HomeLatest NewsBIG NEWS: ಐಸಿಸ್ ಜೊತೆ ಸಂಪರ್ಕ: 19 ವರ್ಷದ ಡೆಂಟಲ್ ವಿದ್ಯಾರ್ಥಿ ಅರೆಸ್ಟ್

BIG NEWS: ಐಸಿಸ್ ಜೊತೆ ಸಂಪರ್ಕ: 19 ವರ್ಷದ ಡೆಂಟಲ್ ವಿದ್ಯಾರ್ಥಿ ಅರೆಸ್ಟ್

ಲಖನೌ: ಐಸಿಸ್ ಜೊತೆ ನಿರಂಯ್ತರ ಸಂಪರ್ಕ ಹೊಂದಿದ್ದ 19 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಯನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಸಹರಾನ್ ಪುರ ಜಿಲ್ಲೆಯ ನಿವಾಸಿ ಹರೀಶ್ ಅಲಿ ಬಂಧಿತ ಆರೋಪಿ. ನಿಷೇಧಿತ ಭಯೋತ್ಪಾದನಾ ಸಂಘಟನೆ ಐಸಿಸ್ ಆನ್ ಲೈನ್ ಮಡ್ಯೂಲ್ ನೊಂದಿಗೆ ಈತ ಸಂಪರ್ಕ ಹೊಂದಿದ್ದ ಎಂಬ ಆರೋಪದ ಮೇರೆಗೆ ಮೊರಾದಾಬಾದ್ ನಲ್ಲಿ ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಸಿಸ್ ಸಂಬಂಧಿತ ಆನ್ ಲೈನ್ ನೆಟ್ ವರ್ಕ್ ಗಳ ಚಟುವಟಿಕೆಗಳ ಕುರಿತು ನಡೆಯುತ್ತಿರುವ ತನಿಖೆ ಸಂದರ್ಭದಲ್ಲಿ ಈತನನು ಬಂಧಿಸಲಾಗಿದೆ.

ಎರಡನೇ ವರ್ಷದ ದಂತವೈದ್ಯಕೀಯ ವಿದ್ಯಾರ್ಥಿಯಾಗಿರುವ ಈತ ಇನ್ ಸ್ಟಾಗ್ರಾಂ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಡಿಸ್ಕಾರ್ಡ್ ನಂತಹ ಎನ್ ಕ್ರಿಪ್ಟ್ ಮಾಡಿದ ಅಪ್ಲಿಕೇಷನ್ ಗಳ ಮೂಲಕ ಐಸಿಸ್ ನಿರ್ವಾಹಕರ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರಪ್ರದೇಶ ಹಾಗೂ ದೇಶದ ಇತರ ಭಾಗಗಳಲ್ಲಿ ಕೆಲವರು ಷರ್ಯಾ ಆಧಾರಿತ ಖಲೀಪತ್ ವ್ಯವಸ್ಥೆಯನ್ನು ಸ್ಥಾಪಿಸುವ ಗುರುಯನ್ನು ಹೊಂದಿರುವ ಐಸಿಸ್ ಸಿದ್ಧಾಂತವನ್ನು ಪ್ರಚಾರಮಾಡಲು ಆನ್ ಲೈನ್ ಗ್ರೂಪ್ ಗಳನ್ನು ರಚಿಸುತ್ತಿದ್ದಾರೆ. ಭಾರತದಲ್ಲಿ ಭಯೋತ್ಪಾದನಾ ಸಂಘಟನೆ ಬಲಪಡಿಸಲು ಜನರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿಗಳು ಎಚ್ಚರಿಕೆ ನೀಡಿವೆ.

ಸದ್ಯ ಶಂಕಿತ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಲಖನೌದ ಎಟಿಎಸ್ ಠಾಣೆಯಲ್ಲಿ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular