲೆಗಳು

* www.eaasthi.karnataka.gov.in Online ನಲ್ಲಿ ಆಸ್ತಿ ದಾಖಲೆ ಪರಿಶೀಲಿಸಬಹುದು.

*ಅಗತ್ಯವಿದ್ದಲ್ಲಿ ದಾಖಲೆ ನೀಡಿ ತಿದ್ದುಪಡಿ/ತಕರಾರು ಅರ್ಜಿ ಸಲ್ಲಿಸಬಹುದು.

*ಆನ್‌ಲೈನ್‌ನಲ್ಲೇ ಶುಲ್ಕ ಪಾವತಿಸಿ ದಾಖಲೆ ಸಲ್ಲಿಸಿ ಅನುಮೋದಿತ ಅಧಿಕೃತ ಇ-ಖಾತೆ ಪಡೆಯಬಹುದು.

*K-1 ಕೇಂದ್ರಗಳಲ್ಲೂ ಸಹ ನಾಗರಿಕರು ತಂತ್ರಾಂಶವನ್ನು ಬಳಸಿ ಸೇವೆಯನ್ನು ಪಡೆಯಬಹುದು.

* ಇ-ಖಾತಾ ಪಡೆಯುವ ಮೂಲಕ ಸರಳವಾಗಿ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮುಖಾಂತರ ಪಾವತಿಸಬಹುದು.

ಇ-ಸ್ವತ್ತು ತಂತ್ರಾಂಶದಲ್ಲಿನ ಬದಲಾವಣೆಗಳು

*ಸಾರ್ವಜನಿಕರು ಮನೆಯಲ್ಲಿದ್ದೇ ಆಸ್ತಿ ದಾಖಲೆಗಳನ್ನು ಪಡೆಯಬಹುದು.

*ಇ-ಸ್ವತ್ತು ನಮೂನೆಗಳನ್ನು ನಿಗದಿತ ಕಾಲಾವಧಿಯೊಳಗೆ ಪಡೆಯಬಹುದು.

*ನಿಗದಿತ ಅವಧಿಯಲ್ಲಿ ಅಧಿಕಾರಿಗಳು ಅನುಮೋದನೆ ನೀಡದಿದ್ದಲ್ಲಿ ಸ್ವಯಂಚಾಲಿತ ಅನುಮೋದನೆಗೆ ಅವಕಾಶ.

*ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತೆರಿಗೆಗೆ ಒಳಪಡದ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಅವಕಾಶ.

*ಇ-ಖಾತಾ ವಿತರಣೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಅನುಮೋದನೆಗೆ ಅವಕಾಶ.

*ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಏಕರೂಪದ/ಮಾದರಿಯ ತೆರಿಗೆ ಹಾಗೂ ಶುಲ್ಕಗಳ ನಿಗದಿ.

*ಗ್ರಾಮ ಪಂಚಾಯತಿ ಸೇವೆಗಳ ಶುಲ್ಕ ಹಾಗೂ ಮ್ಯುಟೇಶನ್ ಶುಲ್ಕ ತಂತ್ರಾಂಶದ ಮೂಲಕವೇ ನಿರ್ಧಾರ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular