HomeEntertainmentನಂದಮೂರಿ ಬಾಲಕೃಷ್ಣ ಅಭಿನಯದ 'ಲೆಜೆಂಡ್' ಚಿತ್ರ ತೆರೆ ಮೇಲೆ ಬಂದು ಇಂದಿಗೆ 10 ವರ್ಷ

ನಂದಮೂರಿ ಬಾಲಕೃಷ್ಣ ಅಭಿನಯದ ‘ಲೆಜೆಂಡ್’ ಚಿತ್ರ ತೆರೆ ಮೇಲೆ ಬಂದು ಇಂದಿಗೆ 10 ವರ್ಷ

ಬೋಯಾಪತಿ ಶ್ರೀನು ನಿರ್ದೇಶನದ ನಂದಮೂರಿ ಬಾಲಕೃಷ್ಣ ಅಭಿನಯದ ‘ಲೆಜೆಂಡ್’ ಚಿತ್ರ 2014 ಮಾರ್ಚ್ 27ರಂದು ತೆರೆ ಕಂಡಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಹತ್ತು ವರ್ಷಗಳಾಗಿವೆ. ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಕೂಡ ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಸೇರಿದಂತೆ ಜಗಪತಿ ಬಾಬು, ಸೋನಾಲ್ ಚೌಹಾಣ್, ರಾಧಿಕಾ, ಮಹದೇವನ್, ಕಲ್ಯಾಣಿ, ಸುಮನ್, ಬ್ರಹ್ಮಾನಂದಂ, ಜಯಪ್ರಕಾಶ್ ರೆಡ್ಡಿ, ಅಜಯ್, ಬ್ರಹ್ಮಜಿ, ರಾವ್ ರಮೇಶ್, ಈಶ್ವರಿ ರಾವ್, ಮಧುಸೂದನ್ ರಾವ್, ಪೃಥ್ವಿರಾಜ್, ಸಮೀರ್ ಮತ್ತು ಶೇಖರ್ ತೆರೆ  ಹಂಚಿಕೊಂಡಿದ್ದಾರೆ.

ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದು, ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನವಿದೆ. 14 ರೀಲ್ಸ್ ಎಂಟರ್ಟೈನ್ಮೆಂಟ್ ಮತ್ತು ವರಹಿ ಚಲನಚಿತ್ರ  ಚಿತ್ರಂ ಸಂಸ್ಥೆ ನಿರ್ಮಾಣ ಮಾಡಿತ್ತು. ಸುಮಾರು ಮೂರು ವರ್ಷ ಪ್ರದರ್ಶನ ಕಂಡಿದ್ದ ಈ ಸೂಪರ್ ಡೂಪರ್ ಹಿಟ್ ಸಿನಿಮಾ ಇದೇ ಮಾರ್ಚ್ 30ಕ್ಕೆ ರೀ ರಿಲೀಸ್ ಆಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular