HomeLatest Newsಇಸ್ರೋ ಉಪಗ್ರಹ EOS-9 ಉಡಾವಣೆ ವಿಫಲ: ಮತ್ತೊಂದು ಪ್ರಯತ್ನ ನಾವು ಮಾಡೇ ಮಾಡುತ್ತೇವೆ: ಇಸ್ರೋ ಮುಖ್ಯಸ್ಥ...

ಇಸ್ರೋ ಉಪಗ್ರಹ EOS-9 ಉಡಾವಣೆ ವಿಫಲ: ಮತ್ತೊಂದು ಪ್ರಯತ್ನ ನಾವು ಮಾಡೇ ಮಾಡುತ್ತೇವೆ: ಇಸ್ರೋ ಮುಖ್ಯಸ್ಥ ನಾರಾಯಣನ್

ಹೈದರಾಬಾದ್: ಇಸ್ರೋ ಉಪಗ್ರಹ EOS-9 ಉಡಾವಣೆ ವಿಫಲವಾಗಿದ್ದು, ಮತ್ತೊಂದು ಪ್ರಯತ್ನದಲ್ಲಿ ಖಂಡಿತಾ ಸಫಲರಾಗುತ್ತೇವೆ ಎಂದು ಇಸ್ರೋ ಮುಖ್ಯಸ್ಥ ನಾರಾಯಣನ್ ತಿಳಿಸಿದ್ದಾರೆ.

ಉಪಗ್ರಹ ಮೊದಲ ಹಂತ ಹಾಗೂ ಎರಡನೇ ಹಂತದಲ್ಲಿ ಸಫಲವಾಗಿದೆ. ಆದರೆ ಉಪಗ್ರಹ 3ನೇ ಹಂತದಲ್ಲಿ ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ಮತ್ತೆ ನಾವು ನಮ್ಮ ಪ್ರಯತ್ನವನ್ನು ಮಾಡುತ್ತೇವೆ. ಮುಂದಿನ ಪ್ರಯತ್ನದಲ್ಲಿ ಯಶಸ್ಸನ್ನು ಕಾಣುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲವಾಗಿದೆ. EOS-9 ಪಿಎಸ್ ಎಲ್ ವಿ-ಸಿ61 ಮೂಲಕ ಉಡಾವಣೆ ಮಾಡಲಾಗಿತ್ತು. ಆದರೆ ಮೂರನೇ ಹಂತದಲ್ಲಿ ತಾಂತ್ರಿಕ ದೋಷದಿಂದಾಗಿ ವಿಫಲಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಮುಂಜಾನೆ 5:59ಕ್ಕೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C61) ರಾಕೇಟ್ ಮೂಲಕ ಇಸ್ರೋ ಭೂ ವೀಕ್ಷನಾ ಉಪಗ್ರಹ EOS-09 ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತ್ತು. ಈ ಉಪಗ್ರಹ ನಮಗೆ ಗಡಿ ಕಾಯುವಿಕೆ, ಬೇಹುಗಾರಿಕೆ, ರಾಷ್ಟ್ರೀಯ ಭದ್ರತೆಗೆ ಸಾಥ್ ನೀಡುತ್ತಿತ್ತು. ವಿಪತ್ತು ನಿರ್ವಹಣೆ ಸಂದರ್ಭದಲ್ಲಿಯೂ ನೆರವಾಗುತ್ತಿತ್ತು. ಆದರೆ ತಾಂತ್ರಿಕ ಕಾರಣದಿಂದ ಉಡಾವಣೆ ವಿಫಲಗೊಂಡಿದೆ.

For Latest News Updates, Join Our Whatsapp Community🚩
RELATED ARTICLES

Most Popular