HomeKarnatakaರಾಜ್ಯದ ಎಲ್ಲಾ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಇಂದು 'ಯೂಟ್ಯೂಬ್ ಲೈವ್' ಕಾರ್ಯಗಾರದಲ್ಲಿ ಭಾಗವಹಿಸುವುದು ಕಡ್ಡಾಯ...

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಇಂದು ‘ಯೂಟ್ಯೂಬ್ ಲೈವ್’ ಕಾರ್ಯಗಾರದಲ್ಲಿ ಭಾಗವಹಿಸುವುದು ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಇಂದು ಯೂಟ್ಯೂಬ್ ಲೈವ್ ಕಾರ್ಯಗಾರದಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ.

ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಕೆ.ಪಿ.ಎಸ್. ಶಾಲೆಗಳಲ್ಲಿನ ಪ್ರಾಂಶುಪಾಲರು, ಹಾಗೂ SDMC & CDC ಅಧ್ಯಕ್ಷರು ಇವರಿಗೆ ತರಬೇತಿ ಕಾರ್ಯಾಗಾರ 11.00 ಗಂಟೆಯ ಬದಲಾಗಿ ಅದೇ ದಿನದಂದು 02.30ಕ್ಕೆ ನಿಗಧಿಯಾಗಿರುತ್ತದೆ. ಸದರಿ ತರಬೇತಿ ಕಾರ್ಯಾಗಾರವನ್ನು ಯುಟ್ಯೂಬ್ ಲೈವ್ ನಲ್ಲಿ ಈ ಕೆಳಕಂಡ ಲಿಂಕ್ ಮೂಲಕ ಭಾಗವಹಿಸಲು ತಿಳಿಸಿದೆ.

SDMC ಅಧ್ಯಕ್ಷರು ಕಡ್ಡಾಯವಾಗಿ ಶಾಲಾ ಆವರಣದಲ್ಲಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಶಾಲಾ ಮುಖ್ಯಸ್ಥರು ಕ್ರಮವಹಿಸುವುದು ಹಾಗೂ ತರಬೇತಿಗೆ ಸಂಬಂಧಿಸಿದ ಪ್ರಶ್ನೆಗಳಿದಲ್ಲಿ ದೂರವಾಣಿ ಸಂ. 9480695471 ಗೆ ಪೂರ್ವಭಾವಿಯಾಗಿ ದಿನಾಂಕ: 05.11.2025ರ ಸಂಜೆ: 04.30ರೊಳಗೆ ವಾಟ್ಸಪ್ ಸಂದೇಶದ ಮೂಲಕ ಕಳುಹಿಸಲು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular