ಹಿಂದೂ ಧರ್ಮದಲ್ಲಿ ಸೀತಾಮಾತೆಯನ್ನು ಸಹನೆ, ಸಮರ್ಪಣಾ ಮನೋಭಾವ ಮತ್ತು ಅಚಲವಾದ ಪಾತಿವ್ರತ್ಯ ಧರ್ಮದ ಸಂಕೇತವಾಗಿ ಆರಾಧಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನವನ್ನು ನಾವು ‘ಸೀತಾ ನವಮಿ’ ಅಥವಾ ‘ಜಾನಕಿ ನವಮಿ’ ಎಂದು ಆಚರಿಸುತ್ತೇವೆ. ಪುರಾಣಗಳ ಪ್ರಕಾರ, ಮಿಥಿಲಾ ನಗರದ ರಾಜ ಜನಕ ಮಹಾರಾಜನು ಯಜ್ಞಕ್ಕಾಗಿ ಭೂಮಿಯನ್ನು ಉಳುವಾಗ, ನೇಗಿಲಿನ ಸಾಲಿನಲ್ಲಿ ಒಂದು ಪೆಟ್ಟಿಗೆಯಲ್ಲಿ ಕನ್ಯಾ ರೂಪದಲ್ಲಿ ಸೀತಾಮಾತೆ ಲಭಿಸಿದಳು. ಈ ಪವಿತ್ರ ದಿನವನ್ನು 2026ರಲ್ಲಿ ಏಪ್ರಿಲ್25ರಂದು ಭಕ್ತರು ಭಕ್ತಿಶ್ರದ್ಧೆಯಿಂದ ಆಚರಿಸುತ್ತಿದ್ದಾರೆ.
ಇಂದಿನ ಧಾವಂತದ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೂ ಸಂಬಂಧಗಳು ಬಿರುಕು ಬಿಡುತ್ತಿವೆ. ಅಹಂಕಾರ ಮತ್ತು ತಿಳುವಳಿಕೆಯ ಕೊರತೆಯಿಂದ ದಂಪತಿಗಳ ನಡುವೆ ಅಂತರ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸೀತಾ ನವಮಿಯಂದು ಕೆಲವು ಆಧ್ಯಾತ್ಮಿಕ ಪರಿಹಾರಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಮತ್ತೆ ಶಾಂತಿ, ಪ್ರೀತಿ ನೆಲೆಸುತ್ತದೆ. ಆ ವಿಶೇಷಗಳೇನು ಎಂದು ನೋಡೋಣ.
ಗೃಹದಲ್ಲಿ ಶಾಂತಿ, ಪ್ರೀ ತಿಮತ್ತು ಸಂತೋಷ ನೆಲೆಸಲು ಈಪರಿಹಾರಗಳನ್ನು ಪಾಲಿಸಿ
1. ಅಲಂಕಾರಿಕ ವಸ್ತುಗಳ ದಾನ ಮುತ್ತೈದೆಯರಿಗೆ ಅಲಂಕಾರಿಕ ವಸ್ತುಗಳೆಂದರೆ ಬಹಳ ಪ್ರೀತಿ. ಸೀತಾ ನವಮಿಯಂದು ತಾಯಿಗೆ ಪೂಜೆ ಮಾಡುವಾಗ 16 ಬಗೆಯ ಅಲಂಕಾರಿಕ ವಸ್ತುಗಳನ್ನು (ಕುಂಕುಮ, ಬಳೆಗಳು, ಕಾಲುಂಗುರ, ಕಾಡಿಗೆ, ಮೆಹೆಂದಿ ಇತ್ಯಾದಿ) ಅರ್ಪಿಸಿ. ಪೂಜೆ ಮುಗಿದ ನಂತರ ಆ ವಸ್ತುಗಳನ್ನು ಮತ್ತೊಬ್ಬ ಮುತ್ತೈದೆಗೆ ದಾನವಾಗಿ ನೀಡಿ. ಹೀಗೆ ಮಾಡುವುದರಿಂದ ದಂಪತಿಗಳ ನಡುವಿನ ಕಲಹಗಳು ದೂರವಾಗುವುದಲ್ಲದೆ, ಪತಿಯ ಆಯಸ್ಸು ಹೆಚ್ಚುತ್ತದೆ ಎಂಬ ನಂಬಿಕೆಯಿದೆ.
2. ಮಂತ್ರಜಪ ಮತ್ತು ಸೀತಾ ಚಾಲೀಸಾಪಠಣ ಮಾತಿನ ದೋಷ ಅಥವಾ ಪರಸ್ಪರ ನಂಬಿಕೆ ಕಡಿಮೆಯಾದಾಗ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಸೀತಾ ನವಮಿಯಂದು ‘ಓಂಪತಿವ್ರತಾಯೈನಮಃ’ ಎಂಬ ಮಂತ್ರವನ್ನು ಸಾಧ್ಯವಾದಷ್ಟು ಹೆಚ್ಚು ಬಾರಿ ಜಪಿಸಿ. ಈ ಮಂತ್ರವು ದಂಪತಿಗಳ ನಡುವೆ ಪರಸ್ಪರ ಗೌರವವನ್ನು ಹೆಚ್ಚಿಸುತ್ತದೆ. ಸಂಜೆ ವೇಳೆ ಮನೆಯಲ್ಲಿ ‘ಸೀತಾ ಚಾಲೀಸಾ’ ಪಠಿಸಿದರೆ ನಕಾರಾತ್ಮಕ ಶಕ್ತಿ ನಶಿಸಿ ಪ್ರಶಾಂತತೆ ಲಭಿಸುತ್ತದೆ.
3. ರಕ್ಷಾಸೂತ್ರದಿಂದ ಬಾಂಧವ್ಯ ಗಟ್ಟಿ ನಿಮ್ಮ ಸಂಬಂಧದ ಮೇಲೆ ಯಾರಾದರೂ ದೃಷ್ಟಿ ಹಾಕಿದ್ದಾರೆ ಅಥವಾ ಮನಸ್ತಾಪಗಳು ಹೆಚ್ಚಿವೆ ಎಂದು ಅನಿಸಿದರೆ, ಸೀತಾ ನವಮಿಯಂದು ದಂಪತಿಗಳು ಸೀತಾಮಾತೆಯನ್ನು ಸ್ಮರಿಸುತ್ತಾ ಪರಸ್ಪರ ಕೆಂಪು ದಾರವನ್ನು (ಕಂಕಣ) ಕಟ್ಟಿಕೊಳ್ಳಿ. ನಂತರ ತಾಯಿಗೆ ಕೆಂಪು ಹೂವುಗಳಿಂದ ಅಲಂಕಾರ ಮಾಡಿ. ಇದು ಕೇವಲ ದಾರವಲ್ಲ, ನಿಮ್ಮಿಬ್ಬರ ಭಾವನೆಗಳನ್ನು ಬೆಸೆಯುವ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ.
4. ಶೀಘ್ರ ವಿವಾಹಕ್ಕಾಗಿ ಹಸಿ ಅರಿಶಿನದ ಪರಿಹಾರ ವಿವಾಹ ಪ್ರಯತ್ನಗಳು ಕೈಗೂಡದವರು ಅಥವಾ ವಿವಾಹದ ನಂತರ ಅದೃಷ್ಟ ಒಲಿಯುತ್ತಿಲ್ಲ ಎನ್ನುವವರು ಈ ಪರಿಹಾರ ಮಾಡಬಹುದು. ಒಂದು ಹಳದಿ ಬಟ್ಟೆಯಲ್ಲಿ ಏಳು ಹಸಿ ಅರಿಶಿನದ ಕೊಂಬುಗಳನ್ನು ಕಟ್ಟಿ ಸೀತಾಮಾತೆಯ ಪಾದದ ಬಳಿ ಇಡಿ. ತಾಯಿಗೆ ಹಳದಿ ಬಣ್ಣವೆಂದರೆ ಅತೀವ ಪ್ರೀತಿ. ಈ ಪರಿಹಾರದಿಂದ ಜಾತಕದ ದೋಷಗಳು ನಿವಾರಣೆಯಾಗಿ ಶೀಘ್ರವೇ ಶುಭವಾರ್ತೆ ಕೇಳುವಿರಿ.
5. ಕನ್ಯಾಪೂಜೆಯಿಂದ ಸಕಲ ವಿಘ್ನಗಳ ನಿವಾರಣೆ ಸೀತಾಮಾತೆಯು ಕನ್ಯಾ ರೂಪದಲ್ಲೇ ಜನಕ ಮಹಾರಾಜನಿಗೆ ಲಭಿಸಿದಳು. ಆದ್ದರಿಂದ, ಈ ದಿನ ಪುಟ್ಟ ಹೆಣ್ಣುಮಕ್ಕಳನ್ನು (ಕನ್ಯೆಯರನ್ನು) ಮನೆಗೆ ಕರೆದು ಭೋಜನ ನೀಡಿದರೆ ಅದು ಸಾಕ್ಷಾತ್ ಅಮ್ಮನವರಿಗೆ ಸೇವೆ ಸಲ್ಲಿಸಿದಂತೆ. ಅವರಿಗೆ ಹಣ್ಣು ಅಥವಾ ದಕ್ಷಿಣೆ ನೀಡಿ ಆಶೀರ್ವಾದ ಪಡೆಯುವುದರಿಂದ ಮನೆಯ ಕಷ್ಟಗಳು ಮತ್ತು ದಾರಿದ್ರ್ಯ ದೂರವಾಗುತ್ತದೆ.
ಸೀತಾ ನವಮಿಯು ನಮಗೆ ಕಲಿಸುವ ದೊಡ್ಡ ಪಾಠವೆಂದರೆ ‘ಧೈರ್ಯ’. ಎಷ್ಟೇ ಕಷ್ಟಗಳು ಬಂದರೂ ಧರ್ಮವನ್ನು ಬಿಡಬಾರದು ಎಂದು ಆ ತಾಯಿಯ ಜೀವನ ನಮಗೆ ತೋರಿಸಿಕೊಡುತ್ತದೆ. ಈ ಪರಿಹಾರಗಳನ್ನು ಪೂರ್ಣ ವಿಶ್ವಾಸದಿಂದ ಪಾಲಿಸಿ ನಿಮ್ಮ ಸಂಸಾರವನ್ನು ಸೌಭಾಗ್ಯಮಯವಾಗಿಸಿಕೊಳ್ಳಿ.

